ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಜೈಲು ಸೇರಿರುವ ಬೆನ್ನಲ್ಲೇ, ಅವರ ಪತ್ನಿ ವಿಜಯಲಕ್ಷ್ಮಿ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಬೆಂಗಳೂರಿನ ಹೊಸಕೆರೆಹಳ್ಳಿಯ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ನಲ್ಲಿರುವ ವಿಜಯಲಕ್ಷ್ಮಿ ಅವರ ಮನೆಯಿಂದ 3 ಲಕ್ಷ ರೂಪಾಯಿ ನಗದು ಕಳುವಾಗಿದೆ.
ಈ ಘಟನೆ ಸಂಬಂಧ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್, ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸುದ್ದಿ ಈಗ ಸಾಕಷ್ಟು ಆಘಾತ ಮೂಡಿಸಿದೆ.
Victorinox Altmont Classic, Deluxe Laptop Backpack, 20 litres Black (602641)
ಕಳ್ಳತನದ ಬಗ್ಗೆ ವಿಜಯಲಕ್ಷ್ಮಿ ಅವರು ತಮ್ಮ ಮನೆ ಕೆಲಸದವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ಈ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಎಷ್ಟು ಕೋಟಿ ಹಾಕಿದ್ರೂ ಸಿನಿಮಾ ಟಿಕೆಟ್ 200 ರೂ ಮಾತ್ರ...ತಲೆ ಕೆಡಿಸಿಕೊಳ್ತಾ 'ಕಾಂತಾರ-1' ಮತ್ತು 'ಟಾಕ್ಸಿಕ್'?
ದರ್ಶನ್ ಅವರು ಮತ್ತೆ ಜೈಲು ಸೇರಿರುವ ಕಾರಣ ವಿಜಯಲಕ್ಷ್ಮಿ ಈಗಾಗಲೇ ತೀವ್ರ ನೋವಿನಲ್ಲಿದ್ದಾರೆ. ದರ್ಶನ್ ಬಿಡುಗಡೆಗಾಗಿ ಅವರು ಹಿಂದೆ ಅನೇಕ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.
ಹಾಗೆ ಪ್ರಾರ್ಥಿಸಿದ ನಂತರ ದರ್ಶನ್ ಬಿಡುಗಡೆಯಾಗಿದ್ದರು. ಆದರೆ, ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದರಿಂದ ದರ್ಶನ್ ಪುನಃ ಜೈಲು ಸೇರಿದ್ದಾರೆ. ಈ ಬೆಳವಣಿಗೆ ವಿಜಯಲಕ್ಷ್ಮಿ ಅವರ ದುಃಖವನ್ನು ಮತ್ತಷ್ಟು ಹೆಚ್ಚಿಸಿದೆ.