Skip to main content
ವಿಡಿಯೋ
1/2
politics

ನೇಪಾಳದಂತೆಯೇ ರಾಜ್ಯದಲ್ಲಿ ಸಿಡಿದೆದ್ದ Gen Z ಪ್ರತಿಭೆ : ಹಾಸ್ಟೆಲ್ ಸೀಟು ಸಿಗದ ಹಿನ್ನೆಲೆ ಸಚಿವರ ವಿರುದ್ಧ ಸಮರ..!

By Sushmitha R
ನೇಪಾಳದಂತೆಯೇ ರಾಜ್ಯದಲ್ಲಿ ಸಿಡಿದೆದ್ದ Gen Z ಪ್ರತಿಭೆ : ಹಾಸ್ಟೆಲ್ ಸೀಟು ಸಿಗದ ಹಿನ್ನೆಲೆ ಸಚಿವರ ವಿರುದ್ಧ ಸಮರ..!

ಜೆನ್ ಜೀ ವಿದ್ಯಾರ್ಥಿನಿ ಐಶ್ವರ್ಯಾ, ಶೇ. 88 ಅಂಕಗಳಿದ್ದರೂ ಹಾಸ್ಟೆಲ್ ಸೀಟು ಸಿಕ್ಕದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಡ ಕುಟುಂಬದ ಮಗಳಾಗಿ ಸನ್ಮಾನ ತಿರಸ್ಕರಿಸಿ ನ್ಯಾಯಬದ್ಧ ಸೌಲಭ್ಯ ಕೋರಿ ಅವರು ಸಚಿವರ ವಿರುದ್ಧ ಸಿಡಿದೆದ್ದಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ವಿದ್ಯಾರ್ಥಿನಿ ಐಶ್ವರ್ಯಾ ಪಾಯಗೊಂಡ, ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ ಗಳಿಸಿದ್ದರೂ ಹಾಸ್ಟೆಲ್ ಸೀಟು ಸಿಗದಿದ್ದಕ್ಕೆ ಸಚಿವ ಆರ್.ಬಿ. ತಿಮ್ಮಾಪುರ ಅವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರದ ನೀತಿಯನ್ನು ಪ್ರಶ್ನಿಸಿದ ಅವರು, ತನಗೆ ಸನ್ಮಾನ ಬೇಡ, ಸವಲತ್ತು ಕೊಡಿ ಎಂದು ಹೇಳಿ ಸನ್ಮಾನವನ್ನು ತಿರಸ್ಕರಿಸಿದ್ದಾರೆ.ಜಾತಿ ಸಮೀಕ್ಷೆ - ಕ್ರಿಶ್ಚಿಯನ್‌ ಧರ್ಮಕ್ಕೆ ಜಾತಿ ಸೇರ್ಪಡೆ ವಿರೋಧಿಸಿ ಬಿಜೆಪಿ ನಾಯಕರಿಂದ ರಾಜ್ಯಪಾಲರಿಗೆ ದೂರು.!

ಇತ್ತೀಚೆಗೆ ನೇಪಾಳದಲ್ಲಿ Gen Z ಯುವಜನರು ರಾಷ್ಟ್ರೀಯ ಸರ್ಕಾರವನ್ನು ಕಿತ್ತುಹಾಕಿ, ಆಡಳಿತ ಕೇಂದ್ರವನ್ನು ಧ್ವಂಸಗೊಳಿಸಿದ್ದ ಘಟನೆಯನ್ನು ನೆನಪಿಸುವಂತೆ, ರಾಜ್ಯದಲ್ಲಿಯೂ Gen Z ಯುಗದ ವಿದ್ಯಾರ್ಥಿನಿಯೊಬ್ಬಳು ಸಚಿವರ ವಿರುದ್ಧ ಸಿಡಿದೆದ್ದಿದ್ದಾಳೆ. ಉತ್ತಮ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೀಟು ನೀಡದ ಸರ್ಕಾರದ ನೀತಿಯ ವಿರುದ್ಧ ಈ ವಿದ್ಯಾರ್ಥಿನಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ.Naixa Women's Vichitra Silk Embroidery Printed Straight Kurta with Pant and Dupatta Sets (Available in Plus Size) (NX-648)

ಮುಧೋಳ ತಾಲೂಕಿನ ಪೆಟ್ಲೂರ ಗ್ರಾಮದ ಐಶ್ವರ್ಯಾ ಪಾಯಗೊಂಡ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 88ರಷ್ಟು ಅಂಕಗಳನ್ನು ಗಳಿಸಿದ್ದರು. ಅವರ ಉತ್ತಮ ಸಾಧನೆಗಾಗಿ ಹೆಬ್ಬಾಳ ಗ್ರಾಮದಲ್ಲಿ ಪಿ.ಕೆ.ಪಿ.ಎಸ್. ಬ್ಯಾಂಕ್ ಆಡಳಿತ ಮಂಡಳಿ ಸನ್ಮಾನ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಐಶ್ವರ್ಯಾ, ತಾನು ಬಡ ಕುಟುಂಬದಿಂದ ಬಂದಿದ್ದು, ಉತ್ತಮ ಅಂಕಗಳಿಸಿದ್ದರೂ ಬಿಸಿಎಂ ಹಾಸ್ಟೆಲ್‌ಗೆ ಸೀಟು ಸಿಕ್ಕಿಲ್ಲ ಎಂದು ನೋವು ತೋಡಿಕೊಂಡರು.

ಅವರು, ನಾನು ಬಡಕುಟುಂಬದ ಮಗಳು, ಕಷ್ಟಪಟ್ಟು ಓದಿ ಉತ್ತಮ ಅಂಕ ಗಳಿಸಿದ್ದೇನೆ. ಆದರೆ, ನನಗೆ ಹಾಸ್ಟೆಲ್ ಸೀಟ್ ಸಿಕ್ಕಿಲ್ಲ. ಈ ವಿಚಾರವಾಗಿ ಅಧಿಕಾರಿಗಳನ್ನು ಕೇಳಿದರೆ, 'ಪರ್ಸೆಂಟೇಜ್ ಮಾಡಿದರೆ ಆಗುವುದಿಲ್ಲ, ತಿಮ್ಮಾಪುರ ಸಾಹೇಬರು ಹೇಳಿದರೆ ಮಾತ್ರ ಆಯ್ಕೆ ಮಾಡುತ್ತೇವೆ' ಎಂದು ಹೇಳಿದರು. ನಾವೇನಾದರೂ ತಿಮ್ಮಾಪುರ ಅವರ ಕಚೇರಿಗೆ ಹೋದರೆ, ನಮ್ಮನ್ನು ಮಾತನಾಡಿಸಲೇ ಇಲ್ಲ ಎಂದು ಆರೋಪಿಸಿದರು.ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಪರಿಷ್ಕರಣೆಗೆ ಸರ್ಕಾರದ ಚುರುಕು ಹೆಜ್ಜೆ: 8 ಲಕ್ಷ ಬಿಪಿಎಲ್‌ ಕಾರ್ಡ್‌ ರದ್ದು..!

ಶೇ. 50-55 ಅಂಕ ಗಳಿಸಿದವರಿಗೆ ಹಾಸ್ಟೆಲ್ ಸೀಟ್ ಸಿಗುತ್ತದೆ. ಆದರೆ, ಶೇ. 90-95ರಷ್ಟು ಅಂಕ ಗಳಿಸಿದ ನಮ್ಮಂತವರು ಬಸ್ಸಿನಲ್ಲಿ ಅಲೆಯಬೇಕಾಗಿದೆ. ಈ ರಾಜಕೀಯ ವ್ಯವಸ್ಥೆಯಲ್ಲಿ ನಮ್ಮಂತಹ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ, ನಮ್ಮ ಕನಸುಗಳು ಕನಸಾಗಿಯೇ ಉಳಿಯುತ್ತಿವೆ ಎಂದು ಆಕೆ ಅಸಮಾಧಾನ ವ್ಯಕ್ತಪಡಿಸಿದರು.ಅನರ್ಹ ಬಿಪಿಎಲ್‌ ಕಾರ್ಡಗಳ ರದ್ದತಿ ಇಲ್ಲ, ಬೆಂಗಳೂರಿನಲ್ಲಿ ಕೆ.ಹೆಚ್. ಮುನಿಯಪ್ಪ ಸ್ಪಷ್ಟನೆ..!!