ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಅವರ ಮನೆಯಲ್ಲಿ ಈಗ ಮದುವೆ ಸಂಭ್ರಮ ಜೋರಾಗಿದೆ. ಮನೆಯಲ್ಲೇ ನಡೆದ ಅರಿಶಿಣ ಶಾಸ್ತ್ರದ ಫೋಟೋಗಳು ವೈರಲ್ ಆಗುತ್ತಿದ್ದಂತೆ, ಸುದೀಪ್ ಮಗಳು ಸಾನ್ವಿ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತು. ಆದರೆ ಈ ಸುದ್ದಿಯಲ್ಲಿ ಯಾವುದೇ ಸತ್ಯವಿಲ್ಲ.ವಾಸ್ತವದಲ್ಲಿ ಮದುವೆಯಾಗುತ್ತಿರುವುದು ಸುದೀಪ್ ಅವರ ಅಕ್ಕ ಸುರೇಖಾ ಅವರ ಮಗ ತಾರಣ್ ಸುರೇಶ್. ತಾರಣ್ ಮತ್ತು ತಾರಿಣಿ ಈಗಾಗಲೇ ಶ್ರೀಲಂಕಾದಲ್ಲಿ ನಡೆದ ಡೆಸ್ಟಿನೇಷನ್ ಮದುವೆಯಲ್ಲಿ ವೈವಾಹಿಕ ಬಂಧನಕ್ಕೆ ಒಳಗಾದ ದಂಪತಿಗಳು. ಇವರಿಗಾಗಿ ಡಿಸೆಂಬರ್ 4ರಂದು ಪ್ಯಾಲೆಸ್ ಗ್ರೌಂಡ್, ಚಾಮರವಜ್ರದಲ್ಲಿ ರಿಸೆಪ್ಶನ್ ಆಯೋಜಿಸಲಾಗಿದೆ. ಸಂಜೆ 7 ಗಂಟೆಯಿಂದ ಕಾರ್