Skip to main content
ವಿಡಿಯೋ
1/2
general

ಬೆಂಗಳೂರು ರಸ್ತೆ ಸಮಸ್ಯೆಗಳು ಗಂಭೀರ - ʻಆಡಳಿತ ವೈಫಲ್ಯʼ ಎಂದ ಪ್ರಮುಖ ಟೆಕ್‌ ಕಂಪನಿಗಳ ಮುಖ್ಯಸ್ಥರಿಂದ ಸರ್ಕಾರದ ಮಧ್ಯಸ್ತಿಕೆಗೆ ಒತ್ತಾಯ.!

By Shravanthi R
ಬೆಂಗಳೂರು ರಸ್ತೆ ಸಮಸ್ಯೆಗಳು ಗಂಭೀರ - ʻಆಡಳಿತ ವೈಫಲ್ಯʼ ಎಂದ ಪ್ರಮುಖ ಟೆಕ್‌ ಕಂಪನಿಗಳ ಮುಖ್ಯಸ್ಥರಿಂದ ಸರ್ಕಾರದ ಮಧ್ಯಸ್ತಿಕೆಗೆ ಒತ್ತಾಯ.!

ನಗರ ಹೊರವರ್ತುಲ ರಸ್ತೆಯಲ್ಲಿರುವ ಸಂಚಾರ ದಟ್ಟಣೆ, ಕಳಪೆ ಹಾಗೂ ಮೂಲಸೌಕರ್ಯಗಳ ಕೊರತೆ ಬಗ್ಗೆ ಪ್ರಸ್ತಾಪಿಸಿ, ತಮ್ಮ ಕಂಪನಿಯ ಕಚೇರಿಯನ್ನು ಸ್ಥಳಾಂತರಿಸುವುದಾಗಿ ತಿಳಿಸಿದ ಬಳಿಕ, ಬೆಂಗಳೂರಿನಲ್ಲಿ `ಆಡಳಿತದ ದೊಡ್ಡ ವೈಫಲ್ಯʼ ಎಂದು ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಪೈ ಅವರು ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು: ನಗರದ ಪ್ರಮುಖ ರಸ್ತೆ ಹಾಗೂ ಇಲ್ಲಿನ ಮೂಲಸೌಕರ್ಯಗಳ ಕೊರತೆ ಕಾರಣದಿಂದ, ಪ್ರಮುಖ ಟೆಕ್‌ ಕಂಪನಿಗಳು ಕಚೇರಿಗಳನ್ನು ಸ್ಥಳಾಂತರಿಸಲು ಕಾಲ್ಕಿತ್ತಿವೆ. ಬೆಂಗಳೂರಿನ ಅವ್ಯವಸ್ಥೆಯನ್ನು ಈ ಹಿಂದೆ ಉಲ್ಲೇಖಿಸಿ, ಲಾಜಿಸ್ಟಿಕ್ಸ್‌ ಟೆಕ್‌ ಕಂಪನಿಯ ಬ್ಲಾಕ್‌ಬಕ್‌ನ ಸಹ- ಸಂಸ್ಥಾಪಕ ರಾಜೇಶ್‌ ಯಾಬಾಜಿ ಅವರು ದೂರಿದ್ದಾರೆ. 

ಮಂಗಳವಾರ, ಬ್ಲ್ಯಾಕ್‌ಬಕ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ರಾಜೇಶ್ ಯಬಾಜಿ, "ಒಆರ್‌ಆರ್ (ಬೆಳ್ಳಂದೂರು) ಕಳೆದ 9 ವರ್ಷಗಳಿಂದ ಕಚೇರಿ ಹಾಗೂ ಮನೆಯಾಗಿದೆ ಆದರೆ, ಇನ್ನೂ ಈ ಪರಿಸ್ಥಿತಿಯಲ್ಲಿ ಮುಂದುವರೆಯುವುದು ಕಷ್ಟಕರವಾಗಿದೆ, ನಮ್ಮ ಸಹೋದ್ಯೋಗಿಗಳು ಸಂಚಾರ ಮಾಡಲು ಕಷ್ಟವಾಗಿದೆ. ಕಳೆದ ಐದು ವರ್ಷಗಳಿಂದ ಈ ಸಮಸ್ಯೆಯನ್ನು ಬಗೆಹರಿಸುವ ಪರಿಹಾರವೇ ಇಲ್ಲವಾಗಿದೆ. ಎನ್ನುವ ಮೂಲಕ ಪರಿಸ್ಥಿತಿಯ ಗಂಭೀರತೆಯನ್ನು ಕಟ್ಟಿಕೊಟ್ಟಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ರಸ್ತೆ ಅಪಘಾತ ಸಂತ್ರಸ್ತರಿಗೆ ರಾಜ್ಯ ಸರ್ಕಾರದ ಹೊಸ ಪರಿಹಾರ ಕ್ರಮ - ಹೆಚ್ಚುವರಿ 1 ಲಕ್ಷ ನೆರವು

ಇದೀಗ ಬಯೋಕಾನ್‌ ಸಂಸ್ಥಾಪಕಿ ಮಜೂಂದಾರ್‌ ಷಾ ಹಾಗೂ ಹಾಗೂ ಮೋಹನ್‌ದಾಸ್‌ ಪೈ ಇನ್ಫೋಸಿಸ್‌ ಮಾಜಿ ಸಿಫ್‌ಓ ಇದೊಂದು ʻ ದೊಡ್ಡ ಆಡಳಿತ ವೈಫಲ್ಯʼ ಎಂದು ಟೀಕಿಸಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಕೂಡಲೇ ಕರ್ನಾಟಕ ಸರ್ಕಾರ ತುರ್ತು ಹಸ್ತಕ್ಷೇಪ ಮಾಡಬೇಕೆಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಇಲ್ಲಿನ ರಸ್ತೆ ಗುಂಡಿಗಳು ಧೂಳಿನಿಂದ ತುಂಬಿಕೊಂಡಿವೆ. ಸರಾಸರಿ ಪ್ರಯಾಣಿಕರು ಸಂಚರಿಸುವ ಸಮಯ 1.5 ಗಂಟೆಗಿಂತಲೂ ಹೆಚ್ಚು ತೆಗೆದುಕೊಳ್ಳುತ್ತಿದೆ. ಇದೇ ರೀತಿ ಒಆರ್‌ಆರ್‌ (Outer Ring Road) ಉದ್ದಕ್ಕೂ ಇರುವ ಹಲವಾರು ಸಂಸ್ಥೆಗಳು ಇದೇ ರೀತಿಯ ನಡೆಯನ್ನು, ಅಭಿಪ್ರಾಯವನ್ನು ಹೊಂದಿದ್ದಾರೆ ಎನ್ನಲಾಗಿದೆ.Tapo C500 Outdoor Pan/Tilt Home Security WiFi Smart Camera | 2MP 1080p Full HD Live View | 360° Visual Coverage | Night Vision | Support Alexa and Google Assistant | 2-Way Audio

ನಗರ ಹೊರವರ್ತುಲ ರಸ್ತೆಯಲ್ಲಿರುವ ಸಂಚಾರ ದಟ್ಟಣೆ, ಕಳಪೆ ಹಾಗೂ ಮೂಲಸೌಕರ್ಯಗಳನ್ನು ಕೊರತೆ ಬಗ್ಗೆ ಪ್ರಸ್ತಾಪಿಸಿ, ತಮ್ಮ ಕಂಪನಿಯ ಕಚೇರಿಯನ್ನು ಸ್ಥಳಾಂತರಿಸುವುದಾಗಿ ತಿಳಿಸಿದ ಬಳಿಕ, ʻಬೆಂಗಳೂರಿನಲ್ಲಿ ಆಡಳಿತದ ದೊಡ್ಡ ವೈಫಲ್ಯʼ ಎಂದು ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಪೈ ಅವರು ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ತಮ್ಮ ಎಕ್ಸ್‌ನಲ್ಲಿನ ಪೋಸ್ಟ್‌ ಮಾಡುವ ಮೂಲಕ ಅವರು, ಬೆಂಗಳೂರು ಅಭಿವೃದ್ಧಿ ಸಚಿವ ಮತ್ತು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿ, "ದಯವಿಟ್ಟು ಮಧ್ಯಪ್ರವೇಶಿಸಿ ನೋಡಿ, ಪರಿಸ್ಥಿತಿ ಭರವಸೆಯನ್ನೂ ಮೀರಿದೆ,” ಎಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ. 

ಪೈ ಅವರ ಪೋಸ್ಟ್ ಅನ್ನೇ ಮರು ಪೋಸ್ಟ್ ಮಾಡಿರುವ ಕಿರಣ್‌ ಮಜುಂದಾರ್‌ ಅವರು, "ಇದು ಗಂಭೀರವಾಗಿದೆ. ಈ ಸಮಸ್ಯೆಗಳನ್ನು ಸರಿಪಡಿಸಲು ತುರ್ತು ಕ್ರಮಗಳು ಅಗತ್ಯವಿದೆ" ಎಂದು ತಿಳಿಸಿದರು ಎನ್ನಲಾಗಿದೆ. ಇದೀಗ ರಾಜ್ಯ ಸರ್ಕಾರವು ಯಾವ ರೀತಿ ಸ್ಪಂದನೆ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಇದನ್ನೂ ಓದಿ: ಕೊಪ್ಪಳದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿಯಿಂದ ಬಿಜೆಪಿಗೆ ತಿರುಗೇಟು..!