Skip to main content
ವಿಡಿಯೋ
1/2
general

ಭಾರತದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರ ಹೆಸರಿನ ಹಿನ್ನೆಲೆ: ತಾಯಿ ಜಾನಕಿ ಹೇಳಿದ್ದು ಏನು?

By Sushmitha R
ಭಾರತದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರ ಹೆಸರಿನ ಹಿನ್ನೆಲೆ: ತಾಯಿ ಜಾನಕಿ ಹೇಳಿದ್ದು ಏನು?

ಭಾರತದ 15ನೇ ಉಪರಾಷ್ಟ್ರಪತಿಯಾಗಿ ಸಿ.ಪಿ. ರಾಧಾಕೃಷ್ಣನ್ ಅವರ ಆಯ್ಕೆಯು ಕೇವಲ ರಾಜಕೀಯ ಘಟನೆಯಲ್ಲ, ಅದು ಒಂದು ಅದ್ಭುತ ಕಥೆಯ ಸಾಕಾರವಾಗಿದೆ.

ಭಾರತದ 15ನೇ ಉಪರಾಷ್ಟ್ರಪತಿಯಾಗಿ ಸಿ.ಪಿ. ರಾಧಾಕೃಷ್ಣನ್ ಅವರ ಆಯ್ಕೆಯು ಕೇವಲ ರಾಜಕೀಯ ಘಟನೆಯಲ್ಲ, ಅದು ಒಂದು ಅದ್ಭುತ ಕಥೆಯ ಸಾಕಾರವಾಗಿದೆ. ಇಂದು, ಸೆಪ್ಟೆಂಬರ್ 12 , 2025 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ ಅವರು, ಒಂದು ಸಾಮಾನ್ಯ ಕುಟುಂಬದಿಂದ ಉನ್ನತ ಸಂವಿಧಾನಾಧಿಕಾರಕ್ಕೆ ಏರಿದ್ದಾರೆ. ಇದು ಅವರ ತಾಯಿ ಜಾನಕಿ ಅವರ ಆಶಯದ ನೆನಪಿಸುತ್ತಾರೆ.ಶಾಲೆಯಲ್ಲಿ ಕನ್ನಡ ಮಾತನಾಡಿದಕ್ಕೆ ವಿದ್ಯಾರ್ಥಿಗಳಿಗೆ ಶಾಲಾ ಸಿಬ್ಬಂದಿ ವತಿಯಿಂದ ದಂಡಾಸ್ತ್ರ ಪ್ರಯೋಗ..!!

1957 ರ ಮೇ 4 ರಂದು ತಮಿಳುನಾಡಿನ ತಿರುಪ್ಪುರ್‌ನಲ್ಲಿ ಜನಿಸಿದ ರಾಧಾಕೃಷ್ಣನ್ ಅವರ ಹೆಸರಿನ ಹಿಂದಿನ ಕಥೆಯು ಭಾರತದ ಎರಡನೇ ರಾಷ್ಟ್ರಪತಿ ಡಾ. ರಾಧಾಕೃಷ್ಣನ್‌ರೊಂದಿಗೆ ಸಂಬಂಧ ಹೊಂದಿದೆ. ಆಗಿನ ರಾಷ್ಟ್ರಪತಿ ಡಾ. ರಾಧಾಕೃಷ್ಣನ್ ಶಿಕ್ಷಕರಾಗಿದ್ದರು. ಜಾನಕಿ ಕೂಡ ಶಿಕ್ಷಕೆಯಾಗಿದ್ದರು. ಮಗನ ಹುಟ್ಟಿದ ಸಂದರ್ಭದಲ್ಲಿ, ಆ ಗೌರವಾನ್ವಿತ ವ್ಯಕ್ತಿಯಂತೆಯೇ ಆಗಬೇಕೆಂದು ಆಶಿಸಿ, ಅವರ ಹೆಸರನ್ನು 'ರಾಧಾಕೃಷ್ಣನ್' ಎಂದು ಇಟ್ಟರು. ಜಾನಕಿ ಹೀಗೆ ನೆನಪಿಸುತ್ತಾರೆ.

SAMEEHA ™ Traditional Jacquard Banarasi Silk Dupatta for Women (Floral, Free Size) (Peach)

ನನ್ನ ಮಗನ ಹುಟ್ಟಿದಾಗ, ಆಗಿನ ರಾಷ್ಟ್ರಪತಿ ರಾಧಾಕೃಷ್ಣನ್ ಅವರು ಅಧಿಕಾರದಲ್ಲಿದ್ದರು. ಅವರು ಶಿಕ್ಷಕರಾಗಿದ್ದರು, ಅವರ ನೆನಪಿನಲ್ಲಿ ನನ್ನ ಮಗನ ಹೆಸರನ್ನು ರಾಧಾಕೃಷ್ಣನ್ ಎಂದು ಇಟ್ಟೆ. ಆಗ ನನ್ನ ಗಂಡನು ನೋಡಿ, ನೀನು ನಿನ್ನ ಮಗನನ್ನು ರಾಷ್ಟ್ರಪತಿ ಮಾಡ್ತೀಯಾ? ಎಂದು ಕೇಳಿದ್ದರು. 68 ವರ್ಷಗಳ ನಂತರ, ಅವರ ಮಾತು ನಿಜವಾಯಿತು. ನನಗೆ ತುಂಬಾ ಸಂತೋಷವಾಗಿದೆ.

ಈ ಕಥೆಯು ಅವರ ಜೀವನದ ರಾಜಕೀಯ ಪಯಣಕ್ಕೂ ಸಂಬಂಧಿಸಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿ ಆರಂಭಿಸಿದ ರಾಧಾಕೃಷ್ಣನ್, 1998 ಮತ್ತು 1999ರಲ್ಲಿ ಕೊಯಂಬತೂರ್‌ನಿಂದ ಲೋಕಸಭೆಗೆ ಆಯ್ಕೆಯಾದರು. ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಜಾರ್ಖಂಡ್, ತೆಲಂಗಾಣ ಮತ್ತು ಮಹಾರಾಷ್ಟ್ರದ ಗವರ್ನರರಾಗಿ ಅನುಭವ ಗಳಿಸಿದ್ದಾರೆ. ತುರ್ತು ಅರ್ಜಿ ವಿಚಾರಣೆ ತಿರಸ್ಕಾರ - ದಸರಾ ಉದ್ಟಾಟನೆ ಬಾನು ಮುಷ್ತಾಕ್ ಕೇಸ್

ಸೆಪ್ಟೆಂಬರ್ 9 ರಂದು ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ 452 ಮತಗಳೊಂದಿಗೆ ಗೆದ್ದುಕೊಂಡರು. ವಿರೋಧ ಪಕ್ಷದ ಬಿ. ಸುದರ್ಶನ್ ರೆಡ್ಡಿ ಅವರು 300 ಮತಗಳು ಪಡೆದರು. ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ಕೋರಿ, ಅವರ ಜೀವನವು ಸಮಾಜ ಸೇವೆಗೆ ಮುಡಿಪಾಗಿದೆ ಎಂದರು.