ರಾಜ್ಯದಲ್ಲಿ ನಡೆಯಲಿರುವ ಜಾತಿ ಗಣತಿಯಲ್ಲಿ ಹಿಂದೂ ಸಮುದಾಯಗಳ ಕೆಲವು ಉಪಜಾತಿಗಳನ್ನು ಒಬಿಸಿ (ಇತರ ಹಿಂದುಳಿದ ವರ್ಗಗಳು) ಪಟ್ಟಿಯಲ್ಲಿ ಕ್ರಿಶ್ಚಿಯನ್ ಧರ್ಮದ ಜಾತಿಗಳೊಂದಿಗೆ ಸೇರಿಸುತ್ತಿರುವುದನ್ನು ವಿರೋಧಿಸಿ ಬಿಜೆಪಿ ನಿಯೋಗವು ರಾಜ್ಯಪಾಲರಿಗೆ ದೂರು ಸಲ್ಲಿಸಿದೆ. ಜಾತಿ ಸಮೀಕ್ಷೆಗೂ ಮುನ್ನವೇ ಈ ಕಾಲಂ ಅನ್ನು ಕೈಬಿಡಬೇಕು ಎಂದು ನಿಯೋಗವು ಆಗ್ರಹಿಸಿದೆ ಎನ್ನಲಾಗಿದೆ. Do Not Disturb: An Addictive Psychological Thriller from the Author of The Housemaid Books Paperback – 1 July 2025
ಇದೇ ವಿಷಯವಾಗಿ ಇಂದು ಖಾಸಗಿ ಹೋಟೆಲ್‌ನಲ್ಲಿ ನಡೆದ ಬಿಜೆಪಿ ಹಿಂದುಳಿದ ವರ್ಗಗಳ ನಾಯಕರ ಸಭೆಯ ನಂತರ, ಸಂಸದ ಯದುವೀರ್ ಮತ್ತು ಶಾಸಕ ವಿ. ಸುನೀಲ್ ಕುಮಾರ್ ನೇತೃತ್ವದಲ್ಲಿ ಈ ನಿಯೋಗವು ರಾಜ್ಯಪಾಲರನ್ನು ಭೇಟಿ ಮಾಡಿದೆ ಎನ್ನಲಾಗಿದೆ. ಸಭೆಯ ಬಳಿಕ ಮಾತನಾಡಿ, ರಾಜ್ಯ ಸರ್ಕಾರವು ಒಬಿಸಿ ಹೆಸರಿನಲ್ಲಿ ಹೊಸ ಜಾತಿಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಇದು ಮುಖ್ಯಮಂತ್ರಿಗಳು ತಮ್ಮ ಸಾಮಾಜಿಕ ನಿಲುವುಗಳನ್ನು ಮರೆತಿದ್ದಾರೆ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ. ಈ ವಿಚಾರಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ನಿಯೋಗವು ರಾಜ್ಯಪಾಲರಿಗೆ ಮನವಿ ಮಾಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಪಕ್ಕದ ಮನೆಯವರ ಸಹಾಯ ಪಡೆದು ಮನೆ ದೋಚಿದ ಖತರ್ನಾಕ್ ಕಳ್ಳ ಅಂದರ್..!!
ಕ್ರಿಶ್ಚಿಯನ್ ಹೆಸರಿನಿಂದ ಯಾರಿಗೂ ತೊಂದರೆಯಾಗುವುದಿಲ್ಲ -
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್ ಅವರು, ರಾಜ್ಯದಲ್ಲಿ ಜಾತಿ ಗಣತಿ ವಿವಾದದ ಕುರಿತು ಸ್ಪಷ್ಟನೆ ನೀಡಿದ್ದು, ಕ್ರಿಶ್ಚಿಯನ್ ಹೆಸರಿನಿಂದ ತೊಂದರೆಯಾಗುವುದಿಲ್ಲ, ಜಾತಿ ಗಣತಿ - ಆಯೋಗದ ಮೇಲೆ ಯಾವುದೇ ಒತ್ತಡ ಇಲ್ಲ, ಇತರೆ ಆಕ್ಷೇಪಗಳು ಕಾನೂನುಬದ್ಧವಾಗಿಲ್ಲ ಎನ್ನಲಾಗಿದೆ. ಜಾತಿ ಸಮೀಕ್ಷೆಗೆ ಮತಾಂತರಗೊಂಡವರು ಕ್ರಿಶ್ಚಿಯನ್ ಅಂತಲೇ ಪರಿಗಣನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೃಷ್ಣಾ ಮೇಲ್ದಂಡೆ ಯೋಜನೆ: ರೈತರ ಭೂಮಿಗೆ ಮಹತ್ವದ ಮೊತ್ತ ನಿಗದಿ ಪಡಿಸಿ, ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ