ಧರ್ಮಸ್ಥಳ (ಸೆ. ೧೨): ಧರ್ಮಸ್ಥಳ ಪ್ರಕರಣ ಹಲವು ತಿರುವುಗಳನ್ನು ಕಂಡುಕೊಂಡು ಈಗ ಬುರುಡೆ ಗ್ಯಾಂಗ್‌ನ ಆರೋಪವನ್ನು ಎದುರಿಸುವಂತಾಗಿದೆ. ಮಾಸ್ಕ್ ಧರಿಸಿದ್ದ 'ಮಾಸ್ಕ್ ಮ್ಯಾನ್' ಚಿನ್ನಯ್ಯ ಈಗ ನ್ಯಾಯಾಂಗ ಬಂಧನದಲ್ಲಿದ್ದರೆ, ಗಂಭೀರ ಆರೋಪಗಳನ್ನು ಮಾಡಿದ್ದ ಹೋರಾಟಗಾರರಾದ ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ ಸೇರಿದಂತೆ ಕೆಲವರು ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಈ ನಡುವೆ, ಸೌಜನ್ಯ ಮಾವ ವಿಠಲ್ ಗೌಡರ ವಿಚಾರಣೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಬಂಗ್ಲಗುಡ್ಡದ ರಹಸ್ಯವನ್ನು ಭೇದಿಸಲು ತೊಡಗಿದ್ದಾರೆ.
ಈಗ ಈ ರಹಸ್ಯವನ್ನು ಕಾರ್ಯರೂಪಕ್ಕೆ ತರುವ ಸಲುವಾಗಿ ಎಸ್‌ಐಟಿ ತಂಡ ಗುಪ್ತವಾಗಿ ಬಂಗ್ಲಗುಡ್ಡಕ್ಕೆ ತೆರಳಿ ಶೋಧ ಕಾರ್ಯಾಚರಣೆಯನ್ನು ನಡೆಸಿದೆ. ಎಸ್‌ಐಟಿ ಎಸ್‌ಪಿ ಸೈಮನ್ ನೇತೃತ್ವದಲ್ಲಿ ಬಂಗ್ಲಗುಡ್ಡದ ರಹಸ್ಯವನ್ನು ಕಂಡುಹಿಡಯಲು ಮುಂದಾಗಿದ್ದಾರೆ. ಬಂಗ್ಲಗುಡ್ಡದಲ್ಲಿ ಅಸ್ತಿಪಂಜರಗಳಿವೆ ಎಂಬ ಮಾಹಿತಿಯನ್ನು ತಿಳಿದ ಎಸ್‌ಐಟಿ ಎಸ್‌ಪಿ ಸೈಮನ್ ನೇತೃತ್ವದ ತಂಡ ಗುಪ್ತವಾಗಿ ಬಂಗ್ಲಗುಡ್ಡಕ್ಕೆ ತೆರಳಿ ತೀವ್ರ ಶೋಧ ಕಾರ್ಯವನ್ನು ನಡೆಸಿದೆ. ಈ ಕಾರ್ಯಾಚರಣೆಯಲ್ಲಿ ಅಧಿಕಾರಿಗಳು ಮಾತ್ರ ತೊಡಗಿದ್ದಾರೆ.
ಸರ್ಕಾರಿ ಸಮಾರಂಭಗಳಲ್ಲಿ ಅತಿಥಿಗಳ ಸಂಖ್ಯೆಗೆ ಕಡಿವಾಣ: ವೇದಿಕೆಯ ಮೇಲೆ ಕೇವಲ 9 ಜನರಿಗಷ್ಟೇ ಅವಕಾಶ..!
ಈ ಶೋಧಕಾರ್ಯದಲ್ಲಿ ಹಲವಾರು ಮಹತ್ವದ ಮಾಹಿತಿಗಳು ಸಂಪಾದನೆಗೊಂಡಿವೆ. ಬುರುಡೆ ಎಫ್‌ಎಸ್‌ಎಲ್ ವರದಿ ಬರಲಿದೆ, ಬಂಗ್ಲಗುಡ್ಡ ಕಾಡಿನಲ್ಲಿ ಸುತ್ತಾಡಿ ಮಾಹಿತಿಗಳನ್ನು ಸಂಗ್ರಹಿಸಿದ ಅಧಿಕಾರಿಗಳ ತಂಡ ಎಲ್ಲವನ್ನೂ ದಾಖಲಿಸಿದೆ. ಇದರೊಂದಿಗೆ ವಿಠಲ್ ಗೌಡ ಸೇರಿದಂತೆ ಹಲವರ ವಿಚಾರಣೆಯೂ ಮುಂದುವರಿದಿದೆ. ಈಗಾಗಲೇ ಎಫ್‌ಎಸ್‌ಎಲ್‌ಗೆ ಕಳುಹಿಸಿರುವ ಬುರುಡೆಯ ವರದಿ ಕೆಲವೇ ದಿನಗಳಲ್ಲಿ ಬಂದು ತಲುಪಲಿದೆ. ಈ ವರದಿ ತನಿಖೆಗೆ ಹೊಸ ತಿರುವು ನೀಡುವ ಸಾಧ್ಯತೆ ಇದೆ.
VAIRAGEE Women Soft Rimzim Silk Striped Pattern Ready To Wear Embroidery Saree (2055)
ಚಿನ್ನಯ್ಯ ತಂದ ಬುರುಡೆ ಎಲ್ಲಿದೆ ಎಂಬ ಕುರಿತು ಎಸ್‌ಐಟಿ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ವಿಠಲ್ ಗೌಡ ಹಾಗೂ ಜಯಂತ್ ಟಿ ಅವರ ವಿಚಾರಣೆ ನಡೆಸಲಾಗುತ್ತಿದೆ. ಈಗಾಗಲೇ ವಿಠಲ್ ಗೌಡನನ್ನು ಕರೆತಂದು ಬಂಗ್ಲಗುಡ್ಡಕ್ಕೆ ತೆಗೆದುಕೊಂಡೊಯ್ಯಲಾಗಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಬುರುಡೆ ತಂದ ಸ್ಥಳವನ್ನು ಸಮೀಕ್ಷಿಸಲಾಗಿದೆ. ಒಂದು ಬುರುಡೆಯನ್ನು ತಂದು, ಮತ್ತೊಂದು ಕಡೆಯಲ್ಲಿ ಇಟ್ಟಿದ್ದೇನೆ ಎಂದು ವಿಠಲ್ ಗೌಡ ಹೇಳಿದ್ದಾರೆ.
2020 ಈಶಾನ್ಯ ದೆಹಲಿ ಗಲಭೆ: ಬೇಲ್ ರದ್ದಾದ ನಂತರ ಸುಪ್ರೀಂ ಕೋರ್ಟ್‌ನಲ್ಲಿ ಇಂದು ಬೇಡಿಕೆಗಳ ವಿಚಾರಣೆ
ಹಾಗಾಗಿ ಎಸ್‌ಐಟಿ ಅಧಿಕಾರಿಗಳು ಅವರ ವಿಚಾರಣೆಯನ್ನು ಇನ್ನಷ್ಟು ಕಠಿಣಗೊಳಿಸಿದ್ದಾರೆ. ಎಸ್‌ಐಟಿ ವಿಚಾರಣೆ ತೀವ್ರಗೊಂಡಿದೆ, ಗಿರೀಶ್ ಮಟ್ಟಣ್ಣನವರ ಸೂಚನೆಯಂತೆ ಬುರುಡೆಯನ್ನು ತಂದಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ವಿಠಲ್ ಗೌಡರಿಂದ ಮಾಹಿತಿ ಪಡೆದು ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಬುರುಡೆ ತರುವಾಗ ವಿಠಲ್ ಗೌಡರಿಗೆ ಪ್ರದೀಪ್ ಗೌಡ ಸಹಕಾರ ನೀಡಿದ್ದ. ಹಾಗಾಗಿ ಪ್ರದೀಪ್ ಗೌಡರ ವಿಚಾರಣೆಯೂ ಶೀಘ್ರವೇ ನಡೆಯಲಿದೆ.