Skip to main content
ವಿಡಿಯೋ
1/2
politics

ಬಿ.ಕೆ. ಹರಿಪ್ರಸಾದ್‌: ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ಸೇಂಟ್ ಮೇರಿ ಬೇಸಿಲಿಕಾ ಹೆಸರಿಗೆ ಬೆಂಬಲ..!

By Sushmitha R
ಬಿ.ಕೆ. ಹರಿಪ್ರಸಾದ್‌: ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ಸೇಂಟ್ ಮೇರಿ ಬೇಸಿಲಿಕಾ ಹೆಸರಿಗೆ ಬೆಂಬಲ..!

ಬೆಂಗಳೂರು: ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ಸೇಂಟ್ ಮೇರಿ ಬೇಸಿಲಿಕಾ ಹೆಸರು ಇಡುವ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಸಮರ್ಥಿಸಿಕೊಂಡಿದ್ದಾರೆ.

ಬೆಂಗಳೂರು: ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ಸೇಂಟ್ ಮೇರಿ ಬೇಸಿಲಿಕಾ ಹೆಸರು ಇಡುವ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಸಮರ್ಥಿಸಿಕೊಂಡಿದ್ದಾರೆ. ಈ ನಿರ್ಧಾರಕ್ಕೆ ವಿರೋಧಿಸುತ್ತಿರುವ ಬಿಜೆಪಿಯವರು ಧರ್ಮಾಧಾರಿತ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದ ಅವರು, ಕರಾವಳಿ ಪ್ರದೇಶದಲ್ಲಿ ಶಾಂತಿ ನೆಲೆಸಿದೆ ಎಂದು ಹೇಳಿದರು. ತೇಜಸ್ವಿ ಸೂರ್ಯರಿಂದ ಬೆಂಗಳೂರು ಮೆಟ್ರೋ ದರ ಏರಿಕೆ ವಿರುದ್ಧ ರಾಜ್ಯ ಸರ್ಕಾರಕ್ಕೆ ತೀವ್ರ ಟೀಕೆ!

ಆದರೆ, ಬಿಜೆಪಿ ನಾಯಕರು ಮೈಸೂರು ಭಾಗದಲ್ಲಿ ಸಾಮರಸ್ಯ ಕೆಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಅಲ್ಲದೇ, ಪ್ರಚೋದನಕಾರಿ ಭಾಷಣ ಮಾಡುವವರ ವಿರುದ್ಧ ಸರ್ಕಾರ ಕಟ್ಟುನಿಟ್ಟು ಕ್ರಮ ಕೈಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು. ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಹರಿಪ್ರಸಾದ್, ಶಿವಾಜಿನಗರದ ಮೆಟ್ರೋ ನಿಲ್ದಾಣದ ಹೆಸರು ಬದಲಾವಣೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು.

SAMEEHA ™ Jacquard Banarasi Silk Floral Dupatta for Women (Free Size) (Gold)

ಶಿವಾಜಿನಗರದ ಚರ್ಚ್ ಶಿವಾಜಿಯಷ್ಟೇ ಹಳೆಯದಾಗಿದೆ. ಹಾಗಾಗಿ, ಈ ನಿಲ್ದಾಣಕ್ಕೆ ಸೇಂಟ್ ಮೇರಿ ಬೇಸಿಲಿಕಾ ಹೆಸರು ಇಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅಭಿಪ್ರಾಯಪಟ್ಟರು. ಸೇಂಟ್ ಮೇರಿ ಬೇಸಿಲಿಕಾ ಚರ್ಚ್ 250 ವರ್ಷಗಳ ಹಳೆಯದು ಮತ್ತು ಶಿವಾಜಿನಗರದಲ್ಲಿ ಪ್ರಮುಖ ಐತಿಹಾಸಿಕ ಸ್ಥಳವಾಗಿದೆ.ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ಜನ ದಟ್ಟಣೆ: ಸಾರಿಗೆ ನೌಕರರ ಮುಷ್ಕರದ ಪರಿಣಾಮ..!

ಈ ನಿರ್ಧಾರಕ್ಕೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸಲಾಗಿದೆ. ಆದರೆ, ಈ ಚುನಾವಣೆಯ ನಿರ್ಧಾರ ಬಿಜೆಪಿ ವರ್ಗಗಳಿಂದ ತೀವ್ರ ವಿರೋಧವನ್ನು ಎದುರಿಸಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇದನ್ನು ಛತ್ರಪತಿ ಶಿವಾಜಿ ಮಹಾರಾಜರಿಗೆ ಅಪಮಾನವೆಂದು ಖಂಡಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಾಜಿಗೆ ಅಪಮಾನ ಮಾಡಿದ್ಷ್ಟು ಯಾರೂ ಮಾಡಿಲ್ಲ. ಅವರು ಮಹಾರಾಷ್ಟ್ರ ನೋಡಿಕೊಳ್ಳಲಿ, ರಾಜ್ಯದ ವಿಚಾರ ಅವರಿಗೆ ಬೇಡ. ಹೀಗಾಗಿ ಚರ್ಚ್ ಹೆಸರನ್ನು ಮೆಟ್ರೋ ಸ್ಟೇಷನ್ ಗೆ ಇಡುವುದರಲ್ಲಿ ತಪ್ಪೇನಿಲ್ಲ ಎಂದರು .ಬೆಂಗಳೂರಿನ ಮೂಲಕ "ಬ್ರಾಂಡ್ ಭಾರತ" ಕಟ್ಟುವ ದೃಷ್ಟಿಕೋನ: ಡಿ.ಕೆ. ಶಿವಕುಮಾರ್..!