Skip to main content
ವಿಡಿಯೋ
1/3
cinema

57ನೇ ವಸಂತದ ಹೊಸ್ತಿಲಲ್ಲಿ ಉಪೇಂದ್ರ...'ಗೆರಿಲ್ಲಾ ವಾರ್' ಪೋಸ್ಟರ್ ಬಿಡುಗಡೆ ಮಾಡಿದ ಚಿತ್ರತಂಡ! ಓಂ ಪ್ರಕಾಶ್ ರಾವ್ ಆಕ್ಷನ್ ಕಟ್

By Ram Chethan
57ನೇ ವಸಂತದ ಹೊಸ್ತಿಲಲ್ಲಿ ಉಪೇಂದ್ರ...'ಗೆರಿಲ್ಲಾ ವಾರ್' ಪೋಸ್ಟರ್ ಬಿಡುಗಡೆ ಮಾಡಿದ ಚಿತ್ರತಂಡ! ಓಂ ಪ್ರಕಾಶ್ ರಾವ್ ಆಕ್ಷನ್ ಕಟ್

ಉಪೇಂದ್ರ ವೀರ ಯೋಧನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ‘ಗೆರಿಲ್ಲಾ ವಾರ್’ ಹೊಸ ಪೋಸ್ಟರ್ ಅವರ ನಾಳೆ ಹುಟ್ಟುಹಬ್ಬ ಇರುವುದರಿಂದ ಅನಾವರಣಗೊಳ್ಳಿತು. ಓಂ ಪ್ರಕಾಶ್ ರಾವ್ ನಿರ್ದೇಶನದಲ್ಲಿ ಈ ಚಿತ್ರವು ಉಪೇಂದ್ರ ಮತ್ತು ಅವರ ಅಭಿಮಾನಿಗಳಿಗಾಗಿ ವಿಶೇಷ ಉತ್ಸವವಾಗಿರಲಿದೆ.

ರಿಯಲ್ ಸ್ಟಾರ್ ಉಪೇಂದ್ರ ಅವರ 57ನೇ ಹುಟ್ಟುಹಬ್ಬದ ಮುನ್ನಾದಿನ, 'ಗೆರಿಲ್ಲಾ ವಾರ್' ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಉಪೇಂದ್ರ ಅವರಿಗೆ ಈ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಚಿತ್ರದ ಕುರಿತ ಇನ್ನಷ್ಟು ಮಾಹಿತಿ ಇಲ್ಲಿದೆ.

'ಗೆರಿಲ್ಲಾ ವಾರ್' ಸಿನಿಮಾದಲ್ಲಿ ಉಪೇಂದ್ರ ವೀರ ಯೋಧನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯುದ್ಧಭೂಮಿಯಲ್ಲಿ ಹೋರಾಡುವ ಸೈನಿಕನ ರೂಪದಲ್ಲಿರುವ ಪೋಸ್ಟರ್ ಇದೀಗ ರಿವೀಲ್ ಆಗಿದ್ದು, ಉಪೇಂದ್ರ ಅವರ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಇದನ್ನು ಅನಾವರಣಗೊಳಿಸಲಾಗಿದೆ.Titan Edge Quartz Analog White Dial Black Leather Strap Watch For Men - NT1595WL01

ಓಂ ಪ್ರಕಾಶ್ ರಾವ್ ನಿರ್ದೇಶನದ 50ನೇ ಚಿತ್ರ ಇದಾಗಿದ್ದು, ಉಪೇಂದ್ರ ಜೊತೆಗಿನ ಅವರ ಎರಡನೇ ಸಹಯೋಗವಾಗಿದೆ. ಈ ಹಿಂದೆ 'ತ್ರಿಶೂಲಂ' ಚಿತ್ರದಲ್ಲಿ ಈ ಜೋಡಿ ಕೆಲಸ ಮಾಡಿತ್ತು. ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಉಪೇಂದ್ರ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದೆ.

ಚಿತ್ರದ ಕಥೆಯನ್ನು ಡೆನ್ನಿಸಾ ಪ್ರಕಾಶ್ ಬರೆದಿದ್ದು, ಓಂ ಪ್ರಕಾಶ್ ರಾವ್ ಚಿತ್ರಕಥೆ ಮತ್ತು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ರವಿಕುಮಾರ್ ಛಾಯಾಗ್ರಹಣ ನಿರ್ವಹಿಸಿದ್ದು, ರವಿ ವರ್ಮ ಸಾಹಸ ನಿರ್ದೇಶನ ಮಾಡಿದ್ದಾರೆ. ಓಂ ಪ್ರಕಾಶ್ ರಾವ್ ಮತ್ತು ಆರ್. ವಾಸುದೇವ ರೆಡ್ಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.ಪ್ರಧಾನಿ ಮೋದಿ ಅವರ 75ನೇ ಜನ್ಮದಿನದಂದು 'ಮಾ ವಂದೇ' ಸಿನಿಮಾ ಘೋಷಣೆ...ಇದು 'ನಮೋ' ಜೀವನಾಧಾರಿತ ಸಿನಿಮಾ!

ಈ ಚಿತ್ರದಲ್ಲಿ ನಿಮಿಕಾ ರತ್ನಾಕರ್ ಉಪೇಂದ್ರಗೆ ನಾಯಕಿಯಾಗಿ ನಟಿಸಿದ್ದು, ರಂಗಾಯಣ ರಘು, ಅಚ್ಯುತ್ ಕುಮಾರ್, ಭಾಸ್ಕರ್ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿದ್ದಾರೆ.

'ಗೆರಿಲ್ಲಾ ವಾರ್' ಕೇವಲ ಗಡಿಯಲ್ಲಿ ಹೋರಾಡುವ ಸೈನಿಕನ ಕಥೆಯಲ್ಲ. ಸಮಾಜದ ಸಮಸ್ಯೆಗಳ ವಿರುದ್ಧ ಹೋರಾಡುವ ಧೀಮಂತ ನಾಯಕನ ಕುರಿತಾಗಿದೆ ಎಂದು ನಿರ್ದೇಶಕ ಓಂ ಪ್ರಕಾಶ್ ರಾವ್ ತಿಳಿಸಿದ್ದಾರೆ.

ಓಂ ಪ್ರಕಾಶ್ ರಾವ್ ಇತ್ತೀಚೆಗೆ 'ಫೀನಿಕ್ಸ್' ಎಂಬ ಮತ್ತೊಂದು ಚಿತ್ರದ ಕೆಲಸವನ್ನು ಮುಗಿಸಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ 'ಫೀನಿಕ್ಸ್' ಚಿತ್ರೀಕರಣದ ಜೊತೆಗೇ ಅವರು 'ಗೆರಿಲ್ಲಾ ವಾರ್' ಚಿತ್ರವನ್ನು ಸಹ ನಿರ್ದೇಶಿಸಿದ್ದಾರೆ.