ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಮತ್ತೊಂದು ಕುತೂಹಲಕಾರಿ ಬೆಳವಣಿಗೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿ ನಡೆದ ಕ್ರಾಸ್ ಎಕ್ಸಾಮಿನೇಶನ್ ವೇಳೆ ಪೊಲೀಸರ ತನಿಖೆ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸಿವೆ. ಪ್ರಕರಣದಲ್ಲಿ ಸೀಜ್ ಮಾಡಲಾಗಿದ್ದ ಕಾರು ಹಾಗೂ ಇತರ ವಸ್ತುಗಳ ಮಹಜರ್ ಮಾಡುವ ವೇಳೆ ಪೊಲೀಸರು ರೌಡಿ ಶೀಟರ್ ಆಗಿರುವ ವ್ಯಕ್ತಿಯನ್ನು ಸಾಕ್ಷಿಯಾಗಿ ಬಳಸಿದ್ದಾರೆ ಎಂಬ ವಿಚಾರ ಕೋರ್ಟ್‌ನಲ್ಲಿ ಬೆಳಕಿಗೆ ಬಂದಿದೆ. Arayna Women's Cotton Printed Floral Straight Kurta with Palazzo Pants and Dupatta
ಮಹಜರ್ ಸಮಯದಲ್ಲಿ ‘ಶಿವು’ ಎಂಬ ವ್ಯಕ್ತಿಯ ಸಹಿಯನ್ನು ಸಾಕ್ಷಿಯಾಗಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಶಿವು ಎಂಬಾತ ರೌಡಿ ಶೀಟರ್ ಆಗಿದ್ದು, ತನ್ನ ವಿರುದ್ಧ ಮೂರು ಕ್ರಿಮಿನಲ್ ಪ್ರಕರಣಗಳು ಇದ್ದವು ಎಂದು ಕೋರ್ಟ್ ಮುಂದೆ ಒಪ್ಪಿಕೊಂಡಿದ್ದಾನೆ. ಈ ವಿಷಯವನ್ನು ದರ್ಶನ ಪರ ವಕೀಲ ಸುಧನ್ವ ಅವರು ವಾದ ಮಂಡನೆ ವೇಳೆ ಗಮನಕ್ಕೆ ತಂದರು.
ಕಾನೂನು ಪ್ರಕಾರ ಮಹಜರ್ ಅಥವಾ ಇತರ ತನಿಖಾ ಪ್ರಕ್ರಿಯೆಗಳ ವೇಳೆ ಗೌರವಾನ್ವಿತ ಮತ್ತು ವಿಶ್ವಾಸಾರ್ಹ ವ್ಯಕ್ತಿಗಳನ್ನು ಸಾಕ್ಷಿಗಳಾಗಿ ಬಳಸಬೇಕು. ಆದರೆ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಯನ್ನು ಸಾಕ್ಷಿಯಾಗಿ ಬಳಸಿರುವುದರಿಂದ ಪೊಲೀಸರ ನಡೆ ಪ್ರಶ್ನೆಗೆ ಒಳಪಟ್ಟಿದೆ. ಈ ವಿಚಾರದ ಮೇಲೆ ಕೋರ್ಟ್ ಕೂಡ ಗಂಭೀರವಾಗಿ ಗಮನ ಹರಿಸಿದೆ ಎಂದು ತಿಳಿದುಬಂದಿದೆ. "ಯೋಗರಾಜ್ ಬಟ್ ಲಿರಿಕ್ಸ್; ಯಶ್ ನಟನೆಯ ‘ಟಾಕ್ಸಿಕ್’ ಮೊದಲ ಹಾಡು ‘ತಬಾಹಿ’ ಬಿಡುಗಡೆ..! ಇಲ್ಲಿದೆ ಮಾಹಿತಿ
ಇದಕ್ಕೂ ಮೊದಲು ಮಹಜರ್ ಪ್ರಕ್ರಿಯೆಯ ಬಗ್ಗೆ ಕೂಡ ಅನುಮಾನಗಳು ವ್ಯಕ್ತವಾಗಿದ್ದವು. ಮಹಜರ್ ಬೇರೆ ಸ್ಥಳದಲ್ಲಿ ನಡೆದಿದ್ದರೂ ಅದನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ನಡೆದಂತೆ ದಾಖಲು ಮಾಡಲಾಗಿದೆ ಎಂಬ ಆರೋಪ ಕೂಡ ಕೇಳಿಬಂದಿತ್ತು. ಈಗ ರೌಡಿ ಶೀಟರ್ ಅನ್ನು ಸಾಕ್ಷಿಯಾಗಿ ಬಳಸಿದ ವಿಚಾರ ಬೆಳಕಿಗೆ ಬಂದಿರುವುದರಿಂದ ತನಿಖಾಧಿಕಾರಿಗಳಿಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಈ ಬೆಳವಣಿಗೆಗಳು ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಗೆ ಹೊಸ ತಿರುವು ನೀಡಿದ್ದು, ಮುಂದಿನ ದಿನಗಳಲ್ಲಿ ಕೋರ್ಟ್‌ನಲ್ಲಿ ಇನ್ನಷ್ಟು ಪ್ರಮುಖ ವಿಚಾರಗಳು ಬಹಿರಂಗವಾಗುವ ನಿರೀಕ್ಷೆ ಇದೆ.