ಬೆಂಗಳೂರು: ಬೆಂಗಳೂರಿನಲ್ಲಿ ಖಾಸಗಿ ಶಾಲೆ ಕನ್ನಡ ವಿರೋಧಿ ನಡೆಯನ್ನ ತಳೆದಿದೆ. ಕನ್ನಡದಲ್ಲಿ ಮಾತನಾಡಿದ ವಿದ್ಯಾರ್ಥಿಗಳಿಗೆ ದಂಡಾಸ್ತ್ರವನ್ನ ಪ್ರಯೋಗಿಸಲಾಗಿದೆ. ಆಂಗ್ಲ ಭಾಷೆಯಲ್ಲಿ ಮಾತ್ರ ಮಾತನಾಡಲಿಕ್ಕೆ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಒತ್ತಡವನ್ನ ಹಾಕಲಾಗ್ತಾ ಇದೆ ಅನ್ನೋ ಆರೋಪವನ್ನ ಈಗ ವಿದ್ಯಾರ್ಥಿಗಳು ಮಾಡಿದ್ದಾರೆ.ಇದನ್ನೂ ಓದಿ: ₹25 ಲಕ್ಷ ಕೊಟ್ಟರೆ ಸೀಟ್? ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 15% NRI ಕೋಟಾ ವಿರುದ್ಧ ಎಐಡಿಎಸ್‌ಒ ಪ್ರತಿಭಟನೆ!
ಸಿಂಧಿ ಪ್ರೌಢಶಾಲೆಯ ವಿರುದ್ಧ ಈಗ ಮಕ್ಕಳು ಆರೋಪ ಮಾಡುತ್ತಿದ್ದಾರೆ ನಮ್ಮ ಮೇಲೆ ಇಂಗ್ಲೀಷ್ ಹೇರಿಕೆ ಮಾಡುತ್ತಿದ್ದಾರೆ ಅಂತ ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ. ಈ ಸಿಂಧಿ ಶಾಲೆ ಕುಮಾರಕೃಪಾ ರಸ್ತೆಯಲ್ಲಿ ಇರುವ ಶಾಲೆಯಾಗಿದ್ದು, ಈಗ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಪ್ರಾಧಿಕಾರ ಪತ್ರವನ್ನು ಬರೆದಿದೆ. ಈ ಹಿನ್ನೆಲೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿಳಿಮಲೆ ಸೂಚನೆಯನ್ನು ಸಹ ಕೊಟ್ಟಿದ್ದಾರೆ.ಇದನ್ನೂ ಓದಿ: ಬೊಮ್ಮನಹಳ್ಳಿ : ಪುರಾತನ ಮುನೇಶ್ವರ ಮೂರ್ತಿಗಳನ್ನ ದ್ವಂಸ ಮಾಡಿದ ಕಿಡಿಗೇಡಿಗಳು..!
ಒಂದು ವಾರದೊಳಗೆ ಪ್ರಾಧಿಕಾರ ವರದಿಯನ್ನ ನೀಡಲು ಸೂಚನೆಯನ್ನ ನೀಡಲಾಗಿದೆ. ಈಗ ಬೇರೆ ಜಿಲ್ಲೆಗಳಲ್ಲಿ ಕನ್ನಡ ಎನ್ನುವುದು ಅಳಿಸಿ ಹೋಗುತ್ತಿದೆ ಈಗ ಸ್ವತಃ ಬೆಂಗಳೂರಿನಲ್ಲೂ ಈ ರೀತಿಯಾಗಿ ಮಕ್ಕಳ ಮೇಲೆ ಇಂಗ್ಲೀಷ್ ಹೇರಿಕೆ ಮಾಡುತ್ತಿರುವುದು ಬೆಂಗಳೂರಿಗರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದೆ. ಕರ್ನಾಟಕದಲ್ಲಿ ಕನ್ನಡ ಭಾಷೆಯೇ ಸೌರ್ವಭೌಮ ಆದರೆ ಬೆಂಗಳೂರಿನಲ್ಲೇ ಕನ್ನಡಕ್ಕೆ ಅಸ್ಥಿತ್ವ ಇಲ್ಲದ ಪರಿಸ್ಥಿತಿ ಈ ಘಟನೆಯಿಂದ ಎದುರಾದಂತಾಂಗಿದೆ.Noise Earbuds N1 Pro Truly Wireless Earbuds with Metallic Finish, ANC(Upto 30Db), 60H of Playtime, Dual Pairing, Instacharge(10 Min=200 Min), BT V5.3(Chrome Black)