ಆನ್ಲೈನ್ ಮತ್ತು ಆಫ್ಲೈನ್ ಅಕ್ರಮ ಬೆಟ್ಟಿಂಗ್ ಆರೋಪ ಸಂಬಂಧಿತ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಮನ್ಸ್ ಜಾರಿ ಮಾಡಿರುವುದು ಹಾಗೂ ತನಿಖೆ ತಡೆ ಮತ್ತು ಬಲವಂತದ ಕ್ರಮ ಕೈಗೊಳ್ಳದಂತೆ ಕೋರಿ ಶಾಸಕ ವೀರೇಂದ್ರ ಪಪ್ಪಿ ಗೆಳೆಯರಾದ ಮತ್ತು ವಕೀಲ ಅನಿಲ್ ಗೌಡ ಸಲ್ಲಿಸಿರುವ ಮಧ್ಯಂತರ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಇಂದು ಪ್ರಕಟಿಸಲಿದೆ ಎಂಬ ಮಾಹಿತಿ ಇದೆ.
ಪ್ರಕರಣದ ಸಾರಾಂಶ:-
ಪ್ರಮುಖ ವ್ಯಕ್ತಿಗಳು: ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ (ಪಪ್ಪಿ) ಅವರು ಆನ್‌ಲೈನ್ ಮತ್ತು ಆಫ್ಲೈನ್ ಅಕ್ರಮ ಬೆಟ್ಟಿಂಗ್ (ಕ್ರಿಕೆಟ್ ಬೆಟ್ಟಿಂಗ್ ಮತ್ತು ಜೂಜೂಗಳ) ಮೂಲಕ ದೊರೆತ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪದಲ್ಲಿ ಎನ್‌ಫೋರ್ಸ್‌ಮೆಂಟ್ ಡೈರೆಕ್ಟ್‌ರೇಟ್ (ED) ತನಿಖೆಯಲ್ಲಿದ್ದಾರೆ. ಅವರ ಗೆಳೆಯ ಮತ್ತು ವಕೀಲ ಅನಿಲ್ ಗೌಡ ಅವರಿಗೂ ಈ ಪ್ರಕರಣದಲ್ಲಿ ಸಮನ್ಸ್ ಜಾರಿಗೊಳಿಸಲಾಗಿದೆ.Levi's Men's Slim Fit Mid Rise 511 Mid-Rise Jeans
ಅರ್ಜಿ ವಿವರ: ಅನಿಲ್ ಗೌಡ ಅವರು ED ಸಮನ್ಸ್ ಜಾರಿ ಮಾಡದಂತೆ, ತನಿಖೆಯಲ್ಲಿ ಬಲವಂತದ ಕ್ರಮಗಳು (arrest ಅಥವಾ coercive steps) ತೆಗೆದುಕೊಳ್ಳದಂತೆ ಕೋರಿ ಮಧ್ಯಂತರ ಅರ್ಜಿ (interim relief) ಸಲ್ಲಿಸಿದ್ದಾರೆ. ಅವರ ವಾದ: ಇದು ಅವರ ವೃತ್ತಿಪರ ಹಕ್ಕುಗಳ (advocate-client privilege) ಉಲ್ಲಂಘನೆ ಮತ್ತು ರಾಜಕೀಯದಿಂದ ಕೂಡಿದ್ದು ಬಲವಂತದ ಕ್ರಮಕ್ಕೆ ಇ,ಡಿ ಅಧಿಕಾರಿಗಳು ಮುಂದಾಗಬಾರದು ಎಂದು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ..ಇದನ್ನು ಓದಿ: ಮೂವರು ಯುವತಿಯರ ಆತ್ಮಹತ್ಯೆ ಯತ್ನ ಕೇಸ್‌ನಲ್ಲಿ ಟ್ವಿಸ್ಟ್...ಇವರ ಲವ್ ಕಹಾನಿ ಬಿಚ್ಚಿಡ್ತು ಮುಚ್ಚಿಟ್ಟ ಸತ್ಯ!
ED ವಾದ: ಅನಿಲ್ ಗೌಡ ಅವರು ವೀರೇಂದ್ರ ಅವರ ವಕೀಲರಲ್ಲ, ಬದಲಿಗೆ ಅವರ ಬೆಟ್ಟಿಂಗ್ ಸಂಸ್ಥೆಗಳಲ್ಲಿ (Diamond Softech, AVSVA Enterprises, ABH Infrastructure) ವ್ಯವಹಾರ ಸಹಭಾಗಿ. ಅವರು ಯುರೋ 31,000 (ಸುಮಾರು ₹28 ಲಕ್ಷ) ಅಕ್ರಮ ಹಣವನ್ನು ವಿದೇಶಿ ಬೆಟ್ಟಿಂಗ್ ಕಂಪನಿಗಳಿಗೆ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪ ಮಾಡಿದೆ.
ಹೀಗಾಗಿ ಇಂದಿನ ಹೈಕೋರ್ಟ್‌ನ ಆದೇಶ ಬಹು ಮುಖ್ಯದ್ದಾಗಿದೆ, ಏನಾದರೂ ಅದೇಶ ಅನಿಲ್ ಅವರ ವಿರುದ್ದ ಬಂದರೆ ಅವರನ್ನು ಬಂದಿಸಿ ವಿಚಾರಣೆ ನಡೆಸುವ ಎಲ್ಲಾ ಲಕ್ಷಣಗಳು ದಟ್ಟವಾಗಿದೆ.