Skip to main content
ವಿಡಿಯೋ
1/2
crime

ನಿರಂತರ ಕಾಡುತ್ತಿರುವ ರ್ಯಾಗಿಂಗ್‌ ಭೂತ - ವಿಕೃತಿ ಹಂತಕ್ಕೆ ತಲುಪಿದ್ಯಾಕೆ ?!

By Vinutha U
ನಿರಂತರ ಕಾಡುತ್ತಿರುವ ರ್ಯಾಗಿಂಗ್‌ ಭೂತ - ವಿಕೃತಿ ಹಂತಕ್ಕೆ ತಲುಪಿದ್ಯಾಕೆ ?!

ಇದೇ ನೆಪ ಮಾಡಿಕೊಂಡು ಈ ಸೀನಿಯರ್‌ ಗ್ಯಾಂಗ್‌ 10 ನೇ ತರಗತಿ ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಈ ಸಮಸ್ಯೆಯನ್ನ ಮತ್ತೊಮ್ಮೆ ಪ್ರಾಶುಂಪಾಲರಿಗೆ ಹೇಳಿದರು ಪ್ರಯೋಜನವಾಗಿಲ್ಲ.

ಬೆಂಗಳೂರು - ದಿನೇ ದಿನೇ ಮೆಟ್ರೋ ಪಾಲಿಟನ್‌ ಸಿಟಿ ಬೆಂಗಳೂರು ಬೆಳೆಯುತ್ತಿದೆ . ನಗರದ ಹೊರವಲಯದಲ್ಲೂ ಅಭಿವೃದ್ಧಿ ಕಾಣಬೇಕಿತು. ಆದರೆ, ಬೆಂಗಳೂರು ಹೊರವಲಯದಲ್ಲಿರುವ ಬನ್ನೇರುಘಟ್ಟ ಭಾಗದಲ್ಲಿ ಇದು ಮರೀಚಿಕೆನಾ ಎಂಬ ಅನುಮಾನ ಕಾಡುತ್ತಿದೆ. ಹೌದು, ಬನ್ನೇರುಘಟ್ಟ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಅಮಾನವೀಯ ಘಟನೆಯೊಂದು ದಾಖಲಾಗಿದೆ.

ಕಾಲೇಜು ಹಾಸ್ಟೆಲ್‌ ಒಂದರಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಹೊಸದಾಗಿ ಹತ್ತನೇ ತರಗತಿ ಓದುವ ವಿದ್ಯಾರ್ಥಿಯನ್ನ ರ್ಯಾಗಿಂಗ್‌ ಮಾಡಿದ್ದಾರೆ. ಖಾಸಗಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯ ಬಟ್ಟೆ ಬಿಚ್ಚಿಸಿ ರ್ಯಾಗಿಂಗ್‌ ಮಾಡಲಾಗಿದೆ. ಇದು ವಿದ್ಯಾರ್ಥಿ ಹಾಸ್ಟೆಲ್‌ ಪ್ರವೇಶಿಸಿದ ಮೊದಲ ದಿನವೇ ನಡೆದಿದೆ.

Shining Diva Fashion Jewellery Girls/Women's Black Fabric Lace Chokers Stylish Necklace Combo Set of 7 Pieces (cmb271)

ಇದರಿಂದ ಮತ್ತಷ್ಟು ಬೇಸತ್ತ ಹೊಸ 10 ನೇ ತರಗತಿ ವಿದ್ಯಾರ್ಥಿ ವಾರ್ಡನ್‌ ಹಾಗೂ ಪ್ರಾನ್ಸಿಪಾಲರಿಗೆ ದೂರು ನೀಡಿದ್ದಾರೆ. ಕಡೆಗೆ ಇದು ಸೀನಿಯರ್‌ ರ್ಯಾಗಿಂಗ್‌ ಮಾಡಿದ ವಿದ್ಯಾರ್ಥಿಗಳ ಗುಂಪಿನ ಕೆಂಗಣ್ಣಿಗೆ ಕಾರಣವಾಗಿದೆ. ಇದೇ ನೆಪ ಮಾಡಿಕೊಂಡು ಈ ಸೀನಿಯರ್‌ ಗ್ಯಾಂಗ್‌ 10 ನೇ ತರಗತಿ ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಈ ಸಮಸ್ಯೆಯನ್ನ ಮತ್ತೊಮ್ಮೆ ಪ್ರಾಶುಂಪಾಲರಿಗೆ ಹೇಳಿದರು ಪ್ರಯೋಜನವಾಗಿಲ್ಲ.

ದಸರಾ ಉದ್ಟಾಟನೆ ಅತಿಥಿ ವಿಚಾರ ಬಿಡಿಸದ ಕಗ್ಗಂಟು - ಬಾನು ಮುಷ್ತಾಕ್‌ ಬೇಡ ಎಂದು - ಮೂರು ಪಿಐಎಲ್‌ ಸಲ್ಲಿಕೆ..!

ಕಡೆಗೆ ವಿದ್ಯಾರ್ಥಿ ಪೋಷಕರು ಬಟ್ಟೆ ಬಿಚ್ಚಿಸಿ ಡ್ಯಾನ್ಸ್‌ ಮಾಡಿಸಿ ,ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕೆ ಪೊಲೀಸ್‌ ಠಾಣೆಗೆ ನೇರ ದೂರು ನೀಡಿದ್ದಾರೆ. ಸದ್ಯ ಬನ್ನೇರಘಟ್ಟ ಪೊಲೀಸ್‌ ಠಾಣೆಯಲ್ಲಿ ಐವರು ವಿದ್ಯಾರ್ಥಿಗಳು ಹಾಗೂ ಪ್ರಾಶಂಪಾಲರು ಮತ್ತು ವಾರ್ಡ್‌ನ ವಿರುದ್ಧ ದೂರು ದಾಖಲು ಮಾಡಲಾಗಿದೆ.