ನೇಪಾಳದ ಪ್ರಗತಿಗೆ ಭಾರತ ಬದ್ಧವಿದೆ; ಪ್ರಧಾನಿ ಸುಶೀಲಾ ಕರ್ಕಿಗೆ ಅಭಿನಂದನೆ ತಿಳಿಸಿದ ಪ್ರಧಾನಿ ಮೋದಿ
ನವದೆಹಲಿ: ಗಲಭೆಯ ನಂತರ ನೇಪಾಳದ ಮಧ್ಯಂತರ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಸುಶೀಲಾ ಕರ್ಕಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ . "ನೇಪಾಳದ ಮಧ್ಯಂತರ ಸರ್ಕಾರದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಗೌರವಾನ್ವಿತ ಶ್ರೀಮತಿ ಸುಶೀಲಾ ಕರ್ಕಿ (Sushila Karki) ಅವರಿಗೆ ನನ್ನ ಶುಭಾಶಯಗಳನ್ನು ಸಲ್ಲಿಸುತ್ತಾ ಮತ್ತು ನೇಪಾಳದ ಜನರ ಶಾಂತಿ, ಪ್ರಗತಿ, ಸಮೃದ್ಧಿಗೆ ಭಾರತ ದೃಢವಾಗಿ ಬದ್ಧವಾಗಿದೆ" ಎಂದು ಅವರು x ನಲ್ಲಿ ಟ್ವೀಟ್ ಮಾಡಿದ್ದಾರೆ.
ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿಯಾಗಿರುವ ಸುಶೀಲಾ ಕರ್ಕಿ (Sushila Karki) ಅವರು ಮಧ್ಯಂತರ ಸರ್ಕಾರದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಶುಕ್ರವಾರ ಸಂಜೆ ಶೀತಲ್ ನಿವಾಸದಲ್ಲಿ ರಾಷ್ಟ್ರಪತಿ ರಾಮಚಂದ್ರ ಪೌಡೆಲ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದ್ದಾರೆ. ನೇಪಾಳದ ಪ್ರಧಾನಿಯಾದ ಮೊದಲ ಮಹಿಳೆ ಕರ್ಕಿ ಆಗಿದ್ದಾರೆ. ಸಂವಿಧಾನದ 61 ನೇ ವಿಧಿಯಡಿಯಲ್ಲಿ ಅಧ್ಯಕ್ಷ ಪೌಡೆಲ್ ಅವರು ಕರ್ಕಿ ಅವರನ್ನು ಪ್ರಧಾನಿಯಾಗಿ ನೇಮಿಸಿದ್ದಾರೆ.T20 ಏಷ್ಯಾ ಕಪ್: ಒಮನ್ vs ಪಾಕಿಸ್ತಾನ್: ಪಂದ್ಯದ ರಿಸಲ್ಟ್ ಹೀಗಿದೆ
ನೇಪಾಳದಲ್ಲಿ ಮಧ್ಯಂತರ ಸರ್ಕಾರ ರಚನೆಯನ್ನು ಭಾರತ ಸ್ವಾಗತಿಸಿದ್ದು, ಇದು ಶಾಂತಿ ಮತ್ತು ಸ್ಥಿರತೆಯನ್ನು ಬೆಳೆಸಲು ಸಹಾಯ ಮಾಡುತ್ತದೆ. ಅಭಿವೃದ್ಧಿ ಪಾಲುದಾರನಾಗಿ, ಭಾರತವು ನಮ್ಮ ಎರಡು ದೇಶದ ಜನಗಳ ಮತ್ತು ದೇಶಗಳ ಯೋಗಕ್ಷೇಮ ಮತ್ತು ಸಮೃದ್ಧಿಗಾಗಿ ನೇಪಾಳದೊಂದಿಗೆ ನಿಕಟವಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ" ಎಂದು ವಿದೇಶಾಂಗ ಸಚಿವಾಲಯ ನಿನ್ನೆ ಹೇಳಿಕೆಯಲ್ಲಿ ತಿಳಿಸಿದೆ.Handcuffs Backpacks Vegan Leather Casual Backpack Multipurpose Travelling Bags Daypacks For Men And Women