Skip to main content
ವಿಡಿಯೋ
1/3
crime

ಮೂವರು ಯುವತಿಯರ ಆತ್ಮಹತ್ಯೆ ಯತ್ನ ಕೇಸ್‌ನಲ್ಲಿ ಟ್ವಿಸ್ಟ್...ಇವರ ಲವ್ ಕಹಾನಿ ಬಿಚ್ಚಿಡ್ತು ಮುಚ್ಚಿಟ್ಟ ಸತ್ಯ!

By Gireesh Vasishta
ಮೂವರು ಯುವತಿಯರ ಆತ್ಮಹತ್ಯೆ ಯತ್ನ ಕೇಸ್‌ನಲ್ಲಿ ಟ್ವಿಸ್ಟ್...ಇವರ ಲವ್ ಕಹಾನಿ ಬಿಚ್ಚಿಡ್ತು ಮುಚ್ಚಿಟ್ಟ ಸತ್ಯ!

ರಾಯಚೂರು ದೇವದುರ್ಗದ ಕ್ವಾರಿಯರದೊಡ್ಡಿ ಗ್ರಾಮದಲ್ಲಿ ಮೂವರು ಯುವತಿಯರು ಪ್ರೇಮ ಸಂಬಂಧಗಳ ಸಂಕಟದಿಂದ ಆತ್ಮಹತ್ಯೆಗೆ ಯತ್ನ, 18 ವರ್ಷದ ರೇಣುಕಾ ಮೃತ, ತಿಮ್ಮಕ್ಕ ಮತ್ತು ಅಪ್ರಾಪ್ತೆಗೆ ಜೀವ ತಿರುಗಿಬಂದಿದೆ. ಪೊಲೀಸ್ ತನಿಖೆ ಮುಂದುವರೆಯುತ್ತಿದೆ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಕ್ವಾರಿಯರದೊಡ್ಡಿ ಗ್ರಾಮದಲ್ಲಿ ನಡೆದ ಮೂವರು ಯುವತಿಯರ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಚ್ಚರಿಯ ಮಾಹಿತಿ ಹೊರಬಿದ್ದಿದೆ. ಘಟನೆ ಭಾನುವಾರ ಜರುಗಿತ್ತು. ಇದರಲ್ಲಿ 18 ವರ್ಷದ ರೇಣುಕಾ ಮೃತಪಟ್ಟಿದ್ದರೆ, ತಿಮ್ಮಕ್ಕ ಹಾಗೂ ಮತ್ತೊಬ್ಬ ಅಪ್ರಾಪ್ತೆ ಅಪಾಯದಿಂದ ಪಾರಾಗಿದ್ದಾರೆ.

 

ಘಟನೆಗೆ ಕಾರಣ ಏನು ಎಂಬುದು ನಿಗೂಢವಾಗಿತ್ತು. ಆದರೆ ದೇವದುರ್ಗ ಪೊಲೀಸರ ತನಿಖೆ ವೇಳೆ ಪ್ರಕರಣದ ಹಿಂದಿರುವ ಪ್ರೇಮ ಕಹಾನಿ ಈಗ ಬಯಲಾಗಿದೆ. ಪ್ರೇಮ ಪ್ರಕರಣವೇ ಮೂವರು ಯುವತಿಯರ ದುರಂತಮಯ ಬದುಕಿಗೆ ಕಾರಣವಾಗಿದ್ದು, ಅವರು ಆತ್ಮಹತ್ಯೆಗೆ ಯತ್ನಿಸಲು ಪ್ರಮುಖ ಕಾರಣವಾಗಿದೆ ಎಂದು ತಿಳಿದುಬಂದಿದೆ.

 

ಮೂವರು ಯುವತಿಯರ ಹಿಂದೆ ಒಂದೊಂದು ಪ್ರೇಮ ಪ್ರಕರಣ ಇತ್ತು. ಮೃತ ರೇಣುಕಾ, ತಿಮ್ಮಕ್ಕ ಮತ್ತು ಅಪ್ರಾಪ್ತೆ ಪರಸ್ಪರ ಸಂಬಂಧಿಕರಾಗಿದ್ದರು. ಅವರಲ್ಲಿ ಪ್ರತಿಯೊಬ್ಬರೂ ಬೇರೆ ಬೇರೆ ಯುವಕರೊಂದಿಗೆ ಪ್ರೀತಿಸುತ್ತಿದ್ದರು. ನಡುವೆ, ರೇಣುಕಾಗೆ ಬೇರೊಬ್ಬ ಯುವಕನೊಂದಿಗೆ ನಿಶ್ಚಿತಾರ್ಥ ನಿಗದಿಯಾಗಿತ್ತು.ಇದನ್ನು ಓದಿ: ಏಷ್ಯಾ ಕಪ್‌ ಭಾರತ vs ಪಾಕ್‌ ಪಂದ್ಯ: ಶೇಕ್‌ಹ್ಯಾಂಡ್‌ ಇಲ್ಲ, ಡೋರ್‌ ಬಂದ್‌ ಮಾಡಿ ಸೋಲಿನ ಜೊತೆ ಮರ್ಯಾದೆಯನ್ನು ಕಳೆದು ಕಳಿಸಿದ ಟೀಮ್‌ ಇಂಡಿಯಾ!

 

ಒಂದು ವಾರದಲ್ಲಿ ನಿಶ್ಚಿತಾರ್ಥ ಜರುಗಬೇಕಿತ್ತು. ಇದರಿಂದ ರೇಣುಕಾ ಒಳಗೊಳಗೆ ಬೇಸರಗೊಂಡಿದ್ದಳು. ತಮ್ಮ ಪ್ರೇಮ ಪ್ರಕರಣ ಹಿರಿಯರಿಗೆ ತಿಳಿದರೆ ಸಮಸ್ಯೆ ಆಗಬಹುದು ಎಂಬ ಆತಂಕ ಮೂವರಲ್ಲಿತ್ತು. ಇದೇ ಕಾರಣಕ್ಕೆ ಕಳೆದ ವಾರವೇ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಅವರು ಬಂದಿದ್ದರು.

 

ಭಾನುವಾರ ತಿಮ್ಮಕ್ಕ, ರೇಣುಕಾ ಮತ್ತು ಅಪ್ರಾಪ್ತೆ ತಿಮ್ಮಕ್ಕನ ಹೊಲದಲ್ಲಿ ಕೆಲಸಕ್ಕೆ ಹೋಗಿದ್ದರು. ಆಗ ತಿಮ್ಮಕ್ಕ ಕ್ರಿಮಿನಾಶಕ ಸೇವಿಸಿದ್ದು, ನಂತರ ರೇಣುಕಾ ಮತ್ತು ಅಪ್ರಾಪ್ತೆ ಕೂಡ ಅದೇ ಕ್ರಿಮಿನಾಶಕ ಸೇವಿಸಿದ್ದಾರೆ. ತಿಮ್ಮಕ್ಕ ಒದ್ದಾಡಲು ಆರಂಭಿಸಿದಾಗ, ಆಕೆ ಮೃತಪಟ್ಟಿದ್ದಾಳೆಂದು ಭಾವಿಸಿ, ರೇಣುಕಾ ಹಾಗೂ ಅಪ್ರಾಪ್ತೆ ಭಯಗೊಂಡು ಹೊಲದಲ್ಲಿದ್ದ ಬಾವಿಗೆ ಹಾರಿದ್ದಾರೆ.TRASE Block Heels Sandals For Women, Dusky Stylish & Comfortable Footwear

 

ಆಗ ಸ್ಥಳೀಯರು ಧಾವಿಸಿ ಅಪ್ರಾಪ್ತೆಯನ್ನು ರಕ್ಷಿಸಿದ್ದಾರೆ. ಆದರೆ ರೇಣುಕಾ ಮೃತಪಟ್ಟಿದ್ದಳು. ಮಗಳ ಸಾವಿನ ಬಗ್ಗೆ ರೇಣುಕಾ ಕುಟುಂಬಸ್ಥರು, ತಿಮ್ಮಕ್ಕ ಮತ್ತು ಅಪ್ರಾಪ್ತೆ ಮೇಲೆ ಅನುಮಾನ ವ್ಯಕ್ತಪಡಿಸಿ ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 

ಸದ್ಯ ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿಷ ಸೇವಿಸಿದ್ದ ತಿಮ್ಮಕ್ಕಗೆ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅಪ್ರಾಪ್ತೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರೇಣುಕಾ ಕುಟುಂಬಸ್ಥರ ಆಕ್ರಂದನ ಮನಕಲಕುವಂತಿದೆ.