Skip to main content
ವಿಡಿಯೋ
1/2
politics

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋತಿಗಳ ಕಾಟ: ಸರ್ಕಾರಿ ಆಸ್ಪತ್ರೆ ಎಂಬ ಕಾರಣಕ್ಕೆಇಷ್ಟು ಬೇಜವಾಬ್ದಾರಿಯೇ?

By Gireesh Vasishta
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋತಿಗಳ ಕಾಟ: ಸರ್ಕಾರಿ ಆಸ್ಪತ್ರೆ ಎಂಬ ಕಾರಣಕ್ಕೆಇಷ್ಟು ಬೇಜವಾಬ್ದಾರಿಯೇ?

ಬೆಂಗಳೂರಿನ ಜನಪ್ರಿಯ ಸರ್ಕಾರಿ ಆಸ್ಪತ್ರೆಯಾದ ವಿಕ್ಟೋರಿಯಾ ಆಸ್ಪತ್ರೆಯು ಅವ್ಯವಸ್ಥೆಗಳಿಂದ ಕೂಡಿದೆ ಎಂದು ವರದಿಯಾಗಿದೆ. ಏಕೆಂದರೆ ಸರಿಯಾದ ವ್ಯವಸ್ಥೆಗಳಿಲ್ಲದೆ ಮಂಗಗಳು ಎಲ್ಲೆಂದರಲ್ಲಿ ಕಾಣ ಸಿಗುತ್ತಿದೆ. ಹಾಗೂ ಈ ಮಂಗಗಳಿಂದ ರೋಗಿಗಳಿಗೆ ಮತ್ತು ಅಲ್ಲಿ ಓಡಾಡುವ ರೋಗಿಗಳ ಸಂಬಂಧಿಕರಿಗೆ ತೊಂದರೆ ಉಂಟಾಗುತ್ತಿದೆ. ರೋಗಿಗಳಿಗೆ ತಂದಿರುವ ಹಣ್ಣು, ಹಂಪಲು ಮತ್ತು ಇತ್ಯಾದಿ ಚೀಲಗಳ ಮೇಲೆ ದಿಡೀರನೆ ಈ ಕೋತಿಗಳು ದಾಳಿ ಮಾಡುತ್ತಿವೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋತಿಗಳ ಕಾಟ: ಸರ್ಕಾರಿ ಆಸ್ಪತ್ರೆ ಎಂಬ ಕಾರಣಕ್ಕೆಇಷ್ಟು ಬೇಜವಾಬ್ದಾರಿಯೇ?

ವಿಕ್ಟೋರಿಯಾ ಆಸ್ಪತ್ರೆಯು ಬೆಂಗಳೂರಿನಲ್ಲಿರುವ ಒಂದು ಪ್ರಮುಖ ಸರ್ಕಾರಿ ಆಸ್ಪತ್ರೆಯಾಗಿದೆ. ಇದು ಶತಮಾನಕ್ಕೂ ಹೆಚ್ಚಿನ ಇತಿಹಾಸವನ್ನು ಹೊಂದಿದೆ ಮತ್ತು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ (BMCRI) ಸಂಯೋಜಿತವಾದ ಒಂದು ಶಿಕ್ಷಣ ಆಸ್ಪತ್ರೆಯಾಗಿದೆ.BULLMER Striped Textured Printed Polo Neck Fullsleeve T-Shirt with Rib for Men

ಬೆಂಗಳೂರಿನ ಜನಪ್ರಿಯ ಸರ್ಕಾರಿ ಆಸ್ಪತ್ರೆಯಾದ ವಿಕ್ಟೋರಿಯಾ ಆಸ್ಪತ್ರೆಯು ಅವ್ಯವಸ್ಥೆಗಳಿಂದ ಕೂಡಿದೆ ಎಂದು ವರದಿಯಾಗಿದೆ. ಏಕೆಂದರೆ ಸರಿಯಾದ ವ್ಯವಸ್ಥೆಗಳಿಲ್ಲದೆ ಮಂಗಗಳು ಎಲ್ಲೆಂದರಲ್ಲಿ ಕಾಣ ಸಿಗುತ್ತಿದೆ. ಹಾಗೂ ಮಂಗಗಳಿಂದ ರೋಗಿಗಳಿಗೆ ಮತ್ತು ಅಲ್ಲಿ ಓಡಾಡುವ ರೋಗಿಗಳ ಸಂಬಂಧಿಕರಿಗೆ ತೊಂದರೆ ಉಂಟಾಗುತ್ತಿದೆ. ರೋಗಿಗಳಿಗೆ ತಂದಿರುವ ಹಣ್ಣು, ಹಂಪಲು ಮತ್ತು ಇತ್ಯಾದಿ ಚೀಲಗಳ ಮೇಲೆ ದಿಡೀರನೆ ಕೋತಿಗಳು ದಾಳಿ ಮಾಡುತ್ತಿವೆ.

ಇಷ್ಟೆಲ್ಲಾ ಅವ್ಯವಸ್ಥೆಗಳಿದ್ದರೂ ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇರುವುದು ಅಲ್ಲಿರುವ ರೋಗಿಗಳು ಮತ್ತು ಅಲ್ಲಿನ ಸಾರ್ವಜನಿಕರ ದೊಡ್ಡ ಪ್ರಶ್ನೆಯಾಗಿದೆ. ಅಲ್ಲಿ ಕೆಲಸ ಮಾಡುವ ಅಧಿಕಾರಿಗಳು ಬಗ್ಗೆ ಸರ್ಕಾರದ ಗಮನಕ್ಕೆ ತರದೆ ಇರುವುದು ಚರ್ಚೆಗೆ ಗ್ರಾಸವಾಗಿದೆ. ಸಹಜವಾಗಿ ಸರ್ಕಾರಿ ಆಸ್ಪತ್ರೆಯಾದ ಕಾರಣ ಬೇಕಾಬಿಟ್ಟಿ ವ್ಯವಸ್ಥೆ ಇರುವುದು ಮಾಮೂಲಿಯಾಗಿ ಕಾಣುತ್ತದೆ. ಹೀಗಾಗಿ ಅಲ್ಲಿ ಇನ್ಯಾವ ರೀತಿಯ ಚಿಕಿತ್ಸೆಯನ್ನು ಮತ್ತು ಸೌಲಭ್ಯವನ್ನು ಬಡ ಜನರು ಪಡೆಯಬಹುದು ಎಂಬುದು ಯಕ್ಷ ಪ್ರಶ್ನೆಯಾಗಿದೆ.

ವಿಕ್ಟೋರಿಯಾ ಆಸ್ಪತ್ರೆಯ ಸಿ- ಬ್ಲಾಕ್ ನಲ್ಲಿ ಮಂಗಳ ಕಾಟ ಹೆಚ್ಚಾಗಿದ್ದು ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ಬೆಡ್ ಮೇಲೆ ಕುಳಿತು ಕಾಟ ಕೊಡುತ್ತಿವೆ ಕೋತಿಗಳು ಅದರಲ್ಲೂ ಕೆಲವೊಂದು ಬಾರಿ ಮಹಿಳೆಯರ ಮೇಲೆ ಎರಗಿ ಕೆಳಗೆ ಬೀಳಿಸಿದ ಉದಾಹರಣೆಗಳು ಇದೆ ಎಂದು ಹೇಳುತ್ತಾರೆ ಅಲ್ಲಿನ ರೋಗಿಗಳು, ಹೀಗಾಗಿ ಅಲ್ಲಿನ ರೋಗಿಗಳು ಹಾಗೂ ಸಾರ್ವಜನಿಕರು ಚಿಂತೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರಿಯಾದ ಗ್ರಿಲ್‌ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕಿದೆ.ಓಲೈಕೆ ಪಿತಾಮಹ ಸಿದ್ದರಾಮಯ್ಯ, ಬ್ರದರ್ಸ್‌ಗಳ ನೆಮ್ಮದಿಗೆ ಭಂಗವಿಲ್ಲ, ಹಿಂದೂಗಳಿಗೆ ಉಳಿಗಾಲವಿಲ್ಲ: ವೈರಲ್‌ ಆದ ಬಿಜೆಪಿ ಪೋಸ್ಟ್‌