ಧರ್ಮಸ್ಥಳ: ಧರ್ಮಸ್ಥಳದಲ್ಲಿ ಅಕ್ರಮ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ SIT ತನಿಖೆ ನಡೆಸುತ್ತಿದೆ ಆದರೆ ಕೆಲವೊಬ್ಬರು SIT ತಂಡದ ಕೆಲಸಕ್ಕೆ ಅಡ್ಡಿ ಪಡಿಸಿ ಅವರ ನೈತಿಕ ಧೈರ್ಯವನ್ನು ಹಾಳುಮಾಡಲು ಯತ್ನಿಸುತ್ತಿದ್ದಾರೆ, ಹೀಗಾಗಿ ಸೌಜನ್ಯ ಪ್ರಕರಣದ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ ಅವರು ಮೌನ ಪ್ರತಿಭಟನೆ ಮಾಡುವುದಾಗಿ ಹೇಳಿಕೆ ಕೊಟ್ಟಿದ್ದಾರೆ.
ಪ್ರಮುಖ ಅಂಶಗಳು ಹೀಗಿದೆ-
- ಎಸ್ಐಟಿ ತಂಡದ ನೈತಿಕ ಸ್ಥೈರ್ಯ ಕುಗ್ಗಿಸಲು ಹುನ್ನಾರ ಆರೋಪದ ಹಿನ್ನೆಲೆ.
- ಲಕ್ಷಾಂತರ ಜನರನ್ನ ಸೇರಿಸಿ ಮೌನ ಪ್ರತಿಭಟನೆಯ ಎಚ್ಚರಿಕೆ ನೀಡಿದ ಮಹೇಶ್ ಶೆಟ್ಟಿ ತಿಮರೋಡಿ.
- ಸೌಜನ್ಯ ಹೋರಾಟಗಾರರಿಗೆ ಮಹೇಶ್ ಶೆಟ್ಟಿ ತಿಮರೋಡಿ ಕರೆ.
- ಸೌಜನ್ಯ ಹೋರಾಟ ಹಾಗು ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ ಐ ಟಿ ಪಾರದರ್ಶಕ ತನಿಖೆ ನಡೆಸುತ್ತಿದೆ. ಎಸ್ ಐ ಟಿ ತಂಡವನ್ನ ದುರ್ಬಲ ಮಾಡುವ ಪ್ರಯತ್ನ ನಡೆಯುತ್ತಿದೆ. ಎಸ್ ಐ ಟಿ ಒಳ್ಳೆಯ ತನಿಖೆ ಮಾಡುತ್ತಿದೆ ಎಂದಿದ್ದಾರೆ.
- ಆದರೆ ಅವರ ಮನಸನ್ನ ಹಾಳು ಮಾಡುವ ಹುನ್ನಾರ ನಡೆಯುತ್ತಿದೆ. ಎಸ್ ಐ ಟಿಗೆ ಶಕ್ತಿ ತುಂಬಲು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡುತ್ತಿದ್ದೇವೆ ಎಂದಿದ್ದಾರೆ.
- ಪ್ರತಿಭಟನೆಯ ಸಮಯ- ದಿನವನ್ನ ನಿಗದಿ ಮಾಡುತ್ತೇವೆ. ಮಹಾತ್ಮ ಗಾಂಧಿಯವರ ಶಾಂತಿಯ ಮಂತ್ರದ ಪ್ರೇರಣೆಯಡಿ ಮೌನ ಪ್ರತಿಭಟನೆ ಮಾಡಲಿದ್ದೇವೆ.
- ಬೆಳ್ತಂಗಡಿ ತಾಲೂಕಿನಲ್ಲಿ ಲಕ್ಷಾಂತರ ಜನ ಸೇರಿ ಮೌನ ಪ್ರತಿಭಟನೆ ಮಾಡಲಿದ್ದೇವೆ.
- ಸೆಪ್ಟೆಂಬರ್ 16ನೇ ತಾರೀಕು ಸಂಕ್ರಮಣ ದಿವಸ ಎಲ್ಲಾ ಮಠ ಮಂದಿರ ದೈವಸ್ಥಾನದಲ್ಲಿ ಪ್ರಾರ್ಥನೆ ಮಾಡಿ. ಎಸ್ ಐ ಟಿ ತಂಡಕ್ಕೆ ಸತ್ಯ ಹೊರ ತರಲು ಶಕ್ತಿ ನೀಡುವಂತೆ ಪ್ರಾರ್ಥನೆ ಮಾಡಿ ಎಂದಿದ್ದಾರೆ.ನೇಪಾಳದ ಪ್ರಗತಿಗೆ ಭಾರತ ಬದ್ಧವಿದೆ; ನೂತನ ಪ್ರಧಾನಿ ಸುಶೀಲಾ ಕರ್ಕಿಗೆ ಅಭಿನಂದನೆ ತಿಳಿಸಿದ ಪ್ರಧಾನಿ ಮೋದಿ
ಆದರೆ ಇಲ್ಲಿ ಗಮನಿಸುವ ಅಂಶವೆಂದರೆ ರಾಜ್ಯ ಗೃಹ ಸಚಿವರು ಈಗಾಗಲೆ ಖಚಿತ ಪಡಿಸಿರುವಂತೆ ಎಸ್‌ಐಟಿ ಸದ್ಯಾ ಅಕ್ರಮ ಶವ ಹೂತಿಟ್ಟ ಕೇಸಿನ ತನಿಖೆಯನ್ನು ಮಾಡುತ್ತಿದೆ ಆದರೆ ಸೌಜನ್ಯ ಪ್ರಕರಣದ ತನಿಖೆ ಮಾಡುತ್ತಿಲ್ಲ ಎಂದಿದ್ದಾರೆ.TRASE Block Heels Sandals For Women, Dusky Stylish & Comfortable Footwear