‘ಹಳ್ಳಿ ಪವರ್’ ಶೋ ಯಾವಾಗಲೂ ಹೊಸತನದ ಮನರಂಜನೆಯಿಂದ ಪ್ರೇಕ್ಷಕರ ಗಮನ ಸೆಳೆಯುತ್ತಲೇ ಬಂದಿದೆ. ಈ ಬಾರಿ ಶೋನಲ್ಲಿ ಎತ್ತಿನ ಗಾಡಿ ಓಡಿಸುವ ವಿಶೇಷ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸಾಮಾನ್ಯವಾಗಿ ಕಾರು ಓಡಿಸುವುದು ಸುಲಭ ಎನ್ನಬಹುದು, ಆದರೆ ಎತ್ತಿನ ಗಾಡಿ ಓಡಿಸುವುದು ಅಷ್ಟೇನೂ ಸರಳ ಕೆಲಸವಲ್ಲ. ಸಮತೋಲನ, ಗಾಡಿಯ ವೇಗ, ಎತ್ತುಗಳ ನಿಯಂತ್ರಣ—ಎಲ್ಲವೂ ಒಂದೇ ಸಮಯದಲ್ಲಿ ನಿರ್ವಹಿಸಬೇಕಾಗುತ್ತದೆ.ಪ್ರಧಾನಿ ಮೋದಿ ಅವರ 75ನೇ ಜನ್ಮದಿನದಂದು 'ಮಾ ವಂದೇ' ಸಿನಿಮಾ ಘೋಷಣೆ...ಇದು 'ನಮೋ' ಜೀವನಾಧಾರಿತ ಸಿನಿಮಾ!
ಸ್ಪರ್ಧೆಯಲ್ಲಿ ಪ್ಯಾಟೆ ಹುಡುಗಿಯರು ಉತ್ಸಾಹದಿಂದ ಭಾಗವಹಿಸಿದ್ದರು. ಅವರು ಎತ್ತಿನ ಗಾಡಿ ಸವಾರಿ ಪ್ರಾರಂಭಿಸುತ್ತಿದ್ದಂತೆ ಗಾಡಿ ಅಕಸ್ಮಾತ್ ಅಸಮತೋಲನಗೊಂಡು ಎತ್ತೆತ್ತಲೋ ಹಾರಿ ಹೋಗಿತು. ಇದರ ಪರಿಣಾಮವಾಗಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದವರು ಕೆಳಗೆ ಬಿದ್ದ ಘಟನೆ ನಡೆದಿದೆ. ಅದೃಷ್ಟವಶಾತ್, ಯಾರಿಗೂ ಗಂಭೀರ ಗಾಯಗಳಾಗಿಲ್ಲ.Titan Edge Quartz Analog White Dial Black Leather Strap Watch For Men - NT1595WL01
ಈ ಘಟನೆ ನಡೆದ ಕ್ಷಣವನ್ನು ಒಳಗೊಂಡಿರುವ ಪ್ರೋಮೋವನ್ನು ಜೀ ಪವರ್ ಬಿಡುಗಡೆ ಮಾಡಿದ್ದು, ಈಗ ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪ್ರೇಕ್ಷಕರು ಆ ವಿಡಿಯೋ ನೋಡಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಈ ಅವಘಡದ ಬಳಿಕ ಶೋ ತಂಡ ಭದ್ರತಾ ಕ್ರಮಗಳನ್ನು ಮತ್ತಷ್ಟು ಕಠಿಣಗೊಳಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.