Skip to main content
ವಿಡಿಯೋ
1/2
general

ಕೃಷ್ಣಾ ಮೇಲ್ದಂಡೆ ಯೋಜನೆ: ರೈತರ ಭೂಮಿಗೆ ಮಹತ್ವದ ಮೊತ್ತ ನಿಗದಿ ಪಡಿಸಿ, ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

By Shravanthi R
ಕೃಷ್ಣಾ ಮೇಲ್ದಂಡೆ ಯೋಜನೆ: ರೈತರ ಭೂಮಿಗೆ ಮಹತ್ವದ ಮೊತ್ತ ನಿಗದಿ ಪಡಿಸಿ, ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

ಈ ಬಗ್ಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್,ಇದೊಂದ ಐತಿಹಾಸಿಕ ತೀರ್ಮಾನಕ್ಕೆ ಬಂದಿದ್ದೇವೆ. ರೈತರ ಬದುಕಿಗೆ ಹೊಸ ರೂಪ ಕೊಡುವ ಸಂಕಲ್ಪ ಮಾಡಿದಂತೆ, ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಗೆ ಬದ್ದವಾಗಿದೆ ಇದಕ್ಕೆ ರೈತರು ಸಹಮತ ಸೂಚಿಸುತ್ತಾರೆಂದು ವಿಶ್ವಾಸ ಹೊಂದಿದ್ದೇವೆ ಎಂದು ಡಿಸಿಎಂ ಡಿಕೆಶಿ ಅಭಿಪ್ರಾಯ ತಿಳಿಸಿದ್ದಾರೆ ಎನ್ನಲಾಗಿದೆ.

ಬಹುಕಾಲದ ರೈತರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಕೃಷ್ಣಾ ಮೇಲ್ದಂಡೆ ಯೋಜನೆ -3 (Upper Krishna Project) ಯಡಿ ಮುಳುಗಡೆಯಾಗಲಿರುವ ಭೂಮಿಗೆ ಸರ್ಕಾರದಿಂದ ಭಾರಿ ಪರಿಹಾರ ಘೋಷಿಸಿ ಸಿಹಿ ಸುದ್ದಿ ನೀಡಿದೆ. ಒಣ ಭೂಮಿಗೆ ಎಕರೆಗೆ ₹30 ಲಕ್ಷ ಮತ್ತು ನೀರಾವರಿ ಮತ್ತು ಕೃಷಿ ಜಮೀನಿಗೆ ಎಕರೆಗೆ ₹40 ಲಕ್ಷ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಇಂದು ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕ್ಯಾಬಿನೆಟ್‌ ಮೀಟಿಂಗ್‌ನಲ್ಲಿ ಪರಿಹಾರ ಮೊತ್ತ ನಿಗದಿ ಪಡಿಸಿ ಪರಿಹಾರ ಘೋಷಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ MLAಗೆ ಬಿಗ್ ಶಾಕ್ ನೀಡಿದ ಹೈಕೋರ್ಟ್: ಶಾಸಕ ನಂಜೇಗೌಡ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್: ಕಾರಣ ಹೀಗಿದೆ

ಹಲವು ಸುತ್ತಿನ ಸಂಧಾನ ನಡೆಸಿ ವಿಫಲವಾದ ಬಳಿಕ ರೈತರ ಹೋರಾಟಕ್ಕೆ ಮಣಿದು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ. ಇಂದು ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಕಾಲುವೆ ನಿರ್ಮಾಣಕ್ಕೆ 51,000 ಬೇಕಾಗಿದೆ ಎಂದರು. ಭೂಮಿ ಮುಳುಗಡೆ, ಕಾಲುವೆ ನಿರ್ಮಾಣ ಪುನರ್‌ವಸತಿಗೆ ಒಟ್ಟು, 1,33,000 ಎಕರೆ ಜಮೀನು ಅಗತ್ಯವಿದೆ. ಇದರಿಂದಾಗಿ 20 ಗ್ರಾಮಗಳು ಮುಳುಗಡೆಯಾಗಿಲಿದ್ದು, 70,000 ಕೋಟಿ ಖರ್ಚಾಗಲಿದೆ ಎಂದು ಮಾಹಿತಿ ನೀಡಲಾಗಿದೆ. ಯೋಜನೆಯಿಂದ ರೈತರ ಭೂಮಿಗೆ ನೀರು ಸಿಗಲಿದೆ. ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಈ ಬಗ್ಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್,ಇದೊಂದ ಐತಿಹಾಸಿಕ ತೀರ್ಮಾನಕ್ಕೆ ಬಂದಿದ್ದೇವೆ. ರೈತರ ಬದುಕಿಗೆ ಹೊಸ ರೂಪ ಕೊಡುವ ಸಂಕಲ್ಪ ಮಾಡಿದಂತೆ, ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಗೆ ಬದ್ದವಾಗಿದೆ ಇದಕ್ಕೆ ರೈತರು ಸಹಮತ ಸೂಚಿಸುತ್ತಾರೆಂದು ವಿಶ್ವಾಸ ಹೊಂದಿದ್ದೇವೆ ಎಂದು ಡಿಸಿಎಂ ಡಿಕೆಶಿ ಅಭಿಪ್ರಾಯ ತಿಳಿಸಿದ್ದಾರೆ ಎನ್ನಲಾಗಿದೆ. Ward D: A Taut Psychological Thriller from the Author of the sensational Housemaid series Paperback – 14 May 2025

ಈ ಯೋಜನೆಯಿಂದ ಸುಮಾರು 1,33,867 ಎಕರೆ ಜಮೀನು ಭೂಸ್ವಾಧೀನವಾಗಲಿದ್ದು, 75,000 ಕ್ಕೂ ಅಧಿಕ ಭೂಮಿ ಮುಳುಗಡೆ ಸಾಧ್ಯತೆ ಇದೆ ಎಂದು ವರದಿ ಮಾಹಿತಿ ಒದಗಿಸಲಾಗಿದೆ ಎನ್ನಲಾಗಿದೆ. ಐದು ಲಕ್ಷ ಹೆಕ್ಟೇರ್‌ ಪ್ರದೇಶಕ್ಕೂ  ಹೆಚ್ಚು ಕಡೆಗಳಲ್ಲಿ ನೀರಾವರಿ ಒದಗಲಿದೆ. ಡ್ಯಾಂ 519. 6  ಮೀಟರ್‌  524.256 ಗೆ ಎತ್ತರಿಸಲು ನ್ಯಾಯಾಧೀಕರಣ ತೀರ್ಪು ನೀಡಿದೆ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಬಿಡದಿ ಇಂಟಿಗ್ರೇಟೆಡ್‌ ಟೌನ್‌ಶಿಪ್‌ ಯೋಜನೆ ವಿರೋಧಿಸಿ ರೈತರ ಪ್ರತಿಭಟನೆ ತೀವ್ರ; ವಿಷ ಸೇವನೆಗೆ ಯತ್ನಿಸಿದ ರೈತ ಮಹಿಳೆಯರು.!