Skip to main content
ವಿಡಿಯೋ
1/3
general

ರೆಡ್‌ಕಾರ್ಪೆಟ್‌ ಮೇಲೆ ಚಹಾ ಮಾರುತ್ತಾ ಹಾದುಹೋದ ಪ್ರಧಾನಿ ಮೋದಿ - ಎಐ ವಿಡಿಯೋ ವೈರಲ್‌!

By Shravanthi R
ರೆಡ್‌ಕಾರ್ಪೆಟ್‌ ಮೇಲೆ ಚಹಾ ಮಾರುತ್ತಾ ಹಾದುಹೋದ ಪ್ರಧಾನಿ ಮೋದಿ - ಎಐ ವಿಡಿಯೋ ವೈರಲ್‌!

ಎಐ ಕ್ರಾಂತಿಯಿಂದ ವೈರಲ್‌ ವಿಡಿಯೋಗಳ ಸುರಿಮಳೆಗರೆಯುತ್ತಿದೆ. ಇದೀಗ ಟ್ರೆಂಡಿಂಗ್‌ನಲ್ಲಿ ಚರ್ಚೆಗೀಡು ಮಾಡುತ್ತಿದೆ ಪ್ರಧಾನಿ ನರೇಂದ್ರ ಮೋದಿಯವರ ವೈರಲ್‌ ವಿಡಿಯೋ.

ಪ್ರಧಾನಿ ನರೇಂದ್ರ ಮೋದಿಯವರು ರೆಡ್‌ ಕಾರ್ಪೆಟ್‌ ಕಾರ್ಯಕ್ರಮವೊಂದರಲ್ಲಿ ಚಹಾ ಮಾರಾಟ ಮಾಡುತ್ತಿರುವಂತೆ ಎಐ ವಿಡಿಯೋ ವೈರಲ್‌ ಆಗಿದೆ. ಕಾಂಗ್ರೆಸ್‌ ಇದನ್ನು ಹಂಚಿಕೊಂಡಿದೆ ಎನ್ನಲಾಗಿರುವ ಈ ವಿಡಿಯೋವು, ಇದೀಗ ರಾಜಕೀಯ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. 

ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಲಾದ ಈ ವಿಡಿಯೋವು ಟ್ವೀಟ್‌ ವಾರ್‌ಗೆ ಸಾಕ್ಷಿಯಾಗಿದೆ. ಇದು ಪ್ರಧಾನಿ ಹುದ್ದೆಗೆ ಆಗುತ್ತಿರುವ ಅವಮಾನ, ಅವರ ಸ್ಥಾನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಉದ್ದೇಶಿತ ವಿಡಿಯೋ ಇದಾಗಿದೆ ಎಂದು ಬಿಜೆಪಿಯು ಖಂಡಿಸಿದೆ ಎನ್ನಲಾಗಿದೆ. Lacoste Lc33 Qtz Basic Sunray Round Dial Women's Watch

ಪ್ರಧಾನಿಗಳು ವಿದೇಶ ಪ್ರವಾಸ ಕೈಗೊಂಡಿರುವ ಸನ್ನಿವೇಶದ ಕಾರ್ಯಕ್ರಮವೊಂದರಲ್ಲಿ ಕೈಯಲ್ಲಿ ಚಹಾದ ಕೆಟಲ್‌ ಹಿಡಿದು “ಚಾಯ್‌ ಚಾಹಿಯೆ” ಎಂದು ಅವರ ಧ್ವನಿಯನುಸಾರ ಚಹಾ ಮಾರಾಟ ಮಾಡುತ್ತಲಿರುವುದನ್ನು ತೋರಿರುವ ಈ ಎಐ ಆಧಾರಿತ ವಿಡಿಯೋವು ಕಾಂಗ್ರೆಸ್‌ ವಿರುದ್ದ ವಾಕ್ಸಮರ ನಡೆಯುವಂತೆ ಮಾಡಿದೆ ಎನ್ನಲಾಗಿದೆ. ಇದನ್ನೂ ಓದಿ: ಹೊಸ ಉದ್ದಿಮೆ ಶುರು ಮಾಡುತ್ತೀರಾ? ಈ ಮೂಲಭೂತ ಮಾಹಿತಿಗಳನ್ನು ತಿಳಿಯುವುದು ಅತ್ಯವಶ್ಯಕ!