Skip to main content
ವಿಡಿಯೋ
1/2
crime

ಭಟ್ಕಳದಲ್ಲಿ ಜಾನುವಾರು ಎಲುಬುಗಳ ರಹಸ್ಯ:ಜಾನುವಾರು ಎಲುಬು ಪತ್ತೆಯ ನಂತರ ದೂರದಾತನ ಮೇಲೆ ಕೇಸ್ ದಾಖಲು!

By Vinutha U
ಭಟ್ಕಳದಲ್ಲಿ ಜಾನುವಾರು ಎಲುಬುಗಳ ರಹಸ್ಯ:ಜಾನುವಾರು ಎಲುಬು ಪತ್ತೆಯ ನಂತರ ದೂರದಾತನ ಮೇಲೆ ಕೇಸ್ ದಾಖಲು!

ದೂರದಾರರು ಇದನ್ನು ನೇರವಾಗಿ ನೋಡಿದ್ದು, ಮತ್ತು ಇದನ್ನು ಸಾಕ್ಷಿಯಾಗಿ ದಾಖಲಿಸಿಕೊಂಡಿದ್ದಾರೆ. ನಂತರ, ಸೆಪ್ಟೆಂಬರ್ 11ರಂದು ಆರೋಪಿಗಳು ಅಲ್ಲಿ ಕೆಲವು ಪ್ರಾಣಿಗಳ ಎಲುಬುಗಳು ಕಂಡುಬಂದಿವೆ ಎಂದು ಫೋಟೋಗಳನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಮಾಹಿತಿಯನ್ನು ಹರಡಿದ್ದಾರೆ.

ಕಾರವಾರ, ಉತ್ತರ ಕನ್ನಡ (ಸೆ. 13): ಭಟ್ಕಳದ ಮಗ್ದೂಂ ಕಾಲೋನಿಯ ಅರಣ್ಯ ಪ್ರದೇಶದಲ್ಲಿ ನೂರಾರು ದನಗಳ ಮೂಳೆಗಳು ಪತ್ತೆಯಾದ ಬಗ್ಗೆ ಸುದ್ದಿ ಬಹಿರಂಗಗೊಂಡ ನಂತರ, ಈ ಘಟನೆಯನ್ನು ಸುಳ್ಳು ಎಂದು ತೋರಿಸುವ ಉದ್ದೇಶದಿಂದ ಸ್ಥಳೀಯ ಮುಸ್ಲಿಂ ನಿವಾಸಿಗಳು ಪ್ರಯತ್ನಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

T20 ಏಷ್ಯಾ ಕಪ್: ಒಮನ್‌ vs ಪಾಕಿಸ್ತಾನ್: ಪಂದ್ಯದ ರಿಸಲ್ಟ್‌ ಹೀಗಿದೆ

ತಾಹೀರ್ ಮಸ್ತಾನ್ ಅವರಿಂದ ದೂರು:
ಭಟ್ಕಳ ಮಗ್ದೂಂ ಕಾಲೋನಿ ನಿವಾಸಿ ತಾಹೀರ್ ಮಸ್ತಾನ್ ಅವರು ಸಲ್ಲಿಸಿದ ದೂರಿನಲ್ಲಿ, ಶ್ರೀನಿವಾಸ್ ಭಟ್ಕಳ, ಶ್ರೀಕಾಂತ್ ಭಟ್ಕಳ ಸೇರಿದಂತೆ ನಾಲ್ವರ ವಿರುದ್ಧ ಆರೋಪ ಮಾಡಲಾಗಿದೆ. ದೂರಿನ ಪ್ರಕಾರ, ಸೆಪ್ಟೆಂಬರ್ 10ರ ಸಂಜೆ 5:30ರಿಂದ 6:00ರ ನಡುವೆ ಈ ಆರೋಪಿಗಳು ಗುಂಪು ಕಟ್ಟಿಕೊಂಡು ಮಗ್ದೂಂ ಕಾಲೋನಿಯ ಗುಡ್ಡ ಪ್ರದೇಶಕ್ಕೆ ಬಂದು ಸುತ್ತಾಡಿದ್ದರು. ದೂರದಾರರು ಇದನ್ನು ನೇರವಾಗಿ ನೋಡಿದ್ದು, ಮತ್ತು ಇದನ್ನು ಸಾಕ್ಷಿಯಾಗಿ ದಾಖಲಿಸಿಕೊಂಡಿದ್ದಾರೆ. ನಂತರ, ಸೆಪ್ಟೆಂಬರ್ 11ರಂದು ಆರೋಪಿಗಳು ಅಲ್ಲಿ ಕೆಲವು ಪ್ರಾಣಿಗಳ ಎಲುಬುಗಳು ಕಂಡುಬಂದಿವೆ ಎಂದು ಫೋಟೋಗಳನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಮಾಹಿತಿಯನ್ನು ಹರಡಿದ್ದಾರೆ.

ಈ ಕೃತ್ಯ ಉದ್ದೇಶಪೂರ್ವಕವಾಗಿ ಸಮಾಜದಲ್ಲಿ ಭಯ ಹುಟ್ಟಿಸಿ ಶಾಂತಿಯನ್ನು ಹಾಳುಮಾಡಲು ಮೂಲ ಕಾರಣವಾಗಿದೆ, ಸ್ಥಳೀಯರಲ್ಲಿ ಆತಂಕ ಮತ್ತು ಗೊಂದಲ ಉಂಟಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ರೀತಿಯ ಕೃತ್ಯಗಳು ಭಾರತೀಯ ನ್ಯಾಯ ಸಂಹಿತೆಯ ವಿಧಾನಗಳಡಿಯಲ್ಲಿ ಶಿಕ್ಷಾರ್ಹವಾಗಿದ್ದು, ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರದಾರರು ತಿಳಿಸಿದ್ದಾರೆ.

PURVAJA Women’s Bodycon Midi Dress(Ruby-001-to-008)

ಭಟ್ಕಳದಲ್ಲಿ ದನಗಳ ಮೂಳೆಗಳ ಪತ್ತೆ:
ಭಟ್ಕಳ ಮಗ್ದೂಂ ಕಾಲೋನಿ ಹಿಂಭಾಗದ ಅರಣ್ಯ ಪ್ರದೇಶದ ಗುಡ್ಡ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ದನಗಳ ಮೂಳೆಗಳು ಪತ್ತೆಯಾಗಿತ್ತು. ವರದಿ ಬಂದ ನಂತರ ಡಿವೈಎಸ್‌ಪಿ ಮಹೇಶ್ ಕೆ., ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ್ ನಾವುಡ್, ಪಿಎಸ್‌ಐ ನವೀನ್, ಪಶುವೈದ್ಯಾಧಿಕಾರಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ರಾಶಿರಾಶಿ ಮೂಳೆಗಳನ್ನು ಕಂಡು ಬೆರಗಾಗಿದ್ದರು. ಈ ಹಿನ್ನೆಲೆಯಲ್ಲಿ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಇದೀಗ ಭಟ್ಕಳದ ಮುಸ್ಲಿಂ ವ್ಯಕ್ತಿಯಿಂದ ಈ ಪ್ರಕರಣವನ್ನು ಸುಳ್ಳು ಎಂದು ಬಿಂಬಿಸುವ ಯತ್ನ ನಡೆದಿದ್ದು, ಸಾಕ್ಷ್ಯಗಳೊಂದಿಗೆ ಮೂಳೆ ಪತ್ತೆ ಬಗ್ಗೆ ದೂರು ನೀಡಿದವರ ಮೇಲೆಯೇ ದೂರು ನೀಡಿ ಘಟನೆಯನ್ನು ಸುಳ್ಳು ಎಂದು ತೋರಿಸುವ ಪ್ರಯತ್ನ ನಡೆದಿದೆ.