ಬೆಂಗಳೂರು: ಹಿಂದೂ ಆಗಲಿ, ಮುಸ್ಲಿಂ (Hindu Or Muslims) ಆಗಲಿ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದ್ರೆ ಪೊಲೀಸರು ಕ್ರಮ ತೆಗೆದುಕೊಂಡೆ ತೀರುತ್ತಾರೆ. ಮದ್ದೂರಿನಲ್ಲಿ ಎಂಎಲ್ಸಿ ಸಿಟಿ ರವಿ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಾಮಾಜವನ್ನು ಪ್ರಚೋದನಕಾರಿ ರೂಪದಲ್ಲಿ ಪ್ರಚೋದಿಸುವ ರೀತಿ ಭಾಷಣ ಮಾಡಿದ್ರು ಅಂತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಅಂತ ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parameshwar) ತಿಳಿಸಿದರು.
ಬೆಂಗಳೂರಿನಲ್ಲಿ (Bengaluru) ಮಾತಾಡಿದ ಗೃಹ ಸಚಿವ ಜಿ.ಪರಮೇಶ್ವರ್, ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿರೋದನ್ನ ಸಮರ್ಥಿಸಿಕೊಂಡರು.ಇದನ್ನೂ ಓದಿ: ಹಾಂಗ್ ಕಾಂಗ್ vs ಬಾಂಗ್ಲಾದೇಶ್: ಏಷ್ಯಾ ಕಪ್ 2025 ಪಂದ್ಯ ಮಾಹಿತಿ (ಗ್ರೂಪ್ B, 3ನೇ ಪಂದ್ಯ): ರಿಸಲ್ಟ್ ಹೀಗಿದೆ
ಮದ್ದೂರು ಘಟನೆಯ ವಿಚಾರದಲ್ಲಿ ನಾವು ಮೊದಲಿಂದಲೂ ಹೇಳುತ್ತಿದ್ದೇವೆ. ಇದರಲ್ಲಿ ರಾಜಕೀಯ ಮಾಡಬೇಡಿ. ಪೊಲೀಸರಿಗೆ ಬಿಡಿ. ಕಲ್ಲು ಹೊಡೆದವರನ್ನು ಹಿಡಿದು, ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ. ಮುಸಲ್ಮಾನ ಆಗಿರಲಿ, ಹಿಂದೂ ಆಗಿರಲಿ, ಮತ್ತೊಬ್ಬ ಯಾರೇ ಆಗಿರಲಿ, ತಪ್ಪು ಮಾಡಿದವರನ್ನು ಯಾರನ್ನೂ ಬಿಡುವುದಿಲ್ಲ ಯಾರನ್ನೇ ಆದರೂ ಕಾನೂನು ವಿರುದ್ಧವಾಗಿ ನಡೆದುಕೊಂಡಿದ್ದರೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ. ಈ ವಿಚಾರವನ್ನು ಪೊಲೀಸರಿಗೆ ಬಿಟ್ಟುಬಿಡಬೇಕು. ಅದೆಲ್ಲ ಬಿಟ್ಟು, ಇವರು ಹೋಗಿ ಪ್ರಚೋದನಾಕಾರಿಯಾಗಿ ಭಾಷಣ ಮಾಡಿ, ಮತ್ತೆ ಜನರನ್ನೆಲ್ಲ ಒಕ್ಕಲೆಬ್ಬಿಸುವುದು ಸರಿಯಲ್ಲ ಎಂದು ಹೇಳಿದರು.ಇದನ್ನೂ ಓದಿ: ಕ್ರಿಕೆಟ್: ಭಾರತ-ಪಾಕಿಸ್ತಾನ ಏಷ್ಯಾ ಕಪ್ ಟಿ20 ಪಂದ್ಯ ನಡೆಯಲಿ: ಸುಪ್ರೀಂ ಕೋರ್ಟ್ ಹೇಳಿಕೆ
ಬಿಜೆಪಿಯವ್ರು ವೀರಾವೇಷದಲ್ಲಿ ಮಾತಾಡಿ, ಬಳಸಬಾರದ ಪದಗಳನ್ನು ಬಳಸುವುದರಿಂದ ಏನು ಸಾಧನೆ ಮಾಡುತ್ತಾರೆ? ಅವರು ರಾಜಕೀಯ ಕಾರಣಕ್ಕಾಗಿ ಇದೆಲ್ಲ ಮಾಡುತ್ತಿದ್ದಾರೆ ಅನ್ನೋದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಯಾರು ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೋ, ಅಂಥವರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಪರಮೇಶ್ವರ್ ಹೇಳಿದ್ದಾರೆ.ಇದನ್ನೂ ಓದಿ: ಉಪರಾಷ್ಟ್ರಪತಿ ಚುನಾವಣೆ: ವಿಪಕ್ಷಗಳಿಗೆ ತಮ್ಮದೇ ಒಕ್ಕೂಟದ ಈ 2 ಪಾರ್ಟಿಯ ಮೇಲೆ ’ಕ್ರಾಸ್ ವೋಟಿಂಗ್’ ಗುಮಾನಿ
ಇನ್ನೂ ಮದ್ದೂರು ಗಲಾಟೆ ಹಿನ್ನೆಲೆಯಲ್ಲಿ ಎಎಸ್ಪಿ ತಿಮ್ಮಯ್ಯ ವರ್ಗಾವಣೆ ಮಾಡಿದ್ದನ್ನು ಗೃಹ ಸಚಿವರು ಸಮರ್ಥಿಸಿಕೊಂಡರು. ಮದ್ದೂರಿನಲ್ಲಿ ಭದ್ರತಾ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಎಎಸ್ಪಿ ವರ್ಗಾವಣೆ ಮಾಡಿದ್ದಾರೆ. ಆಂತರಿಕವಾಗಿ ಇಲ್ಲಿ ಲೋಪ ಕಂಡಿದೆ, ಅದಕ್ಕೆ ಕ್ರಮ ತೆಗೆದುಕೊಳ್ಳಬೇಕಲ್ಲವೇ? ಒಬ್ಬ ಇನ್ಸ್ಪೆಕ್ಟರ್ ಆಗಿರಬಹುದು, ಸಬ್ ಇನ್ಸ್ಪೆಕ್ಟರ್ ಆಗಿರಬಹುದು, ಅವರ ಕರ್ತವ್ಯ ಲೋಪ ಕಂಡು ಬಂದಾಗ ಇಲಾಖೆಯಿಂದ ಕ್ರಮ ತೆಗೆದುಕೊಳ್ಳುತ್ತಾರೆ. ಇದರಲ್ಲೂ ಲೋಪ ಕಂಡುಬಂದಿದ್ದು ಆಂತರಿಕವಾಗಿ ಇಲಾಖೆಯಿಂದ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.Noise Buds N1 Pro Truly Wireless Earbuds with Metallic Finish, ANC(Upto 30Db), 60H of Playtime, Dual Pairing, Instacharge(10 Min=200 Min), BT V5.3(Chrome Beige)