ಬೆಂಗಳೂರು, ಸೆಪ್ಟೆಂಬರ್ 16: ಬೆಂಗಳೂರಿನಲ್ಲಿ ಮನೆ ಬಾಡಿಗೆಗೆ ಕೊಡುವ ಹೆಸರಿನಲ್ಲಿ ದೊಡ್ಡ ವಂಚನೆ ನಡೆಸುತ್ತಿದ್ದಾರೆ. ಕೆಟಿನಾ ಹೋಮ್ಸ್ ಇಂಡಿಯಾ ಎಂಬ ಕಂಪನಿಯ ಹೆಸರಲ್ಲಿ ವಿವೇಕ್ ಕೇಶವನ್ ಎಂಬಾತನು ನೂರಾರು ಕುಟುಂಬಗಳಿಂದ ಲಕ್ಷಾಂತರ ರೂಪಾಯಿ ಕಿತ್ತುಕೊಂಡು ಓಡಿ ಹೋಗಿದ್ದಾನೆ. ಈ ಬಗ್ಗೆ ಪರಪ್ಪನ ಅಗ್ರಹಾರ, ಹೆಬ್ಬಗೋಡಿ ಮತ್ತು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ.
ವಿವೇಕ್ ಕೇಶವನ್ ತನ್ನ ವೆಬ್‌ಸೈಟ್ ಮೂಲಕ ಮನೆಗಳನ್ನು ಬಾಡಿಗೆಗೆ ತೆಗೆದುಕೊಂಡು, ಅವುಗಳನ್ನೇ ಲೀಸ್‌ಗೆ ಕೊಡುವುದಾಗಿ ಹೇಳಿ ಜನರಿಂದ ದೊಡ್ಡ ಮೊತ್ತದ ಹಣ ಪಡೆದಿದ್ದಾನೆ. ಮೊದಲಿಗೆ ಒಂದೆರಡು ತಿಂಗಳು ಮನೆ ಮಾಲೀಕರಿಗೆ ಬಾಡಿಗೆ ಕೊಟ್ಟಿದ್ದಾನೆ. ಆದರೆ ಕಳೆದ ಆರು ತಿಂಗಳಿಂದ ಯಾವುದೇ ಹಣ ಕೊಟ್ಟಿಲ್ಲ. ಕಂಪನಿ ಕಚೇರಿಯನ್ನೂ ಖಾಲಿ ಮಾಡಿ ತಪ್ಪಿಸಿಕೊಂಡಿದ್ದಾನೆ. ಈ ವಂಚನೆಯಿಂದ ನೂರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಮನೆ ಮಾಲೀಕರು ಖಾಲಿ ಮಾಡುವಂತೆ ಒತ್ತಡ ಹಾಕುತ್ತಿದ್ದಾರೆ. ಜನರು ತಮ್ಮ ಲಕ್ಷಾಂತರ ರೂಪಾಯಿಯನ್ನು ಕಳೆದುಕೊಂಡು ಮನೆ ಇಲ್ಲದೆ ಬೀದಿಗೆ ಬೀಳುವ ಸ್ಥಿತಿಯಲ್ಲಿದ್ದಾರೆ. GLARE & BLAIR Ribbed Sleeveless Bodycon Tank Mini Cami Dress for Women
ಸುಮಾರು 60 ಕೋಟಿ ರೂಪಾಯಿಗಿಂತ ಹೆಚ್ಚಿನ ವಂಚನೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮಾರತ್ತಹಳ್ಳಿ, ಬಾಣಸವಾಡಿ, ಅಮೃತಹಳ್ಳಿ ಸೇರಿದಂತೆ ಬೆಂಗಳೂರಿನ ಹಲವು ಜಾಗಗಳಲ್ಲಿ ಈ ವಂಚನೆ ನಡೆದಿದೆ. ಸಂತ್ರಸ್ತರ ಒತ್ತಾಯ ವಂಚಕನನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಸಂತ್ರಸ್ತರು ಪೊಲೀಸರಿಗೆ ಒತ್ತಾಯಿಸಿದ್ದಾರೆ. ಆರೋಪಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಜೊತೆ ಫೋಟೊ ತೆಗೆಸಿಕೊಂಡು ಅದನ್ನು ವಂಚನೆಗೆ ಬಳಸಿಕೊಂಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.ರಾಯಚೂರು ಗಣೇಶ ಮೆರವಣಿಗೆ ವೇಳೆ ಭಾರೀ ಪೊಲೀಸ್ ಬಂದೋಬಸ್ತ್, ಜಾಥಾ ವೀಕ್ಷಣೆಗೆ ಒಂದು ಸಾವಿರ ಪೊಲೀಸ್ ನಿಯೋಜನೆ..!!
ಮನೆ ಲೀಸ್‌ಗೆ ತೆಗೆದುಕೊಳ್ಳುವ ಮುನ್ನ ದಾಖಲೆಗಳನ್ನು ಚೆನ್ನಾಗಿ ಪರಿಶೀಲಿಸಿ. ಮಧ್ಯವರ್ತಿಗಳು ಅಥವಾ ಕಂಪನಿಗಳ ಮೂಲಕ ಒಪ್ಪಂದ ಮಾಡುವಾಗ ಎಚ್ಚರಿಕೆಯಿಂದಿರಿ. ಹಣ ಕೊಡುವ ಮುನ್ನ ಮನೆಯನ್ನು ನೇರವಾಗಿ ನೋಡಿ, ವಕೀಲರ ಸಲಹೆ ಪಡೆಯಿರಿ.