Skip to main content
ವಿಡಿಯೋ
1/2
crime

ಚೆನ್ನೈ: ಗಂಡನ ಪ್ರೀತಿ ಕಡಿಮೆಯಾದ ಕಾರಣಕ್ಕೆ ತಾಯಿಯೇ ಮಗುವನ್ನು ಕೊಂದ ಕ್ರೂರ ಘಟನೆ;

By Vinutha U
ಚೆನ್ನೈ: ಗಂಡನ ಪ್ರೀತಿ ಕಡಿಮೆಯಾದ ಕಾರಣಕ್ಕೆ ತಾಯಿಯೇ ಮಗುವನ್ನು ಕೊಂದ ಕ್ರೂರ ಘಟನೆ;

ಘಟನೆಯ ದಿನ ಕೋಪದಿಂದ ಮಗುವಿನ ಬಾಯಿಗೆ ಕಾಗದ ತುರಿದೆ" ಎಂದು ಹೇಳಿದಳು. ಗಂಡನ ಪ್ರೀತಿ ಕಡಿಮೆಯಾಗಲು ಮಗುವೇ ಕಾರಣ ಎಂದು ಆರೋಪಿಸಿದಳು. ಈಗ ಬೆನಿತಾಳನ್ನು ಬಂಧಿಸಿ ಕೋರ್ಟ್‌ಗೆ ಹಾಜರಿಸಲಾಗಿದ್ದು, ಇದೀಗ ಈ ಕೇಸ್ ತಮಿಳುನಾಡಿನಲ್ಲಿ ಚರ್ಚೆಯ ವಿಷಯವಾಗಿದೆ.

ಚೆನ್ನೈ :ತಮಿಳುನಾಡಿನಲ್ಲಿ ಹೃದಯವಿದ್ರಾವಕವಾದ ಒಂದು ಭಯಾನಕ ಘಟನೆ ನಡೆದಿದ್ದು, ತಾಯಿಯೇ ತನ್ನ ಮಗುವನ್ನು ಕೊಂದಿದ್ದಾಳೆ. ಗಂಡನ ಪ್ರೀತಿ ಕಡಿಮೆಯಾಗಿದೆ ಎಂಬ ಕೋಪದಿಂದ ಮಹಿಳೆಯು ಹೇಳಿಕೆ ನೀಡಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಪೊಲೀಸರು ಆರೋಪಿ ತಾಯಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಮಗುವನ್ನು ಕೊಂದ ಮಹಿಳೆಯನ್ನು ಬೆನಿತಾ ಜಯನ್ನಲ್ ಎಂದು ಗುರುತಿಸಲಾಗಿದ್ದು, ಇವಳು ಕನ್ಯಾಕುಮಾರಿ ಜಿಲ್ಲೆಯ ಕರುಂಗಲ್ ಬಳಿಯ ಬಾಲೂರ್ ಕಟ್ಟುವಿಲೈ ಪ್ರದೇಶದ ನಿವಾಸಿಯಾಗಿದ್ದಾಳೆ.

ಒಂದು ವರ್ಷದ ಹಿಂದೆ ದಿಂಡಿಗಲ್ ಜಿಲ್ಲೆಯ ಉತ್ತರ ವೇದಚಂದೂರಿನ ನಾಗಕೋಣನೂರು ಪ್ರದೇಶದ ಕಾರ್ತಿಕ್  ಅವರನ್ನು ಪ್ರೀತಿಸಿ ಬೆನಿತಾ ವಿವಾಹವಾಗಿದ್ದಳು. ಇವರಿಗೆ  ಒಂದು ಮುದ್ದಾದ ಹೆಣ್ಣು ಮಗು ಜನಿಸುತ್ತದೆ, ಆದರೆ ಇದೀಗ ಆ ಮಗುವಿನ ಪ್ರಾಣವನ್ನೇ ತಾಯಿ ತೆಗೆದುಕೊಂಡಿದ್ದಾಳೆ. ಮಗುವಿನ ಬಾಯಿಗೆ ಟಿಶ್ಯೂ ಪೇಪರ್ ತುರುಕಿ ಕೊಲೆ ಮಾಡಿದ್ದಾಳೆ. ಮದುವೆಯ ನಂತರ ಪತ್ನಿಯ ಮನೆಯಲ್ಲೇ ವಾಸಿಸುತ್ತಿದ್ದ ಕಾರ್ತಿಕ್, ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ. ಪತ್ನಿಯೇ ಮಗುವನ್ನು ಕೊಂದಿರುವುದು ತಿಳಿದು ಗಂಡನು ಆಘಾತಕ್ಕೊಳಗಾಗಿದ್ದಾನೆ. ಕ್ರೂರ ತಾಯಿ ಮಗುವಿನ ಬಾಯಿಗೆ ಟಿಶ್ಯೂ ಪೇಪರ್ ತುರುಕಿ ಕೊಲೆ ಮಾಡಿದ್ದಾಳೆ ಎಂದು ವರದಿಯಾಗಿದೆ.

PURVAJA Women’s Bodycon Midi Dress(Ruby-001-to-008)

ಸೆಪ್ಟೆಂಬರ್ 9 ರಂದು ಕಾರ್ತಿಕ್ ಎಂದಿನಂತೆ ಕೆಲಸಕ್ಕೆ ಹೊರಟು ರಾತ್ರಿ ಮನೆಗೆ ಮರಳಿದನು. ಮನೆಗೆ ಬಂದು ಮಗುವನ್ನು ಎತ್ತಿಕೊಂಡಾಗ ಆ ಮಗುವಿನಲ್ಲಿ ಯಾವುದೇ ರೀತಿಯ ಚಲನೆಯಾಗುತ್ತಿರಲಿಲ್ಲ. ಉಸಿರಾಟ ನಿಂತಿರುವುದನ್ನು ಗಮನಿಸಿ ಗಾಬರಿಯಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾನೆ. ಮಗುವನ್ನು ಪರೀಕ್ಷಿಸಿದ ವೈದ್ಯರು, ಆ ಮಗು ಈಗಾಗಲೇ ಸತ್ತಿರುವುದನ್ನು ಖಚಿತಪಡಿಸಿದರು. ಮಗುವಿನ ಬಾಯಿಯ ಸುತ್ತ ಗಾಯವಾಗಿತ್ತು. ಈ ಬಗ್ಗೆ ಪತ್ನಿಯನ್ನು ತನಿಖೆ ಮಾಡಿದಾಗ, ಮಗು ಹಾಲು ಕುಡಿಯುವಾಗ ಕೆಳಗೆ ಬಿದ್ದು ಗಾಯಗೊಂಡಿದೆ ಎಂದು ಬೆನಿತಾ ಹೇಳಿದಳು. ಆಘಾತಗೊಂಡ ಕಾರ್ತಿಕ್ ಮಗುವನ್ನು ಕರುಂಗಲ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ದನು.

ಮೈಸೂರಿನ 150 ವಕೀಲರಿಂದ ಧರ್ಮಸ್ಥಳ ಯಾತ್ರೆ...ಡಾ. ಹೆಗ್ಗಡೆಗೆ ಬೆಂಬಲ!

ಅಲ್ಲಿ ಮಗು ಈಗಾಗಲೇ ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದಾಗ ಅವನು ಕುಸಿದುಬಿಟ್ಟನು. ಕಾರ್ತಿಕ್‌ ಕರುಂಗಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದನು. ದೂರಿನ ಮೇರೆಗೆ ಮಗುವಿನ ಶವವನ್ನು ವಶಪಡಿಸಿಕೊಂಡು ಆಸರಿಪಲ್ಲಂ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಶವಪರೀಕ್ಷೆ ವರದಿಯನ್ನು ನೋಡಿ ಪೊಲೀಸರು ಒಂದು ಕ್ಷಣ ಆಘಾತಕ್ಕೊಳಗಾದರು. ವರದಿಯಲ್ಲಿ ಮಗುವನ್ನು ಕೊಲೆ ಮಾಡಿರುವುದು ಸ್ಪಷ್ಟವಾಗಿ ಬಹಿರಂಗಗೊಂಡಿತ್ತು. ಗಂಡನ ಪ್ರೀತಿ ಕಡಿಮೆಯಾಗಲು ಮಗುವೇ ಕಾರಣ ಎಂದು ಆರೋಪ ಮರಣೋತ್ತರ ವರದಿ ಬಂದ ನಂತರ ಪೊಲೀಸರು ತಾಯಿಯನ್ನು ಕಟ್ಟುನಿಟ್ಟಾಗಿ ವಿಚಾರಣೆ ಮಾಡಿದರು.

ಉತ್ತರ ಕರ್ನಾಟಕದಲ್ಲಿ ಪ್ರವಾಹ ಕಾಣುತ್ತಿಲ್ಲವೇ? - ಬೇರೆ ರಾಜ್ಯಗಳಿಗೆ ಪರಿಹಾರ ನೀಡಿದ ಸರ್ಕಾರ - ವಿರೋಧ ಪಕ್ಷಗಳಿಂದ ಆಕ್ರೋಶ.!

ಅದರಲ್ಲಿ ಬೆನಿತಾ ತನ್ನ ತಪ್ಪನ್ನು ಒಪ್ಪಿಕೊಂಡಳು. "ನನ್ನ ಮಗು ಹುಟ್ಟಿದ 40 ದಿನಗಳಿಂದ ಗಂಡನಿಗೆ ನನ್ನ ಮೇಲಿನ ಪ್ರೀತಿ ಕಡಿಮೆಯಾಗಿದೆ. ಇದರಿಂದ ಮನೆಯಲ್ಲಿ ಸಮಸ್ಯೆಗಳು ಉಂಟಾಗಿದ್ದವು. ಘಟನೆಯ ದಿನ ಕೋಪದಿಂದ ಮಗುವಿನ ಬಾಯಿಗೆ ಕಾಗದ ತುರಿದೆ" ಎಂದು ಹೇಳಿದಳು. ಗಂಡನ ಪ್ರೀತಿ ಕಡಿಮೆಯಾಗಲು ಮಗುವೇ ಕಾರಣ ಎಂದು ಆರೋಪಿಸಿದಳು. ಈಗ ಬೆನಿತಾಳನ್ನು ಬಂಧಿಸಿ ಕೋರ್ಟ್‌ಗೆ ಹಾಜರಿಸಲಾಗಿದ್ದು, ಇದೀಗ ಈ ಕೇಸ್ ತಮಿಳುನಾಡಿನಲ್ಲಿ ಚರ್ಚೆಯ ವಿಷಯವಾಗಿದೆ.