ಬೆಂಗಳೂರಿನ ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ "ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ನಿಲ್ದಾಣ" ಎಂದು ಮರುನಾಮಕರಣ ಮಾಡುವಂತೆ ಬಿಜೆಪಿ ಎಂಎಲ್‌ಸಿ ಡಾ. ಎಂ.ಜಿ. ಮುಳೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಸಂಬಂಧ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ, ಶಿವಾಜಿ ಮಹಾರಾಜರ ಬಾಲ್ಯದ ಬಹುದೊಡ್ಡ ಭಾಗ ಶಿವಾಜಿನಗರದಲ್ಲಿ ಕಳೆದಿದೆ ಎಂದು ಡಾ. ಮುಳೆ ವಿವರಿಸಿದ್ದಾರೆ. ಅವರ ತಂದೆ ಷಹಾಜಿ ಮಹಾರಾಜರು ಬೆಂಗಳೂರನ್ನು ಆಳುತ್ತಿದ್ದ ಕಾರಣ, ಈ ಪ್ರದೇಶವು ಶಿವಾಜಿ ಮಹಾರಾಜರ ಹೆಸರಿನೊಂದಿಗೆ ಐತಿಹಾಸಿಕ ಸಂಬಂಧ ಹೊಂದಿದೆ. ಈ ಕಾರಣದಿಂದಲೇ ಹಿಂದಿನ ಮೈಸೂರು ಮಹಾರಾಜರು ಈ ಪ್ರದೇಶಕ್ಕೆ 'ಶಿವಾಜಿನಗರ' ಎಂದು ಹೆಸರಿಸಿದ್ದರು.GLARE & BLAIR Ribbed Sleeveless Bodycon Tank Mini Cami Dress for Women
ಛತ್ರಪತಿ ಶಿವಾಜಿ ಕೇವಲ ಮರಾಠ ಸಮುದಾಯಕ್ಕೆ ಸೀಮಿತರಾಗಿರಲಿಲ್ಲ. ಜಾತಿ-ಧರ್ಮ ಭೇದವಿಲ್ಲದೆ ಎಲ್ಲರನ್ನು ಒಗ್ಗೂಡಿಸಿ ಆಳ್ವಿಕೆ ನಡೆಸಿದವರು. ಇವರು ಯುವ ಪೀಳಿಗೆಗೆ ಸದಾ ಸ್ಫೂರ್ತಿಯಾಗಿದ್ದಾರೆ. ಮಹಿಳೆಯರ ಬಗ್ಗೆ ಅಪಾರ ಗೌರವ ತೋರಿದ ರಾಜನಾಗಿ ಇತಿಹಾಸದಲ್ಲಿ ಅವರು ಪ್ರಸಿದ್ಧರಾಗಿದ್ದಾರೆ. ಅವರು ಸ್ಥಾಪಿಸಿದ "ಹಿಂದುವಿ ಸ್ವರಾಜ್ಯ" ದೇಶಕ್ಕೆ ಮಹತ್ವದ ಕೊಡುಗೆಯಾಗಿದೆ ಎಂದು ಮುಳೆ ತಿಳಿಸಿದ್ದಾರೆ.ಬಿಜೆಪಿಯವರಿಗೆ ಪಾಕಿಸ್ತಾನ, ಧರ್ಮ ಅನ್ನೋ ವಿಚಾರಗಳ ಬಗ್ಗೆ ಮಾತಾಡದೇ ರಾಜಕೀಯ ಮಾಡೋಕೆ ಗೊತ್ತೇ ಇಲ್ಲ: ಸಂತೋಷ್ ಲಾಡ್ ಕಿಡಿ..!!
ಶಿವಾಜಿನಗರದಲ್ಲಿ ಕನ್ನಡ ಮತ್ತು ಮರಾಠ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರ ನಡುವೆ ಉತ್ತಮ ಸೌಹಾರ್ದವಿದೆ. ಈ ಹಿನ್ನೆಲೆಯಲ್ಲಿ, ಸಮಸ್ತ ಕರ್ನಾಟಕ ಮರಾಠ ಸಮಾಜ ಹಾಗೂ ಅಖಿಲ ಭಾರತ ಛತ್ರಪತಿ ಶಿವಾಜಿ ಮಹಾರಾಜರ ಅಭಿಮಾನಿಗಳ ಪರವಾಗಿ ಈ ಬೇಡಿಕೆಯನ್ನು ಇಡಲಾಗಿದೆ. ಮೆಟ್ರೋ ನಿಲ್ದಾಣಕ್ಕೆ ಮಹಾರಾಜರ ಹೆಸರನ್ನು ಇಡುವ ಮೂಲಕ ಅವರ ಕೊಡುಗೆಗೆ ಗೌರವ ಸಲ್ಲಿಸಬೇಕೆಂಬುದು ಸಮುದಾಯದ ಆಗ್ರಹವಾಗಿದೆ.