Skip to main content
ವಿಡಿಯೋ
1/2
cinema

ಎಷ್ಟು ಕೋಟಿ ಹಾಕಿದ್ರೂ ಸಿನಿಮಾ ಟಿಕೆಟ್ 200 ರೂ ಮಾತ್ರ...ತಲೆ ಕೆಡಿಸಿಕೊಳ್ತಾ 'ಕಾಂತಾರ-1' ಮತ್ತು 'ಟಾಕ್ಸಿಕ್'?

By Ram Chethan
ಎಷ್ಟು ಕೋಟಿ ಹಾಕಿದ್ರೂ ಸಿನಿಮಾ ಟಿಕೆಟ್ 200 ರೂ ಮಾತ್ರ...ತಲೆ ಕೆಡಿಸಿಕೊಳ್ತಾ 'ಕಾಂತಾರ-1' ಮತ್ತು 'ಟಾಕ್ಸಿಕ್'?

ರಾಜ್ಯ ಸರ್ಕಾರದ ಹೊಸ ನೀತಿಯಂತೆ ಈಗ ಎಲ್ಲಾ ಏಕಪರದೆ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಟಿಕೆಟ್ ದರ ₹236 (₹200 + ತೆರಿಗೆ) ಗರಿಷ್ಠಕ್ಕೆ ಸೀಮಿತವಾಗಿದೆ. ಇದರಿಂದ ಬೃಹತ್ ಬಜೆಟ್ ಚಿತ್ರಗಳ ಆರಂಭಿಕ ಗಳಿಕೆಗೆ ಸ್ವಲ್ಪ ಪರಿಣಾಮ ಬೀರಬಹುದಾದರೂ, ಪ್ರೇಕ್ಷಕರಿಗೆ ಮಿಶ್ರ ಅನುಭವವನ್ನು ನೀಡುವ ನಿರೀಕ್ಷೆಯಿದೆ.

ಕರ್ನಾಟಕದಲ್ಲಿ ಸಿನಿಮಾ ಟಿಕೆಟ್‌ ಬೆಲೆಗೆ ಸಂಬಂಧಿಸಿದಂತೆ ಏಕರೂಪ ನೀತಿ ಜಾರಿಗೆ ಬಂದಿದ್ದು, ಈಗ ಎಲ್ಲಾ ಏಕ ಪರದೆ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರ ಗರಿಷ್ಠ ₹236ಕ್ಕೆ (₹200 ಟಿಕೆಟ್ ದರ + ₹36 ತೆರಿಗೆ) ಸೀಮಿತವಾಗಿದೆ.

ಈ ನಿರ್ಧಾರದಿಂದಾಗಿ 'ಕಾಂತಾರ: ಚಾಪ್ಟರ್ 1' ಮತ್ತು 'ಟಾಕ್ಸಿಕ್' ನಂತಹ ದೊಡ್ಡ ಬಜೆಟ್ ಚಲನಚಿತ್ರಗಳ ಗಳಿಕೆಯ ಮೇಲೆ ಪರಿಣಾಮ ಬೀರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಸಾಮಾನ್ಯವಾಗಿ, ಬಿಡುಗಡೆಯಾದ ಮೊದಲ ಮೂರು ದಿನಗಳಲ್ಲಿ ದೊಡ್ಡ ಬಜೆಟ್ ಚಿತ್ರಗಳಿಗೆ ಹೆಚ್ಚಿನ ಟಿಕೆಟ್ ದರ ನಿಗದಿಪಡಿಸಲಾಗುತ್ತಿತ್ತು, ನಂತರದ ದಿನಗಳಲ್ಲಿ ದರ ಕಡಿತಗೊಳಿಸಲಾಗುತ್ತಿತ್ತು.

ಈ ಹೊಸ ನಿಯಮವು 'ಕಾಂತಾರ: ಚಾಪ್ಟರ್ 1' ಮತ್ತು 'ಟಾಕ್ಸಿಕ್' ನಂತಹ ಚಿತ್ರಗಳ ಮೇಲೆ ಸ್ವಲ್ಪ ಮಟ್ಟಿಗೆ ಪರಿಣಾಮ ಬೀರಬಹುದು. ಆದರೆ, ಈ ಚಿತ್ರಗಳು ಕರ್ನಾಟಕದ ಜೊತೆಗೆ ಇತರ ರಾಜ್ಯಗಳು ಮತ್ತು ವಿದೇಶಗಳಲ್ಲೂ ಬಿಡುಗಡೆಯಾಗುತ್ತಿರುವುದರಿಂದ, ಒಟ್ಟಾರೆ ಗಳಿಕೆಯ ಮೇಲೆ ಇದರ ಪ್ರಭಾವ ಅಷ್ಟಾಗಿ ಗೋಚರಿಸದಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

HAMMONDS FLYCATCHER Premium Laptop Bag for Men - Genuine Leather Bag for Men - Office and Regular Uses - 1 Year Warranty

ಮಲ್ಟಿಪ್ಲೆಕ್ಸ್‌ಗಳಲ್ಲಿ ಆಸನಗಳಿಗೆ ಕ್ಲಾಸಿಕ್, ಪ್ರೈಮ್, ರಿಕ್ಲೈನರ್ ಎಂಬ ಮೂರು ವಿಧಗಳಿದ್ದು, ಇಲ್ಲಿಯವರೆಗೆ ಅವುಗಳಿಗೆ ಬೇರೆ ಬೇರೆ ದರ ವಿಧಿಸಲಾಗುತ್ತಿತ್ತು. ಉದಾಹರಣೆಗೆ, ಸಾಮಾನ್ಯ ದಿನಗಳಲ್ಲಿ ಕ್ಲಾಸಿಕ್ ಆಸನಕ್ಕೆ ₹190, ಪ್ರೈಮ್‌ಗೆ ₹220, ಮತ್ತು ರಿಕ್ಲೈನರ್‌ಗಳಿಗೆ ₹400-₹500 ಚಾರ್ಜ್ ಮಾಡಲಾಗುತ್ತಿತ್ತು.

'ಬಾಂಬೆ' ಅಲ್ಲ 'ಮುಂಬೈ'..ಕಪಿಲ್ ಶರ್ಮಾ ವಿರುದ್ಧ ಆಕ್ರೋಶ! ಖಂಡಿಸಿದವರ ಹೆಸರು ಕೇಳಿ ಇಡಿ ತಂಡ ಶಾಕ್!

ಆದರೆ, ಹೊಸ ನಿಯಮದ ಪ್ರಕಾರ, ಎಲ್ಲಾ ಆಸನಗಳಿಗೂ ಆರಂಭದಿಂದ ಕೊನೆಯವರೆಗೆ ₹236 ಟಿಕೆಟ್ ದರ ನಿಗದಿಪಡಿಸಲಾಗಿದೆ. ಇದು ಕ್ಲಾಸಿಕ್ ಆಸನಗಳಲ್ಲಿ ಕುಳಿತು ಸಿನಿಮಾ ನೋಡುವವರಿಗೆ ಹೆಚ್ಚಿನ ಹಣ ಪಾವತಿಗೆ ಕಾರಣವಾಗಬಹುದು.

ವಾರದ ದಿನಗಳಲ್ಲಿ ಮಲ್ಟಿಪ್ಲೆಕ್ಸ್‌ಗಳಲ್ಲಿ ₹200, ₹220 ರಂತೆ ಟಿಕೆಟ್ ಮಾರಾಟ ಮಾಡಲಾಗುತ್ತಿತ್ತು. ಈಗ ಅವುಗಳ ಬೆಲೆ ₹236ಕ್ಕೆ ಏರಿಕೆ ಕಂಡಿದೆ. ಇದರಿಂದಾಗಿ ವಾರದ ದಿನಗಳಲ್ಲಿ ಸಿನಿಮಾ ನೋಡಲು ಯೋಜನೆ ಮಾಡಿದ್ದವರಿಗೆ ವೆಚ್ಚ ಹೆಚ್ಚಾಗಬಹುದು.