Skip to main content
ವಿಡಿಯೋ
1/2
politics

ಕಾಂಗ್ರೆಸ್ MLAಗೆ ಬಿಗ್ ಶಾಕ್ ನೀಡಿದ ಹೈಕೋರ್ಟ್: ಶಾಸಕ ನಂಜೇಗೌಡ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್: ಕಾರಣ ಹೀಗಿದೆ

By Gireesh Vasishta
ಕಾಂಗ್ರೆಸ್ MLAಗೆ ಬಿಗ್ ಶಾಕ್ ನೀಡಿದ ಹೈಕೋರ್ಟ್: ಶಾಸಕ ನಂಜೇಗೌಡ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್: ಕಾರಣ ಹೀಗಿದೆ

ಬಿಜೆಪಿ ಪರಾಜಿತ ಅಭ್ಯರ್ಥಿ ಕೆ ಎಸ್. ಮಂಜುನಾಥ್ ಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಕೆ. ದೇವದಾಸ್ .ಆರ್ ಅವರಿದ ನ್ಯಾಯ ಪೀಠವು ವಿಚಾರಣೆ ನಡೆಸಿದ ಬಳಿಕ ಇಂದು ತೀರ್ಪು ನೀಡಿತು. ಹಾಗೂ ಶಾಸಕರಾದ ಕೆ ವೈ. ನಂಜೇಗೌಡ ಅವರ ಆಯ್ಕೆಯನ್ನು ಅನುಚಿತಗೊಳಿಸಬೇಕು ಎಂದು ತಿಳಿಸಿದೆ.

ಕಾಂಗ್ರೆಸ್ MLA​ಗೆ ಬಿಗ್ ಶಾಕ್ ನೀಡಿದ ಹೈಕೋರ್ಟ್: ಶಾಸಕ ನಂಜೇಗೌಡ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್: ಕಾರಣ ಹೀಗಿದೆ

ಬೆಂಗಳೂರು/ಕೋಲಾರ (ಸೆಪ್ಟೆಂಬರ್ 16): ಕಳೆದ ವಿಧಾನಸಭಾ ಚುನಾವಣೆಯಲ್ಲಿ(2023) ಕ್ಷೇತ್ರದ ಕಾಂಗ್ರೆಸ್ಶಾಸಕ ಕೆ.ವೈ ನಂಜೇಗೌಡ (KY Nanjegowda) ಅವರ ಆಯ್ಕೆಯನ್ನು ಕರ್ನಾಟಕ ಹೈಕೋರ್ಟ್‌ (Karnataka High Court) ಅಸಿಂಧುಗೊಳಿಸಿದೆ. ಮಾತ್ರವಲ್ಲದೇ, ಮತಗಳ ಮರು ಎಣಿಕೆ ಮಾಡುವಂತೆ ಸೂಚನೆ ನೀಡಿದೆ.

ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ ವೈ. ನಂಜೇಗೌಡ ಅವರ ಆಯ್ಕೆಯನ್ನು ಕರ್ನಾಟಕ ಹೈಕೋರ್ಟ್ ಇಂದು ಅಸಿಂಧುಗೊಳಿಸಿದೆ. ಮರು ಎಣಿಕೆಗೆ ಆದೇಶಿಸಿದ ನಂತರ ಶಾಸಕರ ಒತ್ತಾಯದ ಮೇರೆಗೆ 30 ದಿನ ತಡೆ ಹಿಡಿದಿದ್ದು, ಅವರಿಗೆ ಸುಪ್ರೀಂ ಕೋರ್ಟ್‌ಗೆ ತೆರಳುವ ಅವಕಾಶ ನೀಡಿದ ಹೈಕೋರ್ಟ್.ಇದನ್ನು ಓದಿ: ಸಾವಿನಲ್ಲೂ ಮಾನವೀಯತೆ ಮೆರೆದ KSRTC ಚಾಲಕ: ಹೃದಯಾಘಾತವಾದಾಗ ಬಸ್‌ ಅನ್ನು ಸೈಡ್‌ನಲ್ಲಿ ನಿಲ್ಲಿಸಿದ ಪುಣ್ಯಾತ್ಮ: ಮಾಹಿತಿ ಹೀಗಿದೆ

ಕಾರಣ ಹೀಗಿದೆ:

- ಜಿಲ್ಲಾ ಚುನಾವಣಾ ಅಧಿಕಾರಿ ಮತ ಎಣಿಕೆಯ ವಿಡಿಯೋ ಸಲ್ಲಿಸಿಲ್ಲ.

-ಜಿಲ್ಲಾ ಚುನಾವಣಾಧಿಕಾರಿ ವಿರುದ್ಧ ಕ್ರಮಕ್ಕೆ ಸೂಚಿಸಿ 4  ವಾರದಲ್ಲಿ ಮರು ಮತ ಎಣಿಕೆ ನಡೆಸಲು ಆದೇಶಿಸಿದೆ.

ಬಿಜೆಪಿ ಪರಾಜಿತ ಅಭ್ಯರ್ಥಿ ಕೆ ಎಸ್. ಮಂಜುನಾಥ್ ಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ನ್ಯಾಯ ಪೀಠವು ವಿಚಾರಣೆ ನಡೆಸಿದ ಬಳಿಕ ಇಂದು ತೀರ್ಪು ನೀಡಿತು. ಹಾಗೂ ಶಾಸಕರಾದ ಕೆ ವೈ. ನಂಜೇಗೌಡ ಅವರ ಆಯ್ಕೆಯನ್ನು ಅನುಚಿತಗೊಳಿಸಬೇಕು ಎಂದು ತಿಳಿಸಿದೆ.PALAY® Straw Hat Sun Hats for Women,Wide Brim Cap Beach Hat for Women Stylish UV Protection Cap,Summer Packable Travel Sun Visor Hat - UPF 50+


 ಮತ ಎಣಿಕೆಯಲ್ಲಿ ಲೋಪವಾಗಿದೆ ಎಂಬ ಬಿಜೆಪಿ ಅಭ್ಯರ್ಥಿಯ ಆರೋಪದ ಮೇರೆಗೆ ಮತ್ತೊಮ್ಮೆ ಎಣಿಕೆಯನ್ನು ಮಾಡುವಂತೆ ಸೂಚಿಸಲಾಗಿದೆ. ಇದಲ್ಲದೆ ವಕೀಲರ ಮನವಿ ಮೇರೆಗೆ ಶಾಸಕ ಸ್ಥಾನ ಎಂದು ನೀಡಿದ್ದ ಆದೇಶಕ್ಕೆ 30 ದಿನಗಳ ಕಾಲ ತಡೆ ನೀಡಿದೆ. ಹಾಗೂ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಬಹುದು ಎಂದು ತಿಳಿಸಿದೆ. 2023 ವಿಧಾನಸಭಾ ಚುನಾವಣೆಯಲ್ಲಿ 248 ಮತಗಳ ಅಂತರದಿಂದ ಜಯಗಳಿಸಿದ್ದ ಶಾಸಕ ಕೆ ವೈ. ನಂಜೇಗೌಡ ಅವರ ಗೆಲುವಿನ ಮೇಲೆ ಪ್ರತಿಸ್ಪರ್ತಿ ಕೆ ಎಸ್ . ಮಂಜುನಾಥ್ ಗೌಡ ಅನುಮಾನ ವ್ಯಕ್ತಪಡಿಸಿ ಮತ ಎಣಿಕೆ ಲೋಪವಾಗಿದೆ ಎಂದು ಹೈಕೋರ್ಟ್‌ಗೆ ಮನವಿ ಮಾಡಿದ್ದರು.