ಸಚಿವ ಶಿವರಾಜ್ ತಂಗಡಗಿ ಕ್ಷೇತ್ರದಲ್ಲೇ ರಸ್ತೆ ಕಳಪೆ ಕಾಮಗಾರಿ: ಕೇಳೋರ್ಯಾರು ರಸ್ತೆ ಗೋಳು? ಇವರಿಂದ ನಮ್ಮ ತೆರಿಗೆ ಹಣ ಹಾಳು?
ಮಲ್ಲಿಗವಾಡ(ಕೊಪ್ಪಳ); ಕರ್ನಾಟಕದ ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರ ಆಯ್ಕೆ ಕ್ಷೇತ್ರವಾದ ಕನಕಗಿರಿ ತಾಲೂಕಿನ ಮಲ್ಲಿಗವಾಡ ಗ್ರಾಮದಲ್ಲಿ ರಸ್ತೆ ಕಾಮಗಾರಿಯಲ್ಲಿ ಗಂಭೀರ ಲೋಪಗಳು ಕಂಡುಬಂದಿವೆ. ಕೇವಲ ಆರೇ ತಿಂಗಳಲ್ಲಿ ಹಾಕಿದ ಡಾಂಬರ್ ಕಿತ್ತು ಬಂದಿದ್ದು, ಉದ್ಘಾಟನೆಗೂ ಮುನ್ನವೇ ಕಳಪೆ ಕಾಮಗಾರಿಯ ಆರೋಪಗಳು ಎದ್ದಿವೆ. ಈ ವಿಷಯವು ಸಾರ್ವಜನಿಕರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆಯ ಹಿನ್ನೆಲೆ ಸ್ಥಳ: ಕನಕಗಿರಿ ತಾಲೂಕು, ಮಲ್ಲಿಗವಾಡ ಗ್ರಾಮ (ಕೊಪ್ಪಳ ಜಿಲ್ಲೆ).
-ಕಾಮಗಾರಿ: ರಸ್ತೆಯ ಡಾಂಬರೀಕರಣ ಕೆಲಸ, ಕಳೆದ ಆರೇ ತಿಂಗಳಲ್ಲಿ ಪೂರ್ಣಗೊಂಡಿದೆ.
-ಸಮಸ್ಯೆ: ಮಳೆಯೊಂದಿಗೆ ಡಾಂಬರ್ ಪದರ ಪದರವಾಗಿ ಕಿತ್ತು ಬಂದಿದ್ದು, ರಸ್ತೆಯಲ್ಲಿ ದೊಡ್ಡ ಗುಂಡಿಗಳು ಉಂಟಾಗಿವೆ. ಇದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ.
-ಹಿಂದಿನ ಸ್ಥಿತಿ: ಕಳೆದ ನಾಲ್ಕು ವರ್ಷಗಳಲ್ಲಿ ಈ ಪ್ರದೇಶದಲ್ಲಿ ಒಂದೇ ಒಂದು ರಸ್ತೆ ಕಾಮಗಾರಿಯೂ ಆಗಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಇದನ್ನು ಓದಿ:; ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಇಟಲಿ ಪ್ರಧಾನಮಂತ್ರಿ ಜಾರ್ಜಿಯ ಮೇಲೋನಿ ಇಂದ ಶುಭಾಷಯ: ಮೋದಿ ಪ್ರತಿಕ್ರಿಯೆ ಹೀಗಿತ್ತು
ಸಚಿವರ ಪ್ರತಿಕ್ರಿಯೆ- ಸಚಿವ ಶಿವರಾಜ್ ತಂಗಡಗಿ ಅವರು ಈ ಆರೋಪಗಳನ್ನು ಒಪ್ಪಿಕೊಂಡಿದ್ದು, "ಹೌದು, ಕಳಪೆ ಕಾಮಗಾರಿ ಆಗಿದೆ. ಯಾವ ರಸ್ತೆಗಳು ಕಳಪೆಯಾಗಿವೆಯೊಂದು ಅಂತಹ ರಸ್ತೆಗಳನ್ನು ಪುನಃ ಕಾಮಗಾರಿ ಮಾಡಲು ಸೂಚನೆ ನೀಡಿದ್ದೇನೆ" ಎಂದು ಹೇಳಿದ್ದಾರೆ. ಇದರೊಂದಿಗೆ, ಗುತ್ತಿಗೆದಾರರು ಮತ್ತು ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆದೇಶ ನೀಡಲಾಗಿದೆ.Fflirtygo Men Graphic Print Cotton T-Shirt & Short Set for Men/Boys
ಸಾರ್ವಜನಿಕರ ಪ್ರತಿಕ್ರಿಯೆ- ಸ್ಥಳೀಯರು ಈ ಕಳಪೆ ಕಾಮಗಾರಿಯನ್ನು "ಲೂಟಿಯಾಟ" ಎಂದು ಕರೆದು, ರಾಜಕೀಯ ಪ್ರಯೋಜನಕ್ಕಾಗಿ ಜನರ ಹಣವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇದೆ ರೀತಿಯ ಕಳಪೆ ಕಾಮಗಾರಿಗಳು ವರದಿಯಾಗುತ್ತಿದ್ದರು ಕೇಳುವವರು ಯಾರು ಇಲ್ಲದಂತಾಗಿದೆ, ಸಾರ್ವಜನಿಕರ ಹಣ ಹೀಗೆ ಪೋಲಾದರೆ ಗತಿಯೇನು ಎಂಬ ಪ್ರಶ್ನೆ ಉಂಟಾಗಿದೆ. ಇಂತಹ ಕೆಲಸ ಮಾಡುವ ಕಂಟ್ರಾಕ್ಟರ್‌ಗಳ ವಿರುದ್ದ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗಿದೆ.