Skip to main content
ವಿಡಿಯೋ
1/2
general

ಲಿಂಗಾಯತ ಧರ್ಮವನ್ನು ಪ್ರತ್ಯೇಕವಾಗಿ ಗುರುತಿಸಿ: ಸಮಾವೇಶದಲ್ಲಿ ಸ್ವಾಮೀಜಿಗಳ ಹಕ್ಕೊತ್ತಾಯ!

By Gireesh Vasishta
ಲಿಂಗಾಯತ ಧರ್ಮವನ್ನು ಪ್ರತ್ಯೇಕವಾಗಿ ಗುರುತಿಸಿ: ಸಮಾವೇಶದಲ್ಲಿ ಸ್ವಾಮೀಜಿಗಳ ಹಕ್ಕೊತ್ತಾಯ!

ಮುಂದಿನ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಲಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಲಿಂಗಾಯತ ಧರ್ಮವನ್ನು ಪ್ರತ್ಯೇಕವಾಗಿ ನಮೂದಿಸಬೇಕು ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಆಗ್ರಹಿಸಿದೆ. ಬೆಳಗಾವಿಯಲ್ಲಿ ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ನಡೆದ ಸಮಾವೇಶದಲ್ಲಿ ಸ್ವಾಮೀಜಿಗಳು ಈ ಹಕ್ಕೊತ್ತಾಯ ಮಂಡಿಸಿದರು.

ಲಿಂಗಾಯತ ಧರ್ಮವನ್ನು ಪ್ರತ್ಯೇಕವಾಗಿ ಗುರುತಿಸಿ: ಸಮಾವೇಶದಲ್ಲಿ ಸ್ವಾಮೀಜಿಗಳ ಹಕ್ಕೊತ್ತಾಯ!

ಬೆಳಗಾವಿಯಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದಲ್ಲಿ ನೂರಕ್ಕೂ ಅಧಿಕ ಸ್ವಾಮೀಜಿಗಳು, ಭಕ್ತರು ಹಾಗೂ ಲಿಂಗಾಯತ ಸಮುದಾಯದ ಮುಖಂಡರು ಭಾಗವಹಿಸಿ ಲಿಂಗಾಯತ ಧರ್ಮವನ್ನು ಪ್ರತ್ಯೇಕವಾಗಿ ಗುರುತಿಸುವ ಅಗತ್ಯವನ್ನು ಒತ್ತಾಯಿಸಿದರು.

ಮುಂದಿನ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಲಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಲಿಂಗಾಯತ ಧರ್ಮವನ್ನು ಪ್ರತ್ಯೇಕವಾಗಿ ನಮೂದಿಸಬೇಕು ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಆಗ್ರಹಿಸಿದೆ. ಬೆಳಗಾವಿಯಲ್ಲಿ ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ನಡೆದ ಸಮಾವೇಶದಲ್ಲಿ ಸ್ವಾಮೀಜಿಗಳು ಈ ಹಕ್ಕೊತ್ತಾಯ ಮಂಡಿಸಿದರು.

ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಲಿಂಗಾಯತ ಧರ್ಮಕ್ಕೆ ಮಾನ್ಯತೆ ದೊರಕಿಸಿಕೊಡುವ ನಿಟ್ಟಿನಲ್ಲಿ ಕೆಲವರು ಪ್ರಚಾರದ ಮನೋಭಾವದಿಂದ ಮಾತನಾಡುತ್ತಿದ್ದಾರೆ. ಆದರೆ, ಮೊದಲು ನಮ್ಮೊಳಗಿನ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬೇಕು ಎಂದರು. ಹಿಂದೆ ನಡೆದ ದೊಡ್ಡ ಹೋರಾಟದ ಬಳಿಕ ತಾತ್ಕಾಲಿಕ ಕತ್ತಲು ಆವರಿಸಿದ್ದರೂ, ಈಗ ಮತ್ತೆ ಬೆಳಕಿನೆಡೆಗೆ ಸಾಗುತ್ತಿದ್ದೇವೆ. ಈ ಅಭಿಯಾನದ ವಿರುದ್ಧ ಬರುವ ಟೀಕೆಗಳು ನಾವು ಸರಿಯಾದ ಮಾರ್ಗದಲ್ಲಿ ಸಾಗುತ್ತಿದ್ದೇವೆ ಎಂಬುದರ ಸೂಚಕ ಎಂದು ಅಭಿಪ್ರಾಯಪಟ್ಟರು.

ಭಾಲ್ಕಿಯ ಡಾ. ಬಸವಲಿಂಗ ಪಟ್ಟದ್ದೇವರು, ಶರಣರು ನೀಡಿರುವ ವಚನ ಸಾಹಿತ್ಯವನ್ನು ರಕ್ಷಿಸುವುದು ಅಗತ್ಯ. ಲಿಂಗಾಯತ ಸಮುದಾಯದವರು ಜಾಗೃತರಾಗಿ ಜಾತಿ ಗಣತಿಯ ಧರ್ಮ ಕಾಲಂನಲ್ಲಿ ‘ಲಿಂಗಾಯತ ಎಂದೇ ಬರೆಸಬೇಕು. ಇದರ ಮೂಲಕ ಬಸವ ಪರಂಪರೆಯನ್ನು ಮುನ್ನಡೆಸಬೇಕು ಮತ್ತು ದೇಶಾದ್ಯಂತ ಬಸವ ಜಯಂತಿ ಆಚರಿಸುವಂತಾಗಬೇಕು. ಇತರ ರಾಜ್ಯಗಳ ವಿಶ್ವವಿದ್ಯಾಲಯಗಳಲ್ಲಿಯೂ ಬಸವ ಪೀಠಗಳನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.ರೋಡ್‌ ಬದಿಯ ಗುಂಡಿಯ ಒಳಕ್ಕೆ ಇಳಿದ ಸ್ಕೂಲ್‌ ಬಸ್‌: ತಪ್ಪಿದ ಅನಾಹುತ- ರಸ್ತೆಗಳ ಸುರಕ್ಷತೆಗೆ ಎಚ್ಚರಿಕೆ ಘಂಟೆ

ಬೈಲೂರು ನಿಷ್ಕಲ ಮಂಟಪ ನಿಜಗುಣಾನಂದ ಸ್ವಾಮೀಜಿ ಮಾತನಾಡಿ, ಜನಗಣತಿಯ ಮೂಲಕ ಲಿಂಗಾಯತ ಧರ್ಮದ ಭವಿಷ್ಯವನ್ನು ನಿರ್ಧರಿಸಬೇಕು. ಬಸವ ತತ್ವವನ್ನು ಉಳಿಸಿ, ಲಿಂಗಾಯತ ಧರ್ಮಕ್ಕೆ ಮಾನ್ಯತೆ ದೊರಕಿಸುವುದು ಆದ್ಯ ಕರ್ತವ್ಯವಾಗಿದೆ. ಅತಂತ್ರ, ಕುತಂತ್ರಗಳಿಗೆ ತಲೆಬಾಗದೆ ಸ್ವತಂತ್ರವಾಗಿ ಮುನ್ನಡೆಯಬೇಕು ಹಾಗೂ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ನಮೂದಿಸಬೇಕು ಎಂದು ಕರೆ ನೀಡಿದರು.YUISI ​​Sun Hat​​ for Men Women, Breathable Summer Hat for Travel, Hiking, Gardening, Sun Hats for Men​​ & Round Sun Cap for Hiking, Hats for Women​​ Indoor Outdoor Activities

ಹಂದಿಗುಂದ ಶ್ರೀ ಶಿವಾನಂದ ಸ್ವಾಮೀಜಿ, ಕರ್ನಾಟಕದ ವಿರಕ್ತಮಠಗಳಿಗೆ ಬಸವಣ್ಣ ಧರ್ಮಗುರು. ಲಿಂಗಾಯತ ನಮ್ಮ ಧರ್ಮ ಎಂದು ಹೇಳದಿದ್ದರೆ ಮಠಗಳೇ ಅಳಿಸಿ ಹೋಗುತ್ತವೆ. ನಾವು ಮಹತ್ವದ ಕಾಲಘಟ್ಟದಲ್ಲಿದ್ದು, ಈ ಸಂದರ್ಭದಲ್ಲಿ ತಪ್ಪು ಹೆಜ್ಜೆ ಇಡುವುದು ಮಹಾಪಾಪ. ಲಿಂಗಾಯತದ ಜೊತೆಗಿನ ವೀರಶೈವವನ್ನು ತೆಗೆಯಬೇಕು. ವೀರಶೈವ ಎಂಬುದು ಕೇವಲ ಒಂದು ‘ಕ್ಯಾಪ್ ಅಷ್ಟೇ. ಲಿಂಗಾಯತ ಧರ್ಮಕ್ಕಾಗಿ ಬೆಂಗಳೂರಲ್ಲ, ದೆಹಲಿ ಚಲೋ ಮಾಡಲು ಸನ್ನದ್ಧರಾಗೋಣ ಎಂದು ಹೇಳಿದರು.