ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಮೊದಲ ಹಾಡು ‘ತಬಾಹಿ’ ಬಿಡುಗಡೆಯಾಗಿದೆ. ಹೋಳಿ ಹಬ್ಬದ ಹರ್ಷದ ನಡುವೆ ಈ ಹಾಡು ಪ್ರೇಕ್ಷಕರ ಗಮನ ಸೆಳೆದಿದೆ. ‘ತಬಾಹಿ’ ಹಾಡು ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ರಿಲೀಸ್ ಆಗಿದ್ದು, ಯೋಗರಾಜ್ ಭಟ್ ಸಾಹಿತ್ಯ ಬರೆಯಲಾಗಿದೆ. ಹಾಡಿನ ಸಂಗೀತವನ್ನು ಖ್ಯಾತ ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ತಯಾರಿಸಿದ್ದಾರೆ.Arayna Women's Cotton Printed Floral Straight Kurta with Palazzo Pants and Dupatta
‘ಟಾಕ್ಸಿಕ್’ ಚಿತ್ರದಲ್ಲಿ ಒಟ್ಟೂ ಆರು ಹಾಡುಗಳಿವೆ. ಈ ಚಿತ್ರದ ಸಂಗೀತಕ್ಕೆ ಐವರು ಸಂಗೀತ ನಿರ್ದೇಶಕರು ಕೆಲಸ ಮಾಡಿದ್ದಾರೆ. ವಿಶಾಲ್ ಮಿಶ್ರಾ ನಾಲ್ಕು ಹಾಡುಗಳಿಗೆ ಸಂಗೀತ ನೀಡಿದ್ದು, ತನಿಷ್ಕ್ ಬಾಗ್ಜಿ, ಅರ್ಸ್ಲಾನ್ ನಿಜಾಮಿ, ಫಹೀಮ್ ಅಬ್ದುಲ್ಲಾ ಮತ್ತು ರವಿ ಬಸ್ರೂರು ಇತರ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ.ಇದನ್ನು ಓದಿ:ಬೆಂಗಳೂರು ಸ್ವಚ್ಚತಾ ಅಭಿಯಾನಕ್ಕೆ ಮಂಜಮ್ಮ ಜೋಗತಿ, ಅನಿರುದ್ದ್ ಹಾಗೂ ಅರುಣ್ ಪೈ ರಾಯಭಾರಿಗಳು..!
ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರದಲ್ಲಿ ನಯನತಾರಾ, ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಬಹುತೇಕ ಶೂಟಿಂಗ್ ಮುಗಿದಿದ್ದು, ಸೆನ್ಸಾರ್ ಪ್ರಕ್ರಿಯೆ ಹತ್ತಿರದಲ್ಲಿದೆ. ಪ್ರೇಕ್ಷಕರು ಚಿತ್ರದ ಬಿಡುಗಡೆ ದಿನದ ಅಂದಾಜು ಗಳಿಕೆಗೆ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ.