Skip to main content
ವಿಡಿಯೋ
1/2
general

ಭಾರತದ ರಫ್ತುಗಳು ಟ್ಯಾರಿಫ್ ಹೊರಸಿರುವಾಗಲೂ ಏರಿಕೆ; ಆಗಸ್ಟ್‌ನಲ್ಲಿ ಟ್ರೇಡ್ ಗ್ಯಾಪ್ ಕಡಿಮೆ..!

By Vinutha U
ಭಾರತದ ರಫ್ತುಗಳು ಟ್ಯಾರಿಫ್ ಹೊರಸಿರುವಾಗಲೂ ಏರಿಕೆ; ಆಗಸ್ಟ್‌ನಲ್ಲಿ ಟ್ರೇಡ್ ಗ್ಯಾಪ್ ಕಡಿಮೆ..!

ಭಾರತದ ರಫ್ತು ಸರಕುಗಳಲ್ಲಿ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್, ಔಷಧ ಮತ್ತು ಇತರ ಸರಕುಗಳು ಪ್ರಮುಖವಾಗಿವೆ. ಆಮದು ಸರಕುಗಳಲ್ಲಿ ಚಿನ್ನ ಮತ್ತು ತೈಲದ ಪಾಲು ಹೆಚ್ಚಾಗಿದೆ. ಚಿನ್ನದ ಆಮದು ಜುಲೈನಲ್ಲಿ 3.9 ಬಿಲಿಯನ್ ಡಾಲರ್ ಆಗಿದ್ದು, ಆಗಸ್ಟ್‌ನಲ್ಲಿ 5.4 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ.

ನವದೆಹಲಿ, ಸೆಪ್ಟೆಂಬರ್ 16: ಆಗಸ್ಟ್ ತಿಂಗಳಲ್ಲಿ ಭಾರತದ ಜಾಗತಿಕ ವ್ಯಾಪಾರದಲ್ಲಿ ಎರಡು ಧನಾತ್ಮಕ ಬೆಳವಣಿಗೆಗಳು ಕಂಡುಬಂದಿವೆ. ಒಂದೆಡೆ ರಫ್ತು ಗಣನೀಯವಾಗಿ ಏರಿಕೆಯಾಗಿದ್ದು, ಇನ್ನೊಂದೆಡೆ ಆಮದು ಗಣನೀಯವಾಗಿ ಇಳಿಕೆಯಾಗಿದೆ. ಸರ್ಕಾರದ ದತ್ತಾಂಶದ ಪ್ರಕಾರ, ಆಗಸ್ಟ್‌ನಲ್ಲಿ ಭಾರತದ ವ್ಯಾಪಾರ ಕೊರತೆ ಗಮನಾರ್ಹವಾಗಿ ಕಡಿಮೆಯಾಗಿದೆ.

ರಫ್ತು 35.1 ಬಿಲಿಯನ್ ಡಾಲರ್ ತಲುಪಿದ್ದರೆ, ಆಮದು 61.59 ಬಿಲಿಯನ್ ಡಾಲರ್ ಆಗಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ರಫ್ತು 32.89 ಬಿಲಿಯನ್ ಡಾಲರ್ ಮತ್ತು ಆಮದು 68.53 ಬಿಲಿಯನ್ ಡಾಲರ್ ಆಗಿತ್ತು. ಈ ವರ್ಷ ರಫ್ತು ಶೇ. 6.7ರಷ್ಟು ಹೆಚ್ಚಾಗಿದ್ದು, ಆಮದು ಶೇ. 10.12ರಷ್ಟು ಕಡಿಮೆಯಾಗಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ 35.64 ಬಿಲಿಯನ್ ಡಾಲರ್ ಆಗಿದ್ದ ವ್ಯಾಪಾರ ಕೊರತೆ ಈ ವರ್ಷ 26.49 ಬಿಲಿಯನ್ ಡಾಲರ್‌ಗೆ ಇಳಿದಿದೆ.. ಬೆಂಗಳೂರಿನಲ್ಲಿ ಮನೆ ಲೀಸ್‌ಗೆ ಪಡೆಯುವವರು ಎಚ್ಚರಿಕೆಯಿಂದಿರಿ: ಕೋಟಿಗಟ್ಟಲೆ ವಂಚನೆ!

ಜುಲೈ 2025ರಲ್ಲಿ ವ್ಯಾಪಾರ ಕೊರತೆ 27.35 ಬಿಲಿಯನ್ ಡಾಲರ್ ಆಗಿದ್ದರಿಂದ, ಆಗಸ್ಟ್‌ನಲ್ಲಿ ಇದು ಮತ್ತಷ್ಟು ಕಡಿಮೆಯಾಗಿದೆ. 2025ರ ಏಪ್ರಿಲ್‌ನಿಂದ ಆಗಸ್ಟ್‌ವರೆಗಿನ ಒಟ್ಟು ರಫ್ತು 184.13 ಬಿಲಿಯನ್ ಡಾಲರ್ ಮತ್ತು ಆಮದು 306.52 ಬಿಲಿಯನ್ ಡಾಲರ್ ಆಗಿದೆ. ಭಾರತದ ರಫ್ತು ಸರಕುಗಳಲ್ಲಿ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್, ಔಷಧ ಮತ್ತು ಇತರ ಸರಕುಗಳು ಪ್ರಮುಖವಾಗಿವೆ. ಆಮದು ಸರಕುಗಳಲ್ಲಿ ಚಿನ್ನ ಮತ್ತು ತೈಲದ ಪಾಲು ಹೆಚ್ಚಾಗಿದೆ. ಚಿನ್ನದ ಆಮದು ಜುಲೈನಲ್ಲಿ 3.9 ಬಿಲಿಯನ್ ಡಾಲರ್ ಆಗಿದ್ದು, ಆಗಸ್ಟ್‌ನಲ್ಲಿ 5.4 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. GLARE & BLAIR Ribbed Sleeveless Bodycon Tank Mini Cami Dress for Women

ಆದರೆ, ಕಚ್ಛಾ ತೈಲದ ಆಮದು 15.5 ಬಿಲಿಯನ್ ಡಾಲರ್‌ನಿಂದ 13.3 ಬಿಲಿಯನ್ ಡಾಲರ್‌ಗೆ ಇಳಿದಿದೆ. ಅಮೆರಿಕದ ಸುಂಕ,  ಸಂಕಟದ ನಡುವೆಯೂ ಭಾರತದ ವ್ಯಾಪಾರ ವಹಿವಾಟು ಉತ್ತಮ ಮಟ್ಟದಲ್ಲಿದೆ. ಅಮೆರಿಕವು ಆಗಸ್ಟ್ 7ರಂದು ಶೇ. 25ರಷ್ಟು ಸುಂಕವನ್ನು ವಿಧಿಸಿತು ಮತ್ತು ಆಗಸ್ಟ್ 27ರಿಂದ ಭಾರತದ ಸರಕುಗಳ ಮೇಲೆ ಹೆಚ್ಚುವರಿ ಸುಂಕ ಸೇರಿ ಶೇ. 50ರಷ್ಟು ಸುಂಕ ಹಾಕಿತು. ಇದರ ಪರಿಣಾಮವು ಸೆಪ್ಟೆಂಬರ್ ತಿಂಗಳ ದತ್ತಾಂಶದಿಂದ ಸ್ಪಷ್ಟವಾಗಲಿದೆ. ಸಿಗರೇಟ್ ವಿಚಾರಕ್ಕೆ ಬೇಕರಿ ಮಾಲೀಕನ ಮೇಲೆ ಹಲ್ಲೆ..!