Skip to main content
ವಿಡಿಯೋ
1/2
weather

ಹಿಮಾಚಲ ಪ್ರದೇಶದಲ್ಲಿ ವರುಣನ ಆರ್ಭಟಕ್ಕೆ ಭೀಕರ ಪ್ರವಾಹ..!

By Sushmitha R
ಹಿಮಾಚಲ ಪ್ರದೇಶದಲ್ಲಿ ವರುಣನ ಆರ್ಭಟಕ್ಕೆ ಭೀಕರ ಪ್ರವಾಹ..!

ಹಿಮಾಚಲ ಪ್ರದೇಶದಲ್ಲಿ ವರುಣನ ಆರ್ಭಟ ತೀವ್ರಗೊಂಡಿದೆ. ಭಾರೀ ಮಳೆಯಿಂದಾಗಿ ಭೂಕುಸಿತ, ಸೇತುವೆ ಕುಸಿತ ಮತ್ತು ಪ್ರವಾಹದ ಭೀತಿ ಜನರನ್ನು ಕಾಡುತ್ತಿದೆ.

ಹಿಮಾಚಲ ಪ್ರದೇಶದಲ್ಲಿ ವರುಣನ ಆರ್ಭಟ ತೀವ್ರಗೊಂಡಿದೆ. ಭಾರೀ ಮಳೆಯಿಂದಾಗಿ ಭೂಕುಸಿತ, ಸೇತುವೆ ಕುಸಿತ ಮತ್ತು ಪ್ರವಾಹದ ಭೀತಿ ಜನರನ್ನು ಕಾಡುತ್ತಿದೆ. ಇದೇ ರೀತಿ ಉತ್ತರಾಖಂಡದಲ್ಲಿಯೂ ಮಳೆಯ ಆರ್ಭಟ ಜೋರಾಗಿದ್ದು, ಭೂಕುಸಿತ ಮತ್ತು ಸೇತುವೆ ಕುಸಿತದಿಂದ ಜನರು ಸಂಚಾರಕ್ಕೆ ಭಯಪಡುತ್ತಿದ್ದಾರೆ. ಸೆಪ್ಟೆಂಬರ್‌ ಮೊದಲ ದಿನವೇ ಬೆಂಗಳೂರಿನಲ್ಲಿ ಅಬ್ಬರಿಸಿದ ವರುಣ..!

ರಸ್ತೆಗಳು ಮಾಯವಾಗಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಪ್ರವಾಹದ ಭೀತಿ ಎದುರಾಗಿದೆ. ಅನೇಕ ಕಡೆ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಕೆಲವರು ಪ್ರವಾಹದ ನೀರಿನಲ್ಲಿ ಸಿಲುಕಿಕೊಂಡಿದ್ದಾರೆ. Saregama Carvaan Punjabi - Portable Music Player with 5000 Preloaded Songs, FM/BT/AUX (Porcelain White)

ಭೂಕುಸಿತದಿಂದ ಮನೆಗಳು, ರಸ್ತೆಗಳು ಮತ್ತು ಮೂಲಭೂತ ಸೌಕರ್ಯಗಳು ಧ್ವಂಸಗೊಂಡಿದ್ದು, ಜನರು ತಮ್ಮ ಆಸ್ತಿಪಾಸ್ತಿಯನ್ನು ಕಳೆದುಕೊಂಡು ಕಣ್ಣೀರು ಸುರಿಸುತ್ತಿದ್ದಾರೆ. ವರುಣನ ತಾಂಡವದಿಂದ ಮನೆಗಳ ಒಳಗೆ ನೀರು ನುಗ್ಗಿದ್ದು, ಸುಮಾರು 100 ಮೀಟರ್‌ ಉದ್ದದ ರಸ್ತೆಯೊಂದು ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದೆ.

ಸೇತುವೆಯೊಂದು ಕುಸಿದು, ಸಂಪರ್ಕ ಕಡಿತಗೊಂಡಿದ್ದರಿಂದ ಜನರು ತಮ್ಮ ದೈನಂದಿನ ಚಟುವಟಿಕೆಗಳನ್ನು ಮುಂದುವರಿಸಲು ತೊಂದರೆ ಎದುರಿಸುತ್ತಿದ್ದಾರೆ. ಈ ವಿಪತ್ತಿನಿಂದಾಗಿ ಜನರು ಆತಂಕದಲ್ಲಿದ್ದಾರೆ. ಸರ್ಕಾರ ಮತ್ತು ರಕ್ಷಣಾ ತಂಡಗಳು ಸಂತ್ರಸ್ತರಿಗೆ ನೆರವು ನೀಡುವ ಕಾರ್ಯದಲ್ಲಿ ತೊಡಗಿವೆ.ಭಾರೀ ಮಳೆಯಿಂದ ತತ್ತರಿಸಿದ ಕರ್ನಾಟಕ: ಈಗ ಕೊಂಚ ನಿರಾಳತೆ..!

ಆದರೆ, ಭಾರೀ ಮಳೆ ಮತ್ತು ಭೂಕುಸಿತದಿಂದ ರಕ್ಷಣಾ ಕಾರ್ಯಾಚರಣೆಗೂ ತೊಡಕು ಉಂಟಾಗಿದೆ. ಜನರು ತಮ್ಮ ಪ್ರೀತಿಪಾತ್ರರನ್ನು, ಆಸ್ತಿಯನ್ನು ಕಳೆದುಕೊಂಡು ದಿಕ್ಕೆಟ್ಟಿದ್ದಾರೆ. ಮೂಲಭೂತ ಸೌಕರ್ಯಗಳ ಕೊರತೆಯಿಂದ ಜನಜೀವನ ಸ್ಥಗಿತಗೊಂಡಿದೆ.ಕೊಡಗು ಸಂಕಷ್ಟದಲ್ಲಿ: ಮಾನ್ಸೂನ್ ಪ್ರವಾಹ ಮತ್ತು ಭೂಕುಸಿತಗಳಿಂದ ಜಿಲ್ಲೆಯಲ್ಲಿ ವಿನಾಶ..!