Skip to main content
ವಿಡಿಯೋ
1/2
politics

ಬಿಜೆಪಿಯವರಿಗೆ  ಪಾಕಿಸ್ತಾನ, ಧರ್ಮ  ಅನ್ನೋ ವಿಚಾರಗಳ ಬಗ್ಗೆ ಮಾತಾಡದೇ ರಾಜಕೀಯ  ಮಾಡೋಕೆ ಗೊತ್ತೇ ಇಲ್ಲ: ಸಂತೋಷ್‌ ಲಾಡ್‌ ಕಿಡಿ..!!

By Pavitra Ganapathi Baradavalli
ಬಿಜೆಪಿಯವರಿಗೆ  ಪಾಕಿಸ್ತಾನ, ಧರ್ಮ  ಅನ್ನೋ ವಿಚಾರಗಳ ಬಗ್ಗೆ ಮಾತಾಡದೇ ರಾಜಕೀಯ  ಮಾಡೋಕೆ ಗೊತ್ತೇ ಇಲ್ಲ: ಸಂತೋಷ್‌ ಲಾಡ್‌ ಕಿಡಿ..!!

ಜಾತಿ ಸಮೀಕ್ಷೆ ಪ್ರಾರಂಭಕ್ಕೂ ಮುನ್ನವೇ ಹಲವಾರು ವಿಚಾರಗಳು ಮುನ್ನಲೆಗೆ ಬರುತ್ತಲೇ ಇವೆ. ಈಗಾಗಲೇ ಜಾತಿ ಜ್ವಾಲೆ ಕಿಚ್ಚು ಎಲ್ಲೆಡೆ ಹೊತ್ತಿಕೊಂಡಿದೆ. ಮತಾಂತರ ಕ್ರಿಶ್ಚಿಯನ್‌ ಹಿಂದೂ ಸಮುದಾಯಕ್ಕೆ ಸೇರಿಸಬೇಕು ಎಂಬ ಅಹವಾಲುಗಳು ಹೆಚ್ಚಾಗಿ ಕೇಳಿಬರುತ್ತಿದೆ.

ಬೆಂಗಳೂರು: ಜಾತಿ ಸಮೀಕ್ಷೆ ಪ್ರಾರಂಭಕ್ಕೂ ಮುನ್ನವೇ ಹಲವಾರು ವಿಚಾರಗಳು ಮುನ್ನಲೆಗೆ ಬರುತ್ತಲೇ ಇವೆ. ಈಗಾಗಲೇ ಜಾತಿ ಜ್ವಾಲೆ ಕಿಚ್ಚು ಎಲ್ಲೆಡೆ ಹೊತ್ತಿಕೊಂಡಿದೆ. ಮತಾಂತರ ಕ್ರಿಶ್ಚಿಯನ್‌ ಹಿಂದೂ ಸಮುದಾಯಕ್ಕೆ ಸೇರಿಸಬೇಕು ಎಂಬ ಅಹವಾಲುಗಳು ಹೆಚ್ಚಾಗಿ ಕೇಳಿಬರುತ್ತಿದೆ. ಮತ್ತು ಕುರುಬ ಸಮುದಾಯವನ್ನು ಎಸ್ಸಿಗೆ ಸೇರಿಸಬೇಕು ಎಂಬ ಚರ್ಚೆಗಳು ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಾಗುತ್ತಿವೆ.ಇದನ್ನೂ ಓದಿ: ಸಾವಿನಲ್ಲೂ ಮಾನವೀಯತೆ ಮೆರೆದ KSRTC ಚಾಲಕ: ಹೃದಯಾಘಾತವಾದಾಗ ಬಸ್‌ ಅನ್ನು ಸೈಡ್‌ನಲ್ಲಿ ನಿಲ್ಲಿಸಿದ ಪುಣ್ಯಾತ್ಮ: ಮಾಹಿತಿ ಹೀಗಿದೆ


ಇದಕ್ಕೆ ಸಂಬಂಧಿಸಿದಂತೆ ವಿಶೇಷ ಸಂಪುಟ ಸಭೆ ಪ್ರಾರಂಭಕ್ಕೂ ಮುನ್ನ ಕಾರ್ಮಿಕ ಸಚಿವರಾದ ಸಂತೋಷ್‌ ಲಾಡ್‌ ಮಾಧ್ಯಮದೊಂದಿಗೆ ಮಾತನಾಡಿದ ಅವರು ಕುರುಬ ಸಮುದಾಯವನ್ನು ಎಸ್ಸಿಗೆ ಸೇರಿಸಬೇಕು ಎಂಬುದಾಗಿ ಸಾಕಷ್ಟು ಒತ್ತಾಯಗಳು ಕೇಳಿಬರುತ್ತಿವೆ ಆದರೆ ಆ ಕುರಿತು ನಾನು ಎನ್ನನ್ನೂ ಮಾತನಾಡಲು ಇಷ್ಟ ಪಡುವುದಿಲ್ಲ ಎಂದರು..
ಇದನ್ನೂ ಓದಿ: ಬರೀ ಹಣ್ಣುಗಳನ್ನೆ ತಿಂದು ಬದುಕಲು ಸಾಧ್ಯವೇ? ಇಲ್ಲಿದೆ ನೀವರಿಯದ ಅಚ್ಚರಿ ಮಾಹಿತಿ!

ಜಾತಿ ಸಮೀಕ್ಷೆ ಯಲ್ಲಿ ಕ್ರಿಶ್ಚಿಯನ್ ಲಿಂಗಾಯತ, ಕ್ರಿಶ್ಚಿಯನ್ ಕುರುಬ ಎಂಬ ಕಾಲಂ ಗೆ ಬಿಜೆಪಿ ವಿರೋಧ ವಿಚಾರವನ್ನು ಉಲ್ಲೇಖಿಸಿದ ಅವರು ಬಿಜೆಪಿಯವರಿಗೆ ಮಾಡಲು ಬೇರೆ ಕೆಲಸವಿಲ್ಲ, ಜಾತಿ ಧರ್ಮ ಅನ್ನೋ ವಿಚಾರ ಬಂದಾಗ ಮಾತ್ರ ಫುಲ್ ಆಕ್ಟಿವ್ ಆಗ್ತಾರೆ. ಆದ್ರೆ ಇಂಡಿಯಾ ಪಾಕಿಸ್ತಾನ ಜೊತೆಗೆ ಮ್ಯಾಚ್‌ ಆಡುವಾಗ ಮಾತ್ರ ಏಕೆ ವಿರೋಧ ಮಾಡಲಿಲ್ಲ.

ಆಪರೇಷನ್ ಸಿಂಧೂರ ಅಂದ್ರು, ಪಾಕ್ ಗೆ ನೀರು ಬಿಡುವುದು ನಿಲ್ಲಿಸಿದ್ರು, ಆದ್ರೆ ಕ್ರಿಕೆಟ್ ಮ್ಯಾಚ್ ಬಂದಾಗ ಮಾತ್ರ ಸುಮ್ಮನೆ ಆದ್ರು ಇದು ಯಾವ ರೀತಿಯ ಬಿಜೆಪಿಯವರ ನಡೆ ಎಂದು ಪ್ರಶ್ನಿಸಿದರು.ಇದನ್ನೂ ಓದಿ: ವೈದ್ಯಕೀಯ ಕ್ಷೇತ್ರದಲ್ಲಿ ಆತ್ಮಹತ್ಯೆ ತಡೆಗೆ ಸಂಶೋಧನಾ ಕೇಂದ್ರ: ಕರ್ನಾಟಕ–ಬ್ರಿಟನ್ ಸಹಭಾಗಿತ್ವ


ಅಮಿತ್ ಶಾ ಮಗ ಬಿಸಿಸಿಐ ನಲ್ಲಿ ಇದ್ದಾರೆ ಅನ್ನೋ ಕಾರಣಕ್ಕೆ ಸುಮ್ನೇ ಆದ್ರಾ ಎಂದು ಹೇಳಿದರು. ಇವರಿಗೆ ಪಾಕಿಸ್ತಾನ, ಧರ್ಮ  ಅನ್ನೋ ವಿಚಾರಗಳ ಬಗ್ಗೆ ಮಾತಾಡದೇ ರಾಜಕೀಯ  ಮಾಡೋಕೆ ಗೊತ್ತೇ ಇಲ್ಲ ಇರಬೇಕು ಎಂದು ಕಿಡಿಕಾರಿದರು. ಜೊತೆಗೆ ಕೃಷ್ಣಾ ಮೇಲ್ದಂಡೆ ವಿಚಾರವಾಗಿ ಸಂಪುಟ ಸಭೆ ಕರೆಯಲಾಗಿದೆ ಮುಗಿದ ಮೇಲೆ ಸಂಪೂರ್ಣವಾಗಿ ಮಾತನಾಡುತ್ತೇನೆ ಎಂದರು..Akaabo Women's Kanjivaram Art Silk Saree Soft Banarasi Style Sari with Blouse Piece | Elegant Ethnic Wear Saree for Festivals and Special Occasions