Skip to main content
ವಿಡಿಯೋ
cinema

ಬೆಂಗಳೂರು ಸ್ವಚ್ಚತಾ ಅಭಿಯಾನಕ್ಕೆ ಮಂಜಮ್ಮ ಜೋಗತಿ, ಅನಿರುದ್ದ್ ಹಾಗೂ ಅರುಣ್ ಪೈ ರಾಯಭಾರಿಗಳು..!

By Ram Chethan
ಬೆಂಗಳೂರು ಸ್ವಚ್ಚತಾ ಅಭಿಯಾನಕ್ಕೆ ಮಂಜಮ್ಮ ಜೋಗತಿ, ಅನಿರುದ್ದ್  ಹಾಗೂ ಅರುಣ್ ಪೈ ರಾಯಭಾರಿಗಳು..!

ಬೆಂಗಳೂರು ನಗರದಲ್ಲಿ ಕಸ ವಿಂಗಡಣೆ, ಸರಿಯಾದ ಕಸ ವಿಲೇವಾರಿ ಹಾಗೂ ಸ್ವಚ್ಚತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ಮೂರು ಗಣ್ಯರನ್ನು ಸ್ವಚ್ಚತಾ ರಾಯಭಾರಿಗಳಾಗಿ ನೇಮಿಸಿದೆ. ಪದ್ಮಶ್ರೀ ಮಂಜಮ್ಮ ಜೋಗತಿ, ನಟ ಅನಿರುದ್ದ್ ಜತ್ಕಾರ್ ಮತ್ತು ಸಾಮಾಜಿಕ ಕಾರ್ಯಕರ್ತ ಅರುಣ್ ಪೈ ನಗರವನ್ನು ಸ್ವಚ್ಚವಾಗಿಡುವ ಸಂದೇಶವನ್ನು ಜನರಿಗೆ ತಲುಪಿಸಲಿದ್ದಾರೆ.

ಬೆಂಗಳೂರು ನಗರದಲ್ಲಿ ಕಸ ನಿರ್ವಹಣೆ ಮತ್ತು ಸ್ವಚ್ಚತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ (BSWML) ಪ್ರಮುಖ ನಿರ್ಧಾರ ಕೈಗೊಂಡಿದೆ. ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ, ನಟ ಅನಿರುದ್ದ್ ಜತ್ಕಾರ್ ಹಾಗೂ ಸಾಮಾಜಿಕ ಕಾರ್ಯಕರ್ತ ಅರುಣ್ ಪೈ ಅವರನ್ನು ಸ್ವಚ್ಚತಾ ರಾಯಭಾರಿಗಳಾಗಿ ನೇಮಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ.ಇದನ್ನು ಓದಿ:‘ದಿ ಕೇರಳ ಸ್ಟೋರಿ 2’: ಮೊದಲ ದಿನ ಕೇವಲ 75 ಲಕ್ಷ, ವಾರಾಂತ್ಯದಲ್ಲಿ ಕೋಟಿ ಕೋಟಿ ಕಲೆಕ್ಷನ್! ಇಲ್ಲಿದೆ ಸಂಪೂರ್ಣ ಮಾಹಿತಿ

ನಗರದಲ್ಲಿ ಕಸ ವಿಂಗಡಣೆ, ಸರಿಯಾದ ರೀತಿಯಲ್ಲಿ ಕಸ ವಿಲೇವಾರಿ ಹಾಗೂ ಪರಿಸರ ಸ್ವಚ್ಚತೆಯ ಮಹತ್ವವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಈ ನೇಮಕ ಮಾಡಲಾಗಿದೆ. ಜನಸಾಮಾನ್ಯರಲ್ಲಿ ಜಾಗೃತಿ ಹೆಚ್ಚಿಸಲು ಈ ರಾಯಭಾರಿಗಳು ವಿವಿಧ ಕಾರ್ಯಕ್ರಮಗಳು ಮತ್ತು ಅಭಿಯಾನಗಳಲ್ಲಿ ಭಾಗವಹಿಸಲಿದ್ದಾರೆ.

ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಕಸದ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆ, ಜನರು ಮನೆಯಲ್ಲೇ ಒದ್ದೆ ಮತ್ತು ಒಣ ಕಸವನ್ನು ಬೇರ್ಪಡಿಸಿ ನೀಡುವಂತೆ ಪ್ರೇರೇಪಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಪರಿಸರ ಸಂರಕ್ಷಣೆ ಮತ್ತು ಸ್ವಚ್ಚ ನಗರ ನಿರ್ಮಾಣಕ್ಕಾಗಿ ಸಾರ್ವಜನಿಕರು ಸಹಕರಿಸಬೇಕು ಎಂದು ಸಂಸ್ಥೆ ಮನವಿ ಮಾಡಿದೆ.Arayna Women's Cotton Printed Floral Straight Kurta with Palazzo Pants and Dupatta

ಸ್ವಚ್ಚತೆ ಬಗ್ಗೆ ಜನರಲ್ಲಿ ಉತ್ತಮ ಸಂದೇಶ ಹರಡುವಲ್ಲಿ ಈ ರಾಯಭಾರಿಗಳ ಪಾತ್ರ ಮಹತ್ವದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.