Skip to main content
ವಿಡಿಯೋ
1/2
general

ಬೊಮ್ಮನಹಳ್ಳಿ : ಪುರಾತನ ಮುನೇಶ್ವರ ಮೂರ್ತಿಗಳನ್ನ ದ್ವಂಸ ಮಾಡಿದ ಕಿಡಿಗೇಡಿಗಳು..!

By Vinutha U
ಬೊಮ್ಮನಹಳ್ಳಿ : ಪುರಾತನ ಮುನೇಶ್ವರ ಮೂರ್ತಿಗಳನ್ನ ದ್ವಂಸ ಮಾಡಿದ ಕಿಡಿಗೇಡಿಗಳು..!

ಈ ದೇವಸ್ಥಾನವು ಗ್ರಾಮದ ಆರಾಧ್ಯ ದೈವವಾಗಿದ್ದು, ಪ್ರತಿವರ್ಷ ಗ್ರಾಮಸ್ಥರು ವಿಜೃಂಭಣೆಯಿಂದ ಹಬ್ಬವನ್ನು ಆಚರಿಸುತ್ತಾರೆ. ಇಂದು ಬೆಳಿಗ್ಗೆ ಎಂದಿನಂತೆ ಪೂಜೆಗಾಗಿ ಗುಡಿಸಲಿನ ಮಂಟಪಕ್ಕೆ ಬಂದ ಗ್ರಾಮಸ್ಥರು, ಮೂರ್ತಿಗಳು ಒಡದಿರುವ ದೃಶ್ಯ ಕಂಡು ಆಘಾತಕ್ಕೊಳಗಾದರು.

ಬೆಂಗಳೂರು (ಸೆ.11): ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ರೂಪೇನಾ ಅಗ್ರಹಾರದಲ್ಲಿ ಪುರಾತನ ಮುನೇಶ್ವರ ಮೂರ್ತಿಗಳನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ ಆಘಾತಕಾರಿ ಘಟನೆ ನಡೆದಿದೆ. ಈ ದೇವಸ್ಥಾನವು ಗ್ರಾಮದ ಆರಾಧ್ಯ ದೈವವಾಗಿದ್ದು, ಪ್ರತಿವರ್ಷ ಗ್ರಾಮಸ್ಥರು ವಿಜೃಂಭಣೆಯಿಂದ ಹಬ್ಬವನ್ನು ಆಚರಿಸುತ್ತಾರೆ. ಇಂದು ಬೆಳಿಗ್ಗೆ ಎಂದಿನಂತೆ ಪೂಜೆಗಾಗಿ ಗುಡಿಸಲಿನ ಮಂಟಪಕ್ಕೆ ಬಂದ ಗ್ರಾಮಸ್ಥರು, ಮೂರ್ತಿಗಳು ಒಡದಿರುವ ದೃಶ್ಯ ಕಂಡು ಆಘಾತಕ್ಕೊಳಗಾದರು.

ಸರ್ಕಾರಿ ಭೂಮಿಯಲ್ಲಿರುವ ಈ ಐತಿಹಾಸಿಕ ಮಂಟಪದಲ್ಲಿ ದಿನನಿತ್ಯ ಪೂಜೆ ನಡೆಯುತ್ತದೆ. ಪೂರ್ವಜರ ಪದ್ಧತಿಯಂತೆ ಇಂದು ಮೂರ್ತಿಗಳಿಗೆ ಆರತಿ ಬೆಳಗಲು ಬಂದಾಗ, ಮೂರ್ತಿಗಳು ಧ್ವಂಸಗೊಂಡಿರುವುದು ಬೆಳಕಿಗೆ ಬಂದಿದೆ. ಇದರಿಂದ ಗ್ರಾಮದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾಯಿತು. ಆಕ್ರೋಶಗೊಂಡ ಗ್ರಾಮಸ್ಥರು ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

Shining Diva Fashion Jewellery Girls/Women's Black Fabric Lace Chokers Stylish Necklace Combo Set of 7 Pieces (cmb271)

ಶಾಸಕರಿಂದ ತಕ್ಷಣದ ಭೇಟಿ:
ಘಟನೆಯ ಸ್ಥಳಕ್ಕೆ ತಕ್ಷಣ ಭೇಟಿ ನೀಡಿದ ಶಾಸಕ ಸತೀಶ್ ರೆಡ್ಡಿ, “ಇದೊಂದು ಅಮಾನವೀಯ ಕೃತ್ಯ. ಕಿಡಿಗೇಡಿಗಳನ್ನು ಶೀಘ್ರವಾಗಿ ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿಗಳನ್ನು ಕಂಡುಹಿಡಿಯಲು ಪೊಲೀಸರಿಗೆ ಮನವಿ ಮಾಡಿದ್ದೇನೆ,” ಎಂದರು.

ಧರ್ಮಸ್ಥಳ ಪ್ರಕರಣ: ಚಿನ್ನಯ್ಯನ ವಿಚಾರಣೆ ಮುಕ್ತಾಯ..ಆದ್ರೂ ತಪ್ಪದು ಸಂಕಷ್ಟ! ಬಂಧನವಾಗೋದು ಗ್ಯಾರಂಟಿನಾ?

ಮತಾಂಧರ ಕೃತ್ಯವೋ ಅಥವಾ ಭೂಮಾಫಿಯಾದ ಕೈವಾಡವೋ?
ಪುರಾತನ ದೇಗುಲದ ಧ್ವಂಸದ ಹಿಂದೆ ಹಲವು ಅನುಮಾನಗಳು ಕಾಡುತ್ತಿವೆ. ಈ ಕೃತ್ಯದ ಹಿಂದೆ ಮತಾಂಧರಿರಬಹುದೇ ಅಥವಾ ಭೂಮಾಫಿಯಾದ ಕೈವಾಡವಿರಬಹುದೇ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಈ ಮಂಟಪವು ಗ್ರಾಮದ ಐತಿಹಾಸಿಕ ಆರಾಧ್ಯ ಕ್ಷೇತ್ರವಾಗಿದ್ದು, ಪೊಲೀಸರು ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿ ಕಿಡಿಗೇಡಿಗಳನ್ನು ಪತ್ತೆಹಚ್ಚಲು ಕಾರ್ಯಪ್ರವೃತ್ತರಾಗಿದ್ದಾರೆ.