Skip to main content
ವಿಡಿಯೋ
1/2
politics

46 ಹಿಂದು ಉಪಜಾತಿಗಳನ್ನು ಕ್ರೈಸ್ತರ ಪಟ್ಟಿಯಲ್ಲಿ ತೋರಿಸುವ ಯತ್ನ..!

By Sushmitha R
46 ಹಿಂದು ಉಪಜಾತಿಗಳನ್ನು ಕ್ರೈಸ್ತರ ಪಟ್ಟಿಯಲ್ಲಿ ತೋರಿಸುವ  ಯತ್ನ..!

ಬೆಳಗಾವಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸೆಪ್ಟೆಂಬರ್ 22ರಿಂದ ನಡೆಸಲಿರುವ ಜಾತಿ ಸಮೀಕ್ಷೆಯಲ್ಲಿ ಹಿಂದು ಧರ್ಮಕ್ಕೆ ಸೇರಿದ 46 ಉಪಜಾತಿಗಳನ್ನು ಕ್ರೈಸ್ತ ಧರ್ಮದ ಪಟ್ಟಿಯಲ್ಲಿ ತೋರಿಸುವ ದುರಾಸೆಗೆ ರಾಜ್ಯ ಸರ್ಕಾರ ಕೈಹಾಕಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಗಂಭೀರ ಆರೋಪ ಮಾಡಿದರು.

ಬೆಳಗಾವಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸೆಪ್ಟೆಂಬರ್ 22ರಿಂದ ನಡೆಸಲಿರುವ ಜಾತಿ ಸಮೀಕ್ಷೆಯಲ್ಲಿ ಹಿಂದು ಧರ್ಮಕ್ಕೆ ಸೇರಿದ 46 ಉಪಜಾತಿಗಳನ್ನು ಕ್ರೈಸ್ತ ಧರ್ಮದ ಪಟ್ಟಿಯಲ್ಲಿ ತೋರಿಸುವ ದುರಾಸೆಗೆ ರಾಜ್ಯ ಸರ್ಕಾರ ಕೈಹಾಕಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಗಂಭೀರ ಆರೋಪ ಮಾಡಿದರು. ಕಾಂಗ್ರೆಸ್ ಪಕ್ಷ ಪಾಕ್ ಉಗ್ರರನ್ನು ಬೆಂಬಲಿಸುತ್ತದೆ ಎಂದು ಪ್ರಧಾನಿ ಮೋದಿ ಆರೋಪ..!

ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದು ಧರ್ಮವನ್ನು ಒಡೆಯುವುದೇ ಕಾಂಗ್ರೆಸ್ ಸರ್ಕಾರದ ಅಜೆಂಡಾ ಎಂದು ಆರೋಪಿಸಿದರು. ಸಮೀಕ್ಷೆಗಾಗಿ ಪ್ರಕಟಿಸಲಾದ ಪಟ್ಟಿಯಲ್ಲಿ ಹಿಂದು ಧರ್ಮದ 46 ಉಪಜಾತಿಗಳು ಕ್ರೈಸ್ತ ಧರ್ಮದ ವರ್ಗದಲ್ಲಿವೆ. Naixa Women's Rayon Slub Embroidered Straight Kurta with Pant and Dupatta Sets (Available in Plus Size) (NX-676)

ಈ ಮೂಲಕ ಹಿಂದೂ ಧರ್ಮದ ವಿಭಜನೆಗೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ಮಹಾಂತೇಶ ಆರೋಪಿಸಿದರು. ಹಿಂದಿನ ಕಾಂತರಾಜ್ ವರದಿಯಂತೆ ಈ ಸಮೀಕ್ಷೆಯೂ ವೈಜ್ಞಾನಿಕವಲ್ಲ, ನ್ಯಾಯಸಮ್ಮತವಲ್ಲ. 2014-15ರ ಸಮೀಕ್ಷೆಯನ್ನು ಸರ್ಕಾರ ಕೈಬಿಟ್ಟಿದ್ದರೂ, ಈಗ ಮತ್ತೆ ಹಿಂದುಗಳಿಗೆ ಕ್ರೈಸ್ತರ ಹೆಸರು ಸೇರಿಸುವುದು ಸರಿಯಲ್ಲ ಎಂದರು.

ಸರ್ಕಾರ ತಕ್ಷಣ ಆದೇಶ ಹಿಂದಿರುಗಿಸಿ, ತಪ್ಪನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು. ಈ ಸಮೀಕ್ಷೆ 15 ದಿನಗಳ ಕಾಲ ನಡೆಯುತ್ತದೆ ಎಂದು ಸರ್ಕಾರ ಹೇಳಿದ್ದರೂ, ಪ್ರಕಟಣೆಯಲ್ಲಿ ಹಿಂದು ಸಮುದಾಯಗಳನ್ನು ಕ್ರೈಸ್ತರ ಹೆಸರಿನಲ್ಲಿ ಹೆಸರಿಸುವ ಉದ್ದೇಶ ಸ್ಪಷ್ಟ ಎಂದು ಮಹಾಂತೇಶ ಕವಟಗಿಮಠ ಖಂಡಿಸಿದರು. ವಕ್ಫ್ ತಿದ್ದುಪಡಿ ಕಾಯ್ದೆ 2025: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು… ಪ್ರಮುಖ ಸೆಕ್ಷನ್‌ಗಳಿಗೆ ತಾತ್ಕಾಲಿಕ ತಡೆ!

ಹಿಂದು ಜನಜಾಗೃತಿ ವೇದಿಕೆ ಈ ನಿರ್ಧಾರವನ್ನು ತೀವ್ರವಾಗಿ ಖಂಡಿಸುತ್ತದೆ ಎಂದರು. ಈ ವಿಷಯದ ಕುರಿತು ಚರ್ಚೆಗಾಗಿ ಬೆಳಗಾವಿಯ ಗಾಂಧಿ ಭವನದಲ್ಲಿ ಸೆಪ್ಟೆಂಬರ್ 17ರಂದು 46 ಸಮಾಜಗಳ ನಾಯಕರ ಸಭೆ ಕರೆಯಲಾಗಿದೆ. ಸರ್ಕಾರ ಕ್ರಿಶ್ಚಿಯನ್ ಪದವನ್ನು ವಾಪಸ್ ಪಡೆಯಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.ಕೃಷ್ಣಾ ಮೇಲ್ದಂಡೆ ಯೋಜನೆ - ರೈತರ ಭೂಮಿ ಪರಿಹಾರ & ಕುರುಬ ಸಮುದಾಯ ಮೀಸಲು ಚರ್ಚೆ – ಇಂದು ಸರ್ಕಾರದಿಂದ ಎರಡು ಮಹತ್ವದ ಸಭೆಗಳು