ಪ್ರತಿ ವರ್ಷದ ಸೆ. 14 ರಂದು ದೇಶದಲ್ಲಿ ಹಿಂದಿ ದಿವಸ್ ಆಚರಿಸಲಾಗುತ್ತದೆ. 1949 ಸೆ. 14 ರಂದು ಭಾರತದ ಸಂವಿಧಾನ ಸಭೆಯಲ್ಲಿ ದೇಶದ ಅಧಿಕೃತ ಭಾಷೆ ಎಂದಾಗಿಸಿದೆ. A Very Short History of the Israel–Palestine Conflict Paperback – 30 October 2024
ಇದರ ಪ್ರಯುಕ್ತವಾಗಿ ಇಂದು ಗುಜರಾತ್‌ನ ಗಾಂಧೀನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಿಂದಿ ಬೇರೆಲ್ಲಾ ಭಾಷೆಗಳ ಸ್ನೇಹಿತ, ಪ್ರತಿಸ್ಪರ್ಧಿಯಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಹಿಂದಿ ಭಾಷೆಯನ್ನು ವಿರೋಧಿಸುವ ಬದಲು ಬೇರೆ ಭಾಷೆಗಳ ಒಡನಾಡಿಯಂತೆ ಕಾಣಬೇಕೆಂದಿದ್ದಾರೆ ಎನ್ನಲಾಗಿದೆ.
ಯಾವುದೇ ಭಾಷೆಗಳ ನಡುವೆ ಸಂಘರ್ಷ ಸಲ್ಲದು. ಹಿಂದಿ ಭಾಷೆಯು, ತನ್ನದೇ ಗುರುತನ್ನು ಕಳೆದುಕೊಳ್ಳದೇ ಉಳಿದುಕೊಂಡಿರುವ ಭಾಷೆಯಾಗಿದೆ. ಗುಜರಾತನ್ನು ಉದ್ದೇಶಿಸಿ ಮಾತನಾಡಿದ ಅವರು, ಇಲ್ಲಿನ ರಾಜ್ಯಭಾಷೆ ಗುಜರಾತಿ. ಹಿಂದಿ ಭಾಷೆ ಮಾತನಾಡುವ ರಾಜ್ಯವಲ್ಲದಿದ್ದರೂ ರಾಜ್ಯದಲ್ಲಿ ಸ್ಥಾನ ಪಡೆದುಕೊಂಡಿದೆ ಎಂದಿದ್ದಾರೆ. ಇದನ್ನೂ ಓದಿ: ಶ್ರೀಕೃಷ್ಣ ಜನ್ಮಾಷ್ಟಮಿಯ ಮುದ್ದು ಕೃಷ್ಣ ವೇಷ ಸ್ಪರ್ಧೆ: ಶ್ರೀಕೃಷ್ಣ ಮಠದಲ್ಲಿ ಉತ್ಸಾಹದ ಆಚರಣೆ..!
ಈ ದೇಶದಲ್ಲಿ ವಿವಿಧ ಸಂಸ್ಕೃತಿ, ವೈವಿಧ್ಯಮಯ ಭಾಷೆಗಳು ನೆಲೆಗೊಂಡಿವೆ. ಸಾವಿರಾರು ವರ್ಷಗಳ ಇತಿಹಾಸವಿರುವ ಇಲ್ಲಿ ಅನೇಕ ಪ್ರಮುಖ ವ್ಯಕ್ತಿತ್ವಗಳು, ವಿದ್ಯಾ ಪಂಡಿತರು ಹಿಂದಿಯನ್ನು ಸ್ವೀಕರಿಸಿದ್ದಾರೆ. ಅಸ್ಸಾಂನ ಬಿಹುದಿಂದ ಹಿಡಿದು ಬಿಹಾರದಲ್ಲಿನ ವಿದ್ಯಾಪತಿಯವರ ವಚನಗಳು, ಬಂಗಾಳದಲ್ಲಿನ ಬೌಲ್ ಸ್ತೋತ್ರಗಳು ಮತ್ತು ಈಶಾನ್ಯದಲ್ಲಿ ಭೂಪೇನ್ ಹಜಾರಿಕಾ ಅವರ ಹಾಡುಗಳವರೆಗೆ, ಭಾರತೀಯ ಭಾಷೆಗಳು ನಮ್ಮ ಸಾಂಸ್ಕೃತಿಕ ಸಮಗ್ರ ರಚನೆಯನ್ನು ರೋಮಾಂಚನಕಾರಿಯಾಗಿಸಿವೆ ಎಂದು ಸ್ಮರಿಸಿದರು. ಇದನ್ನೂ ಓದಿ: ನ್ಯಾನೋ ಬನಾನಾ ನಂತರ ಗೂಗಲ್ ಜೆಮಿನಿಯಿಂದ ಮತ್ತೊಂದು ಟ್ರೆಂಡಿಂಗ್ ಫೋಟೋ ಫೀಚರ್.!