ಗೂಗಲ್ ಒಡೆತನದ ಜೆಮಿನಿ ಎಐ ಚಿತ್ರಪಟಗಳ ಕ್ರೇಝ್ ಹುಟ್ಟಿಸಿದೆ. ಎಲ್ಲೆಡೆ ವೈರಲ್ ಆಗಿದ್ದ ನ್ಯಾನೋ ಬನಾನಾದ ನಂತರ ಇದೀಗ ಹಳೆ ಕಾಲದ ಫೋಟೋ ಮಾದರಿಯಲ್ಲಿ ವಿಂಟೇಜ್ ಗ್ಯಾಲರಿಯನ್ನು ಸೃಷ್ಟಿಸಿಕೊಳ್ಳೋ ಸಮಯ ಬಂದಿದೆ. ಇದಕ್ಕಾಗಿ ಗೂಗಲ್ ಜೆಮಿನಿ ಹಾಗೂ ಚಾಟ್‌ಜಿಪಿಟಿಯನ್ನು ಬಳಕೆ ಮಾಡಿಕೊಳ್ಳಲಾಗಿದೆ. ಎಂದಿನಂತೆ ಪ್ರಾಂಪ್ಟ್ ಮಾಡುವ ಮೂಲಕ ನಿಮಿಷ್ಟದ ರೆಟ್ರೋ ಫ್ಯಾಷನ್ ಮಾದರಿಯಲ್ಲಿ ನಿಮ್ಮನ್ನು ಕಂಡುಕೊಳ್ಳಬಹುದಾಗಿದೆ. The Ethnic Cleansing of Palestine Paperback – 1 September 2015
ನ್ಯಾನೋ ಬನಾನಾವನ್ನು ರೀಪ್ಲೇಸ್ ಮಾಡಲಿರುವ ಈ ಹೊಸ ಆವೃತ್ತಿಗೆ ಎಲ್ಲೆಡೆ ಮನ್ನಣೆ ದೊರಕಿದೆ. ಸಿನಿಮಾ ಶೈಲಿಯಲ್ಲಿ, ಹಳೆ ಕಾಲಕ್ಕೆ ಮರಳಿದಂತೆ ಭಾಸವಾಗುವ ಈ ನೂತನ ಎಐ ಫೋಟೋ ಎಡಿಟಿಂಗ್ ಟೂಲ್ ನೋಡಲು ಕೂಲ್ ಅಂಡ್ ಕ್ಲಾಸೀ ಲುಕ್ ಆಗಿದ್ದು, ಕೆಲವೇ ಕ್ಷಣಗಳಲ್ಲಿ ರಚಿತಗೊಳ್ಳುತ್ತವೆ. ವಿವಿಧ ಆಯ್ಕೆಗಳನ್ನೂ ನೀಡಿದ್ದು ನಿಮಗೆ ಇಷ್ಟವಾಗುವ ಜಾನರ್ ಸೆಲೆಕ್ಟ್ ಮಾಡಿ ಎಡಿಟ್ ಮಾಡಬಹುದಾಗಿದೆ. ಇದನ್ನೂ ಓದಿ: ಅಂಗವೈಕಲ್ಯ ಲೆಕ್ಕಕ್ಕಿಲ್ಲ, ಸೆಲ್ಫ್ ಮೋಟಿವೇಟೆಡ್ ವರ್ಕಿಂಗ್ ವುಮನ್ - ಸಾಮಾನ್ಯರ ಅಸಾಮಾನ್ಯ ಬದುಕಿನ ಕಥೆ
ಇನ್‌ಸ್ಟಾಗ್ರಾಮ್ ಸೇರಿದಂತೆ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಜನರು ಹಳೆಯ ಶೈಲಿಗೆ ಮರಳಿದ್ದು, ಗೂಗಲ್ ಜೆಮಿನಿ ನ್ಯಾನೋ ಬನಾನಾದಿಂದ ವಿಂಟೇಜ್ ಸೀರೆಯ, ಬಾಲಿವುಡ್ ಶೈಲಿಯ AI ರಚಿತ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಈಗ ರೀಲ್ಸ್ ಹಾಗೂ ಸ್ಟೋರಿ ಫೀಡ್‌ಗಳನ್ನು ಆಕ್ರಮಿಸಿಕೊಂಡಿರುವಾಗ ಈ ರೀತಿಯ ಚಿತ್ರಪಟಗಳನ್ನು ನೀವು ಹೇಗೆ ರಚಿಸಬಹುದು ಎಂದು ತಿಳಿದುಕೊಳ್ಳಬೇಕಾದದ್ದು ಮುಖ್ಯ, ಅದಕ್ಕಾಗಿ ಇಲ್ಲಿದೆ ಮಾಹಿತಿ -
ನಿಮ್ಮ ಗೂಗಲ್ ಅಕೌಂಟ್‌ನಿಂದ ಗೂಗಲ್ ಜೆಮಿನಿ ಆಪ್‌ನಲ್ಲಿ ಲಾಗಿನ್ ಮಾಡಿರಿ
ನಿಮಗೆ ಬೇಕಾದ ಫೋಟೋವನ್ನು ಸೆಲೆಕ್ಟ್ ಮಾಡಿ
ನಿಮಗೆ ಬೇಕಿರುವ ಶೈಲಿಯನ್ನು ಸ್ಪಷ್ಟಪಡಿಸುವಂತೆ ಸುವಿವರವಾಗಿ ಪ್ರಾಂಪ್ಟ್ ಮಾಡಿರಿ.
ಇದನ್ನೂ ಓದಿ:ಗುಂಡಿ ರಹಿತ ರಸ್ತೆ ಗುರಿ: ನಗರದಲ್ಲಿನ ರಸ್ತೆ ಪರಿಷ್ಕರಣೆಗಳಿಗಾಗಿ ₹1,100 ಕೋಟಿ ಹೂಡಿಕೆ ಘೋಷಣೆ - ಡಿಕೆ ಶಿವಕುಮಾರ್