ರಾಮನಗರ: ಜಿಲ್ಲೆಯ ಬಿಡದಿಯ ಭೈರಮಂಗಲ ವ್ಯಾಪ್ತಿಯಲ್ಲಿ ಬಿಡದಿ ಇಂಟಿಗ್ರೇಟೆಡ್ ಟೌನ್‌ಶಿಪ್ ಯೋಜನೆಗಾಗಿ ಸರ್ಕಾರವು 9,000 ಎಕರೆ ಭೂಸ್ವಾಧೀನ ಮಾಡಿಕೊಳ್ಳಲು ಹೊರಟಿರುವುದನ್ನು ವಿರೋಧಿಸಿ, ನಡೆಯುತ್ತಿರುವ ರೈತರ ಹೋರಾಟ ಐದನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿಭಟನೆ ವೇಳೆ ರೈತ ಮಹಿಳೆಯರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ ಎಂದು ವರದಿಯಾಗಿದೆ. ತಕ್ಷಣ ಸ್ಥಳದಲ್ಲಿದ್ದ ಪೊಲೀಸರು ಅವರನ್ನು ತಡೆದು ಹೆಚ್ಚಿನ ಅನಾಹುತವಾಗುವುದನ್ನು ತಪ್ಪಿಸಿದ್ದಾರೆ ಎನ್ನಲಾಗಿದೆ. The Boyfriend: The Riveting New Psychological Thriller from BESTSELLING author of THE HOUSEMAID Paperback – 1 October 2024
ಭೂಸ್ವಾಧೀನಕ್ಕೆ ತೀವ್ರ ವಿರೋಧ
ರಾಮನಗರ ಜಿಲ್ಲೆಯ ಭೈರಮಂಗಲ ಮತ್ತು ಕೆಂಚನಕುಪ್ಪೆ ಗ್ರಾಮಗಳ ಬಳಿ ಒಟ್ಟು 9,000 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಈ ಹಿಂದೆ ಅಹೋರಾತ್ರಿ ಧರಣಿ ನಡೆಸಲಾಗಿತ್ತು. ಇಂದು ಬೆಂಗಳೂರು ಗ್ರಾಮಾಂತರ ಭಾಗದ ಸಂಸದ ಮಂಜುನಾಥ್ ಹಾಗೂ ವಿಪಕ್ಷ ನಾಯಕ ಆರ್. ಅಶೋಕ್ ಅವರು ಪ್ರತಿಭಟನೆಯ ಮುಂದಾಳತ್ವ ವಹಿಸಿ ಭಾಗಿಯಾಗಿದ್ದರು., ಇದೀಗ ಇಂದು ಈ ಪ್ರತಿಭಟನೆ ಆತಂಕಕ್ಕೀಡು ಮಾಡಿದ್ದು, ಇಲ್ಲಿನ ರೈತ ಮಹಿಳೆಯರು ಹೋರಾಟ ಮುಂದುವರೆಸಿ, ವಿಷಸೇವನೆಗೆ ಯತ್ನಿಸಿದ್ದರು. ಇದನ್ನೂ ಓದಿ: ಬಿಜೆಪಿ ನಾಯಕರಿಂದ ರಾಜ್ಯ ಸರ್ಕಾರದ ಜಾತಿ ಗಣತಿ ವಿರೋಧ – ಖಾಸಗಿ ಹೋಟೆಲ್‌ನಲ್ಲಿ ಮಹತ್ವದ ಸಭೆ
ತೀವ್ರಗೊಂಡಿದೆ ಹೋರಾಟ -
ಇತ್ತೀಚೆಗೆ ನಡೆದ ದೇವನಹಳ್ಳಿ ಭೂಸ್ವಾಧೀನ ಹೋರಾಟದ ಬಳಿಕ ಇದೀಗ ರಾಮನಗರದ ಬಿಡದಿಯಲ್ಲಿ ರೈತ ಹೋರಾಟ ತೀವ್ರಗೊಂಡಿದೆ. ಡಿಕೆ ಶಿವಕುಮಾರ್ ಅವರ ಆಸಕ್ತಿ ಕಾರಣ, ಕಳೆದ 15 ದಿನಗಳಿಂದ ಕಾರ್ಯಾಚರಣೆಗಳು ಆರಂಭಗೊಂಡಿದ್ದು, ಇಂದು ಜೆಎಂಸಿ ಸರ್ವೆ ನಡೆಸಿದ ಹಿನ್ನಲೆಯಲ್ಲಿ, ರೈತರು ಮತ್ತಷ್ಟು ಆಕ್ರೋಶಗೊಂಡಿದ್ದು, ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ಜಮೀರ್ ಅಹ್ಮದ್ ಕೇಸ್ - ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ಗೆ ಶಾಕ್ ಕೊಟ್ಟ ಲೋಕಾ ನೋಟಿಸ್.!
ಸಣ್ಣ ಪುಟ್ಟ ಜಮೀನುಗಳನ್ನು ಕಳೆದುಕೊಂಡರೆ ರೈತರು ಏನು ಮಾಡಬೇಕು? ಕಳೆದ 20 ವರ್ಷಗಳಿಂದ ಒತ್ತುವರಿ ಸಮಸ್ಯೆಯಿಂದ ಬದುಕುವುದು ಕಷ್ಟವಾಗಿದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಈ ಮಧ್ಯೆ, ಸರ್ಕಾರದ ನಡೆಯನ್ನು ನಿರೀಕ್ಷಿಸಲಾಗುತ್ತಿದೆ.