Skip to main content
ವಿಡಿಯೋ
1/2
general

ರಾಸಾಯನಿಕ ಬಾಂಬ್ ಸಿದ್ಧತೆಯಲ್ಲಿದ್ದ ISIS ಉಗ್ರ ನಾಯಕ...4 ರಾಜ್ಯಗಳನ್ನು ಬೇಧಿಸಿ ಬಂಧಿಸಿದ ಪೊಲೀಸ್..!

By Sushmitha R
ರಾಸಾಯನಿಕ ಬಾಂಬ್ ಸಿದ್ಧತೆಯಲ್ಲಿದ್ದ ISIS ಉಗ್ರ ನಾಯಕ...4 ರಾಜ್ಯಗಳನ್ನು ಬೇಧಿಸಿ ಬಂಧಿಸಿದ ಪೊಲೀಸ್..!

ದೆಹಲಿಯೂ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಐಸಿಸ್ ಉಗ್ರರನ್ನು ಬಂಧಿಸಿ ಭಯೋತ್ಪಾದಕ ಜಾಲವನ್ನು ಬೇಧಿಸಲಾಗಿದೆ. ನಾಯಕ ಅಶರ್ ದಾನಿಶ್‌, ರಾಸಾಯನಿಕ ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ಪರಿಣತಿ ಹೊಂದಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ದೇಶದಾದ್ಯಂತ ಐವರು ಐಸಿಸ್‌ ಉಗ್ರರ ಬಂಧನದ ನಂತರ ಹಲವು ಆಘಾತಕಾರಿ ಮಾಹಿತಿ ಬಹಿರಂಗಗೊಂಡಿವೆ. ಇಸ್ಲಾಮಿಕ್‌ ರಾಜ್ಯ (ಖಿಲಾಫತ್‌) ಸ್ಥಾಪನೆಗೆ ಸಂಚು ರೂಪಿಸಿದ್ದ ಈ ಉಗ್ರರ ಗುಂಪು, ಭಾರತದ ಬಲಪಂಥೀಯ ನಾಯಕರನ್ನು ಗುರಿಯಾಗಿಸಿಕೊಂಡಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.ಬಿಹಾರದಲ್ಲಿ ಚುನಾವಣೆಗೂ ಮುನ್ನವೇ ಆರ್‌ಜೆಡಿ ನಾಯಕನ ಗುಂಡಿಕ್ಕಿ ಬರ್ಬರ ಹ**.!

ಈ ಭಯೋತ್ಪಾದಕ ಜಾಲವು ಪಾಕಿಸ್ತಾನದಿಂದ ನಿಯಂತ್ರಿಸಲ್ಪಡುತ್ತಿತ್ತು. ಸುಮಾರು 40 ಸದಸ್ಯರಿದ್ದರೂ, ಕೇವಲ ಐವರಿಗೆ ಮಾತ್ರ ಭಯೋತ್ಪಾದಕ ಚಟುವಟಿಕೆಗಳ ಸಂಪೂರ್ಣ ವಿವರ ತಿಳಿದಿತ್ತು. ಇವರು ಪ್ರಮುಖವಾಗಿ ಸಿಗ್ನಲ್‌ ಅಪ್ಲಿಕೇಶನ್‌ ಮೂಲಕ ಪಾಕ್ ಮೂಲದವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು, ಮುಂದಿನ ಚಟುವಟಿಕೆಗಳ ಕುರಿತು ಸಂವಹನ ನಡೆಸುತ್ತಿದ್ದರು.

ಭಾರತದಲ್ಲಿ ಕೆಮಿಕಲ್‌ ಬಾಂಬ್‌ ಸ್ಫೋಟಿಸುವ ಬಗ್ಗೆಯೂ ಇವರು ಚರ್ಚಿಸಿದ್ದು, ಆತ್ಮಾಹುತಿ ಬಾಂಬರ್‌ಗಳನ್ನು ಸಿದ್ಧಪಡಿಸುವ ಯೋಜನೆಯನ್ನೂ ಹೊಂದಿದ್ದರು. ಇವರ ಸಂಭಾಷಣೆಗಳ ಡಿಜಿಟಲ್ ಪುರಾವೆಗಳು ತನಿಖಾ ಸಂಸ್ಥೆಗಳಿಗೆ ಲಭ್ಯವಾಗಿವೆ.

DEVANGI Women's Woven Paithani Banarasi Silk Dupatta/Chunni For Women, Animal Print 1 Meter Wide and 2.3 Meter Length Printed Designer Dupatta/Chunni For Girls

ದೆಹಲಿ, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ತೆಲಂಗಾಣದಲ್ಲಿ ಕಳೆದ ಎರಡು ದಿನಗಳಲ್ಲಿ ಐವರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಮುಂಬೈನ ಅಫ್ತಾಬ್ ಮತ್ತು ಅಬು ಸೂಫಿಯಾನ್‌ರನ್ನು ದೆಹಲಿಯ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ. ರಾಂಚಿಯಲ್ಲಿ ಆಶರ್ ದಾನಿಶ್‌, ಮಧ್ಯಪ್ರದೇಶದ ರಾಜ್‌ಗಢದಲ್ಲಿ ಕಮ್ರಾನ್ ಖುರೇಶಿ ಮತ್ತು ತೆಲಂಗಾಣದಲ್ಲಿ ಹುಜೈಫ್ ಯೆಮೆನ್‌ನನ್ನು ಬಂಧಿಸಲಾಗಿದ್ದು, ಈ ಮೂಲಕ ಭಯೋತ್ಪಾದಕ ಜಾಲವನ್ನು ಬೇಧಿಸಲಾಗಿದೆ.

ಈ ಐವರ ಗುಂಪಿನ ನಾಯಕ ಅಶರ್ ದಾನಿಶ್, ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವೀಧರನಾಗಿದ್ದಾನೆ. ʻಗಜ್ವಾʼ ಎಂಬ ಕೋಡ್ ಹೆಸರಿನಲ್ಲಿ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈತ, ಬಾಂಬ್‌ ತಯಾರಿಕೆಯಲ್ಲಿ ಪರಿಣಿತನಾಗಿದ್ದ. ವಿದ್ಯಾರ್ಥಿಯಂತೆ ವೇಷ ಮರೆಸಿಕೊಂಡು ರಾಂಚಿಯ ತಬಾರಕ್‌ ಲಾಡ್ಜ್‌ನಲ್ಲಿ ಸಿಕ್ಕಿಬಿದ್ದಿದ್ದಾನೆ. ಈತ ಜನವರಿ 2024ರಲ್ಲಿ ಭಾರತಕ್ಕೆ ಬಂದಿದ್ದ ಎಂದು ವರದಿಗಳು ತಿಳಿಸಿವೆ.ಮದರಾಸದಲ್ಲಿ ಬಾಲಕನ ಕೊಲೆ, ಲೈಂಗಿಕ ದೌರ್ಜನ್ಯ: ಐವರು ಸೀನಿಯರ್ ಬಾಲಕರ ಬಂಧನ..!

ಬಂಧಿತರಿಂದ ಒಂದು ಪಿಸ್ತೂಲ್‌, ಡಿಜಿಟಲ್‌ ಸಾಧನಗಳು, ಗಣನೀಯ ಪ್ರಮಾಣದ ರಾಸಾಯನಿಕ ಶಸ್ತ್ರಾಸ್ತ್ರಗಳು ಮತ್ತು ವೆಪನ್‌ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಪ್ತಿ ಮಾಡಲಾದ ರಾಸಾಯನಿಕಗಳಲ್ಲಿ ಹೈಡ್ರೋಕ್ಲೋರಿಕ್ ಆಮ್ಲ, ನೈಟ್ರಿಕ್ ಆಮ್ಲ, ಸೋಡಿಯಂ ಬೈಕಾರ್ಬನೇಟ್, ಸಲ್ಫರ್ ಪೌಡರ್, pH ಮೌಲ್ಯ ಪರೀಕ್ಷಕ ಮತ್ತು ಬಾಲ್ ಬೇರಿಂಗ್‌ಗಳು ಸೇರಿವೆ.