ಭಾರತ ಮತ್ತು ಅಮೆರಿಕ ಈ ಹಿಂದೆ ಉತ್ತಮ ಸ್ನೇಹಿತರಾಗಿದ್ದರು. ಆದರೆ ಯಾವಾಗ ಭಾರತ ಅಮೆರಿಕ ಹೇಳಿದ ಹೇಳಿಕೆಗಳನ್ನು ನಿರಾಕರಿಸಿ ರಷ್ಯಾದೊಂದಿಗೆ ಆಯಿಲ್‌ನ ಆಮದು ಮತ್ತು ರಫ್ತಿನಲ್ಲಿ ಮುಂದುವರೆಯಿತೊ ಆಗ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಸುಂಕಾಘಾತವನ್ನು ನೀಡಿದರು. ನಂತರ ಆಗಿದ್ದೇ ಬೇರೆ, ಏಕೆಂದರೆ ಅಮೆರಿಕ ನೀಡಿದ ಸುಂಕಾಘಾತವನ್ನು ಸ್ವಾಗತಿಸಿದ ಮೋದಿ ಬೇರೆಯದ್ದೆ ಬಲೆಯನ್ನು ಹಣೆದಿದ್ದರೂ ಎಂದರೆ ತಪ್ಪಿಲ್ಲ.ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋತಿಗಳ ಕಾಟ: ಸರ್ಕಾರಿ ಆಸ್ಪತ್ರೆ ಎಂಬ ಕಾರಣಕ್ಕೆಇಷ್ಟು ಬೇಜವಾಬ್ದಾರಿಯೇ?
ಈ ಹಿಂದೆ ಜಾಗತಿಕ ಮಟ್ಟದಲ್ಲಿ ಮತ್ತು ಆಂತರಿಕವಾಗಿಯೂ ಬದ್ಧ ವೈರಿಯಂತಿದ್ದ ಚೀನಾ ದೇಶದೊಂದಿಗೆ ಮಿತ್ರತ್ವವನ್ನು ಬಲಪಡಿಸಿದರು. ಹಾಗೂ ತನ್ನ ಸ್ನೇಹಿತ ದೇಶವಾದ ರಷ್ಯಾದೊಂದಿಗೂ ಸ್ನೇಹವನ್ನು ಮುಂದುವರಿಸಿ, ಭಾರತ, ರಷ್ಯಾ, ಚೀನಾ ಈ ಮೂರು ದೇಶಗಳ ಅಧ್ಯಕ್ಷರ ಜೊತೆ ಸಭೆ ಮಾಡಿ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾದರು. ತಮ್ಮ ಈ ನಡೆಯಿಂದ ಮೋದಿ ಎಲ್ಲಾ ದೇಶಗಳ ಗಮನ ಸೆಳೆದಿದ್ದರು. ಹೀಗಾಗಿ ಸಾಧಾರಣವಾಗಿ ಇದರಿಂದ ಸ್ವಲ್ಪ ದೇಶಗಳು ಗಾಬರಿ ಆಗಿದ್ದವು.PALAY® Straw Hat Sun Hats for Women,Wide Brim Cap Beach Hat for Women Stylish UV Protection Cap,Summer Packable Travel Sun Visor Hat - UPF 50+
ಈ ಮೂರು ದೇಶಗಳು ಒಂದಾದ ಮೇಲೆ ಅಮೆರಿಕಾದ ಅವಶ್ಯಕತೆ ಭಾರತಕ್ಕೆ ಇಲ್ಲ ಎಂದು ದೊಡ್ಡಣ್ಣನಿಗೆ ಅನಿಸಿರಬಹುದು ಹೀಗಾಗಿ ಮತ್ತೆ ಭಾರತಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾತುಕತೆಗೆ ಸಿದ್ದ ಎಂದು ಅವರ ಸೋಶಿಯಲ್ ಟ್ರೂತ್ ಅಕೌಂಟ್ ನಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಮೋದಿಯವರು ಸಹ ಪ್ರತಿಕ್ರಿಯೆ ನೀಡಿದ್ದು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮೋದಿಅವರ ಎಕ್ಸ್ ಖಾತೆಯ ಮಾಹಿತಿ:
ಭಾರತ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳು ಆತ್ಮೀಯ ಸ್ನೇಹಿತರು ಮತ್ತು ಸ್ವಾಭಾವಿಕ ಪಾಲುದಾರರು. ನಮ್ಮ ವಾಣಿಜ್ಯ ಮಾತುಕತೆಗಳು ಭಾರತ-ಅಮೆರಿಕ ಸಹಭಾಗಿತ್ವದ ಅಪರಿಮಿತ ಸಾಮರ್ಥ್ಯವನ್ನು ಅನಾವರಣಗೊಳಿಸಲು ದಾರಿ ಮಾಡಿಕೊಡುತ್ತವೆ ಎಂಬ ವಿಶ್ವಾಸ ನನಗಿದೆ. ನಮ್ಮ ತಂಡಗಳು ಈ ಚರ್ಚೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಕೆಲಸ ಮಾಡುತ್ತಿವೆ. ಅಧ್ಯಕ್ಷ ಟ್ರಂಪ್ ಅವರೊಂದಿಗೆ ಮಾತನಾಡಲು ನಾನು ಎದುರು ನೋಡುತ್ತಿದ್ದೇನೆ. ನಮ್ಮ ಜನರಿಗೆ ಉಜ್ವಲ ಮತ್ತು ಹೆಚ್ಚು ಸಮೃದ್ಧ ಭವಿಷ್ಯವನ್ನು ನೀಡಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ.