Skip to main content
ವಿಡಿಯೋ
1/2
general

ಭಕ್ತರು ನೀಡಿದ ಕಾಣಿಕೆ ಹಣವನ್ನು ಸತ್ಕಾರ್ಯಗಳಿಗೆ ಬಳಸಿ, ಮದುವೆ ಸಭಾಂಗಣ ನಿರ್ಮಿಸುವುದಕ್ಕಲ್ಲ. ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ತಿರುಗೇಟು..!!

By Pavitra Ganapathi Baradavalli
ಭಕ್ತರು ನೀಡಿದ ಕಾಣಿಕೆ ಹಣವನ್ನು ಸತ್ಕಾರ್ಯಗಳಿಗೆ ಬಳಸಿ, ಮದುವೆ ಸಭಾಂಗಣ ನಿರ್ಮಿಸುವುದಕ್ಕಲ್ಲ. ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ತಿರುಗೇಟು..!!

ಭಾರತದಲ್ಲಿ ದೇವರನ್ನು ನಂಬುವ ಜನರು ಸಾಕಷ್ಟಿದ್ದಾರೆ ಅದರ ಪ್ರಕಾರ ದೇವಾಲಯಗಳ ಸಂಖ್ಯೆಯೂ ಸಾಕಷ್ಟು ಇದೆ. ಹಾಗಾಗಿ ದಿನಾಲು ದೇವಾಲಯಕ್ಕೆ ಆಗಮಿಸುವವರು ಕಾಣಿಕೆ ಹಾಕುವವರ ಪ್ರಮಾಣವೂ ಸಾಕಷ್ಟಿರುತ್ತದೆ. ಹಾಗೇ ನೋಡುವುದಾದರೆ ಭಾರತದಲ್ಲಿ ಸಂಗ್ರಹವಾಗುವ ಕಾಣಿಕೆ ಪ್ರಮಾಣ ಹೆಚ್ಚಾಗಿಯೇ ಇರುತ್ತದೆ. ಈಗ ಸುಪ್ರೀಂ ಕೋರ್ಟ್‌ ಕಾಣಿಕೆಯಲ್ಲಿ ಸಂಗ್ರಹವಾಗುವ ಹಣ ಸರಿಯಾದ ರೀತಿಯಲ್ಲಿ ವಿನಿಯೋಗವಾಗಬೇಕೆಂದು ಅಭಿಪ್ರಾಯ ಪಟ್ಟಿದೆ.

ನವದೆಹಲಿ: ಭಾರತದಲ್ಲಿ ದೇವರನ್ನು ನಂಬುವ ಜನರು ಸಾಕಷ್ಟಿದ್ದಾರೆ ಅದರ ಪ್ರಕಾರ ದೇವಾಲಯಗಳ ಸಂಖ್ಯೆಯೂ ಸಾಕಷ್ಟು ಇದೆ. ಹಾಗಾಗಿ ದಿನಾಲು ದೇವಾಲಯಕ್ಕೆ ಆಗಮಿಸುವವರು ಕಾಣಿಕೆ ಹಾಕುವವರ ಪ್ರಮಾಣವೂ ಸಾಕಷ್ಟಿರುತ್ತದೆ. ಹಾಗೇ ನೋಡುವುದಾದರೆ ಭಾರತದಲ್ಲಿ ಸಂಗ್ರಹವಾಗುವ ಕಾಣಿಕೆ ಪ್ರಮಾಣ ಹೆಚ್ಚಾಗಿಯೇ ಇರುತ್ತದೆ. ಈಗ ಸುಪ್ರೀಂ ಕೋರ್ಟ್‌ ಕಾಣಿಕೆಯಲ್ಲಿ ಸಂಗ್ರಹವಾಗುವ ಹಣ ಸರಿಯಾದ ರೀತಿಯಲ್ಲಿ ವಿನಿಯೋಗವಾಗಬೇಕೆಂದು ಅಭಿಪ್ರಾಯ ಪಟ್ಟಿದೆ.ಇದನ್ನೂ ಓದಿ: ಅನರ್ಹ ಬಿಪಿಎಲ್‌ ಕಾರ್ಡಗಳ ರದ್ದತಿ ಇಲ್ಲ, ಬೆಂಗಳೂರಿನಲ್ಲಿ ಕೆ.ಹೆಚ್. ಮುನಿಯಪ್ಪ ಸ್ಪಷ್ಟನೆ..!!


ಅಂದರೆ ಭಕ್ತರು ದೇವರಿಗೆ ಹಾಕುವ ಹಣ ಶಿಕ್ಷಣ, ವೈದ್ಯಕೀಯ ಸಂಸ್ಥೆಗಳಂತಹ ಕಾರ್ಯಗಳಿಗೆ ವಿನಿಯೋಗವಾಗಬೇಕೆ ಹೊರತು ಮದುವೆ ಸಭಾಂಗಣಗಳನ್ನು ನಿರ್ಮಿಸುವುದಕ್ಕಲ್ಲ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ತಿಳಿಸಿದೆ. ತಮಿಳುನಾಡಿನಲ್ಲಿ ದೇವಸ್ಥಾನಗಳಿಗೆ ಭಕ್ತರು ನೀಡಿದ ಕಾಣಿಕೆ ಹಣ 80 ಕೋಟಿ ರೂಗಳನ್ನು ಬಳಸಿ ರಾಜ್ಯದ 27 ದೇವಸ್ಥಾನಗಳಲ್ಲಿ ಮದುವೆ ಸಭಾಂಗಣಗಳನ್ನು ನಿರ್ಮಿಸಿ, ಅವುಗಳನ್ನು ಬಾಡಿಗೆ ಕೊಡುವುದಾಗಿ ತಮಿಳುನಾಡು ಸರ್ಕಾರ ತಿಳಿಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲವರು ಮದ್ರಾಸ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಧರ್ಮಸ್ಥಳ: ನೇತ್ರಾವತಿ ತೀರದಲ್ಲಿ ಎಸ್‌ಐಟಿ ತನಿಖೆ..!

ಅದರ ಪ್ರಕಾರ ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್‌ ಹೈಕೋರ್ಟ್‌ ಭಕ್ತರ ಕಾಣಿಕೆ ಹಣವನ್ನು ವಾಣಿಜ್ಯ ಉದ್ಧೇಶಗಳಿಗೆ ಬಳಸುವಂತಿಲ್ಲ ಎಂಬುದಾಗಿ ತೀರ್ಪು ನೀಡಿತ್ತು ಆದರೆ ಆ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಆದರೆ ಸುಪ್ರೀಂ ಕೋರ್ಟ್‌ ಮದ್ರಾಸ್‌ ಹೈ ಕೋರ್ಟ್‌ ತೀರ್ಪನ್ನು ಎತ್ತಿ ಹಿಡಿದಿದೆ. ಸಲ್ಲಿಯಾಗಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಭಕ್ತರು ನೀಡಿರುವ ಕಾಣಿಕೆ ಮದುವೆ ಸಭಾಂಗಣಗಳನ್ನು ನಿರ್ಮಿಸುವುದಕ್ಕಲ್ಲ ಬದಲಿಗೆ ದೇವಸ್ಥಾನದ ಅಭಿವೃದ್ಧಿಗಾಗಿ ಕೊಟ್ಟಿರಬಹುದು.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ: ಬಂಗ್ಲೆಗುಡ್ಡ ಅರಣ್ಯದಲ್ಲಿ SIT ಭಯಂಕರ ಶೋಧ...ಏನಾದ್ರೂ ಪತ್ತೆಯಾಯ್ತಾ?


ದೇವಸ್ಥಾನದ ಆವರಣದಲ್ಲಿ ಮದುವೆ ಪಾರ್ಟಿ ನಡೆಯುತ್ತಿದ್ದರೆ ಮತ್ತು ಅಶ್ಲೀಲ ಹಾಡುಗಳನ್ನು ಹಾಕಿದರೆ, ಅದು ದೇವಸ್ಥಾನದ ಉದ್ದೇಶವೇ? ಭಕ್ತರ ಹಣ ಶಿಕ್ಷಣ, ವೈದ್ಯಕೀಯದಂತಹ ಸತ್ಕಾರ್ಯಗಳಿಗೆ ಬಳಕೆಯಾಗಬೇಕು ಎಂದು ಅಭಿಪ್ರಾಯಪಟ್ಟಿದೆ. ಹಾಗಾಗಿ ಭಕ್ತರು ಶ್ರದ್ಧಾ ಭಕ್ತಿಯಿಂದ ನೀಡಿದ ಹಣ ಯಾವುದಾದರೂ ಒಳ್ಳೆಯ ಕಾರ್ಯಗಳಿಗೆ ವಿನಿಯೋಗವಾಗಬೇಕು ಎಂದ ತಿಳಿಸಿದೆ.Garden Vareli Women's Linen Saree With Zari Border