ಇಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ನಗರದಲ್ಲಿ ರಸ್ತೆಗುಂಡಿಗಳ ಸಮಸ್ಯೆಗೆ ಪರಿಹಾರವನ್ನು ಘೋಷಿಸಿದ್ದಾರೆ. ಈ ಮೂಲಕ ರಸ್ತೆ ನವೀಕರಣಕ್ಕೆ, ಸುಗಮ ಸಂಚಾರ ಹಾಗೂ ಗುಂಡಿರಹಿತ ರಸ್ತೆಗಳನ್ನು ಹೊಂದುವ ಗುರಿಯಾಗಿ 1,100 ಕೋಟಿಯ ವೆಚ್ಚ ಹೂಡುವ ನಿರ್ಧಾರವನ್ನು ತಿಳಿಸಿದ್ದಾರೆ ಎನ್ನಲಾಗಿದೆ. 14 ವಿಧಾನಸಭಾ ಕ್ಷೇತ್ರಗಳಿಗೆ ತಲಾ 50 ಕೋಟಿ ರೂ. ಹಾಗೂ ಇತರೆ ಕ್ಷೇತ್ರಗಳ ಹೊಸ ರಸ್ತೆ ನಿರ್ಮಾಣ ಹಾಗೂ ದುರಸ್ಥಿಗೆ 25 ಕೋಟಿ ರೂ. ನೀಡಲಾಗುವುದು ಎಂದು ತಿಳಿಸಲಾಗಿದೆ. Original Sin : Israel, Palestine and the Revenge of Old West Asia Paperback – 15 December 2024
ಬೆಂಗಳೂರು ಮಳೆಯಿಂದ ತತ್ತರಿಸಿರುವ ನಡುವಲ್ಲಿ ರಸ್ತೆ ಗುಂಡಿಗಳು ಹೇರಳ ಸಂಖ್ಯೆಯಲ್ಲಿ ಜನರಿಗೆ ತೊಂದರೆಯುಂಟು ಮಾಡಿವೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಎಬಿ)ದ ಐದು ಮಹಾನಗರಗಳ ಸಮೀಕ್ಷೆ ನಡೆಸಿದ ಪ್ರಕಾರ, ಹೆಚ್ಚಿನ ಗುಂಡಿಗಳನ್ನು ದುರ್ಬಲವಾದ ಬ್ಯಾರಿಕೇಡ್‌ಗಳಿಂದ ಮುಚ್ಚಲಾಗಿತ್ತು ಅಥವಾ ಅಸಮವಾದ ಸಿಮೆಂಟ್‌ನಿಂದ ತೇಪೆ ಹಾಕಲಾಗಿದೆ ಎನ್ನಲಾಗಿತ್ತು, ಇವು ಮಳೆಯ ನಂತರ ಹೆಚ್ಚಾಗಿ ಸವೆದು ಅವಾಂತರವನ್ನು ಸೃಷ್ಟಿಸಿತ್ತು.
ಇಲ್ಲಿನ ರಸ್ತೆಗಳು ಸಾವಿನ ಬಲೆಗಳಂತಾಗಿವೆ ಎಂದು ನಾಗರೀಕರು ವ್ಯಥೆ ಪಟ್ಟಿದ್ದಾರೆ. ಎಷ್ಟು ಗಂಭೀರ ಪರಿಸ್ಥಿತಿ ಹಾಗೂ ಸಮಸ್ಯೆಯಾಗಿದೆ ಎಂದರೆ ಮಕ್ಕಳು ಸಹ ಪ್ರಧಾನ ಮಂತ್ರಿಗಳಿಗೆ ಪತ್ರದ ರೂಪದಲ್ಲಿ ಕವಿತೆ ಬರೆದು ಕೇವಲ ಒಳ್ಳೆಯ ರಸ್ತೆ ಮಾರ್ಗಗಳಿಗಾಗಿ ಅಳಲನ್ನು ತೋಡಿಕೊಂಡಿದ್ದರು.! ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ದೊಡ್ಡ ಮಟ್ಟದ ಮೂಲಸೌಕರ್ಯದ ಯೋಜನೆಯು ಇದಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಇಸ್ರೇಲ್ ಒಪ್ಪಂದದ ವಿರೋಧ: ಅಮೆಜಾನ್‌ನಿಂದ ಅಮಾನತುಗೊಂಡ ಪ್ಯಾಲೆಸ್ತೀನಿಯನ್ ಎಂಜಿನಿಯರ್
ಈ ಬಗ್ಗೆ ಎಕ್ಸ್ ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಡಿಸಿಎಂ ಡಿಕೆ. ಶಿವಕುಮಾರ್ ಅವರು, ಖಚಿತಪಡಿಸಲಾಗಿದ್ದು, ಈ ಉಪಕ್ರಮದಿಂದ “ಬೆಂಗಳೂರು ರಸ್ತೆ ಅಭಿವೃದ್ಧಿಯಲ್ಲಿ ಪ್ರಮುಖ ಸುಧಾರಣೆಯಾಗಲಿದೆ. ದುರಸ್ತಿ ಮತ್ತು ನಿರ್ಮಾಣಕ್ಕಾಗಿ ₹1,100 ಕೋಟಿ ಹಂಚಿಕೆ ಮಾಡಲಾಗಿದ್ದು, ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ಈ ನಿಧಿಯ ಲಾಭ ದೊರೆಯುವಂತೆ ನೋಡಿಕೊಳ್ಳಲು ಮತ್ತು ನಗರದಾದ್ಯಂತ ಗುಂಡಿ ರಹಿತ ರಸ್ತೆಗಳನ್ನು ನಿರ್ಮಿಸಲು ನಾವು ಬದ್ಧರಾಗಿದ್ದೇವೆ.” ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ʻಉ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ ಎಂದು ಕುರ್ಚಿ ಗಟ್ಟಿ ಮಾಡಿಕೊಳ್ಳಲು ಜಾತಿ ಸಮೀಕ್ಷೆ ನಡೆಸುತ್ತಿದ್ದಾರೆʼ: ಬೊಮ್ಮಾಯಿ ಹೇಳಿಕೆ