Skip to main content
ವಿಡಿಯೋ
1/2
metro

ನೀರು ವೇಸ್ಟ್‌ ಮಾಡಿ ದುಃಖ ಪಡಬೇಡಿ: ಬೆಂಗಳೂರಿನಲ್ಲಿ 3 ದಿನ ಕಾವೇರಿ ನೀರಿನ ವ್ಯತ್ಯಯ: ಜಲಮಂಡಳಿ ಮಾಹಿತಿ: ಎಂದಿನಿಂದ? ಮಾಹಿತಿ ಇಲ್ಲಿದೆ

By Gireesh Vasishta
ನೀರು ವೇಸ್ಟ್‌ ಮಾಡಿ ದುಃಖ ಪಡಬೇಡಿ: ಬೆಂಗಳೂರಿನಲ್ಲಿ 3 ದಿನ ಕಾವೇರಿ ನೀರಿನ ವ್ಯತ್ಯಯ: ಜಲಮಂಡಳಿ ಮಾಹಿತಿ: ಎಂದಿನಿಂದ? ಮಾಹಿತಿ ಇಲ್ಲಿದೆ

ಕಾವೇರಿ 1ರಿಂದ 4ನೇ ಹಂತಗಳು (ಫೇಸ್ 1 ಮತ್ತು 2): ಸೆಪ್ಟೆಂಬರ್ 16ರ ಬೆಳಿಗ್ಗೆ 6ರಿಂದ ಸೆಪ್ಟೆಂಬರ್ 17ರ ಬೆಳಿಗ್ಗೆ 6ರವರೆಗೆ (24 ಗಂಟೆಗಳು) ಸ್ಥಗಿತ.

ಬೆಂಗಳೂರು: ನಗರದ ಕುಡಿಯುವ ನೀರಿನ ಮುಖ್ಯ ಮೂಲವಾಗಿರುವ ಕಾವೇರಿ ನೀರು ಸರಬರಾಜಿನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಮೂರು ದಿನಗಳ ವ್ಯತ್ಯಯ ಉಂಟಾಗಲಿದೆ. ಬೆಂಗಳೂರು ಜಲ ಮಂಡಳಿ (BWSSB) ಅಧ್ಯಕ್ಷ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಅವರು ಇದೀಗಾಗಲೇ ನಗರದ ನಿವಾಸಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಸೆಪ್ಟೆಂಬರ್ 15 ರಿಂದ 17 ರವರೆಗಿನ ಅವಧಿಯಲ್ಲಿ ನಗರದ ಹಲವು ಭಾಗಗಳಲ್ಲಿ ಕಾವೇರಿ ನೀರು ಸಿಗುವುದಿಲ್ಲ ಎಂದು ತಿಳಿಸಲಾಗಿದೆ.

ಕಾಮಗಾರಿಯ ವಿವರಗಳು:-

ಕಾವೇರಿ 5ನೇ ಹಂತದ ಜಲರೇಚಕ ಯಂತ್ರಾಗಾರಗಳು: ಸೆಪ್ಟೆಂಬರ್ 15 ಬೆಳಿಗ್ಗೆ 1 ರಿಂದ ಸೆಪ್ಟೆಂಬರ್ 17 ಮಧ್ಯಾಹ್ನ 1 ರವರೆಗೆ (ಒಟ್ಟು 60 ಗಂಟೆಗಳು) ಸ್ಥಗಿತ.

ಕಾವೇರಿ 1ರಿಂದ 4ನೇ ಹಂತಗಳು (ಫೇಸ್ 1 ಮತ್ತು 2): ಸೆಪ್ಟೆಂಬರ್ 16 ಬೆಳಿಗ್ಗೆ 6ರಿಂದ ಸೆಪ್ಟೆಂಬರ್ 17 ಬೆಳಿಗ್ಗೆ 6ರವರೆಗೆ (24 ಗಂಟೆಗಳು) ಸ್ಥಗಿತ.

ಕಾಮಗಾರಿಯು ಕಾವೇರಿ ನೀರು ಸರಬರಾಜು ಯೋಜನೆಯ ಜಲರೇಚಕ ಯಂತ್ರಾಗಾರಗಳು, ಮುಖ್ಯ ಕೊಳವೆ ಮಾರ್ಗಗಳ ಸುಗಮ ಚಲನೆ ಮತ್ತು ದೀರ್ಘಕಾಲೀನ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ನಡೆಯುತ್ತಿದೆ. ನಗರಕ್ಕೆ ದಿನಕ್ಕೆ ಸರಾಸರಿ 1,460 ಮಿಲಿಯನ್ ಲೀಟರ್ (MLD) ಕಾವೇರಿ ನೀರನ್ನು ಪೂರೈಸುವ ಯೋಜನೆಯು ನಗರದ ನೀರು ಬೇಡಿಕೆಯ ಸುಮಾರು 50% ಅನ್ನು ಭರ್ತಿ ಮಾಡುತ್ತದೆ.Vogaan Men's T-Shirt and Shorts Set | Top & Shorts Night Suits Set | Night Wear for Men

ಪ್ರತ್ಯೇಕ ಪ್ರದೇಶಗಳ ಮೇಲೆ ಪರಿಣಾಮ:-

ವ್ಯತ್ಯಯವು ಕಾವೇರಿ ನೀರನ್ನು ಅವಲಂಬಿಸಿರುವ ನಗರದೆಲ್ಲಾ ಪ್ರದೇಶಗಳಲ್ಲಿ (ಉದಾ: ಕೋರಮಂಗಲ, ಇಂದಿರಾನಗರ, ಜೆಪಿ ನಗರ, ವೈಟ್ಫೀಲ್ಡ್, ಮಲ್ಲೇಶ್ವರಂ) ಕುಡಿಯುವ ನೀರು ಸರಬರಾಜಿನಲ್ಲಿ ಅಡ್ಡಿಯನ್ನುಂಟುಮಾಡುತ್ತದೆ. ಸಂಚಾರಿ ಕಾವೇರಿ ಯೋಜನೆಯ ಟ್ಯಾಂಕರ್ ಸೇವೆಯೂ ಅವಧಿಯಲ್ಲಿ ಸಾಮಾನ್ಯ ಸರಬರಾಜಿಗಾಗಿ ಸ್ಥಗಿತಗೊಂಡು, ತುರ್ತು ಅಗತ್ಯಗಳಿಗೆ ಮಾತ್ರ ಬಳಸಲಾಗುತ್ತದೆ.ಇದನ್ನು ಓದಿ: ಧರ್ಮಸ್ಥಳ ಶವ ಹೂತ ಪ್ರಕರಣ...ಎಸ್‌ಐಟಿಗೆ 30ಕ್ಕೂ ಹೆಚ್ಚು ದೂರುಗಳು, ಅರ್ಹ ದೂರುಗಳಿಗೆ ಸಮಗ್ರ ತನಿಖೆ!

ಜಲಮಂಡಳಿಯ ಸಲಹೆ:-

ನಿವಾಸಿಗಳು ಮುಂಜಾಗ್ರತೆಯಾಗಿ ಅಗತ್ಯಕ್ಕೆ ತಕ್ಕಷ್ಟು ನೀರನ್ನು ಸಂಗ್ರಹಿಸಿಟ್ಟುಕೊಳ್ಳಿ.

-ವ್ಯರ್ಥವಾಗದಂತೆ ಉಪಯೋಗಿಸಿ.

-ತುರ್ತು ಸಂದರ್ಭಗಳಲ್ಲಿ BWSSB ಹೆಲ್ಪ್ಲೈನ್ (1916)ಗೆ ಸಂಪರ್ಕಿಸಿ.