Skip to main content
ವಿಡಿಯೋ
politics

ಪ್ರಧಾನಿ ಮೋದಿ ಮಣಿಪುರ ಭೇಟಿ - ₹8,500 ಕೋಟಿ ರೂ. ಅಭಿವೃದ್ಧಿ ಯೋಜನೆಗಳ ಉದ್ಘಾಟನೆ.!

By Shravanthi R
ಪ್ರಧಾನಿ ಮೋದಿ ಮಣಿಪುರ ಭೇಟಿ - ₹8,500 ಕೋಟಿ ರೂ. ಅಭಿವೃದ್ಧಿ ಯೋಜನೆಗಳ ಉದ್ಘಾಟನೆ.!

ಮಣಿಪುರ ಸರ್ಕಾರ ರಾಜಧಾನಿ ಇಂಫಾಲ್‌ನಲ್ಲಿ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗಿಸಿದೆ. ಮೈಟೈ ಬಹುಸಂಖ್ಯಾತ ಇಂಫಾಲ್‌ನಲ್ಲಿ ಒಟ್ಟು 1,200 ಕೋಟಿ ರೂ.ಗಳ ಮೂಲಸೌಕರ್ಯ ಯೋಜನೆಗಳು, ಕುಕಿಗಳು ಬಹುಸಂಖ್ಯೆಯಲ್ಲಿರುವ ಅಲ್ಲಿನ ಚುರಾಚಂದ್‌ಪುರದ ಪೀಸ್‌ಗ್ರೌಂಡ್‌ನಲ್ಲಿ 7,300 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ.

ಸತತ ಎರಡು ವರ್ಷಗಳ ಅಂತರದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು, ಜನಾಂಗೀಯ ಹಿಂಸಾಚಾರ ಪೀಡಿತ ಪ್ರದೇಶವಾದ ಮಣಿಪುರಕ್ಕೆ ನಾಳೆ (ಸೆ.13) ಭೇಟಿ ನೀಡುತ್ತಿದ್ದಾರೆ. ಈಶಾನ್ಯ ಭಾಗದಲ್ಲಿನ ರಾಜ್ಯಗಳ ಅಭಿವೃದ್ದಿ ಹಾಗೂ ಸಮರ್ಪಕ ಬೆಳವಣಿಗೆ ದೃಷ್ಟಿಯಿಂದ ಈ ನಡೆಯು ಪ್ರಮುಖವಾಗಿದೆ ಎನ್ನಲಾಗಿದೆ. ಮೋದಿ ಬರುವಿಕೆಗಾಗಿ ಈಗಾಗಲೇ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದ್ದು, 8,500 ಕೋಟಿ ಮೌಲ್ಯದ ಅಭಿವೃದ್ದಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಎಂದು ವರದಿ ತಿಳಿಸಿದೆ. 

ರಾಜಧಾನಿ ಇಂಫಾಲ್‌ನಲ್ಲಿ ಮಣಿಪುರ ಸರ್ಕಾರ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗಿಸಿದೆ. ಮೈಟೈ ಬಹುಸಂಖ್ಯಾತ ಇಂಫಾಲ್‌ನಲ್ಲಿ ಒಟ್ಟು 1,200 ಕೋಟಿ ರೂ.ಗಳ ಮೂಲಸೌಕರ್ಯ ಯೋಜನೆಗಳು, ಕುಕಿಗಳು ಬಹುಸಂಖ್ಯೆಯಲ್ಲಿರುವ ಅಲ್ಲಿನ ಚುರಾಚಂದ್‌ಪುರದ ಪೀಸ್‌ಗ್ರೌಂಡ್‌ನಲ್ಲಿ 7,300 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದ ಸಲುವಾಗಿ ದೊಡ್ಡ ಮಟ್ಟದ ಜಾಹೀರಾತು ಫಲಕಗಳನ್ನು ಹಾಕಲಾಗಿದೆ. 


Son of Bhrigu: The Pataala Prophecy Book 1 Paperback – 19 February 2024

ಕುಕಿ ಮತ್ತು ಮೈಟೈ ಸಮುದಾಯಗಳ ನಡುವಿನ ಜನಾಂಗೀಯ ಕಲಹದ ನಂತರ ರಾಜ್ಯಕ್ಕೆ ಭೇಟಿ ನೀಡದೇ ಇದ್ದ ಬಗ್ಗೆ ವಿರೋಧ ಪಕ್ಷಗಳು ಪದೇ ಪದೇ ಟೀಕಿಸುತ್ತಿರುವ ಮಧ್ಯೆ ಪ್ರಧಾನಿ ಮೋದಿ ನಾಳೆ ಭೇಟಿ ನೀಡುತ್ತಿದ್ದಾರೆ. ವಿವಿಐಪಿ ಸ್ತರದ ಕಾರ್ಯಕ್ರಮವಾದ್ದರಿಂದ ಸೂಕ್ಷ್ಮ ಪ್ರದೇಶವಾದ ಕಾಳಜಿಯಿಂದ, ಕೀ, ಪೆನ್ನು, ನೀರಿನ ಬಾಟಲಿ, ಬೆಂಕಿಕಡ್ಡಿ ಪೆಟ್ಟಿಗೆ, ಬಟ್ಟೆಯ ತುಂಡು, ಬ್ಯಾಗ್, ಕರವಸ್ತ್ರ, ಛತ್ರಿ, ಲೈಟರ್, ಯಾವುದೇ ಚೂಪಾದ ವಸ್ತುಗಳು ಹಾಗೂ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳನ್ನು ತರುವುದನ್ನು ನಿರ್ಬಂಧಿಸಲಾಗಿದೆ. ಈ ಬಗ್ಗೆ ಸಾರ್ವಜನಿಕರು ಸಹಕರಿಸಬೇಕೆಂದು ಅಲ್ಲಿನ ರಾಜ್ಯ ಸರ್ಕಾರ ಗುರುವಾರ ಮನವಿ ಕೋರಿದೆ. 


ಇದನ್ನೂ ಓದಿ: ಬಿ.ಕೆ. ಹರಿಪ್ರಸಾದ್‌: ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ಸೇಂಟ್ ಮೇರಿ ಬೇಸಿಲಿಕಾ ಹೆಸರಿಗೆ ಬೆಂಬಲ..!