ವಸತಿ ಸಚಿವ ಜಮೀರ್ ಅಹಮದ್ ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗೂ ನೋಟಿಸ್ ಕೊಡಲಾಗಿದೆ. ಅವರ ಜೊತೆಗೆ ಮೂರ್ನಾಲ್ಕು ವರ್ಷಗಳಿಂದ ಹಣದ ವ್ಯವಹಾರ ನಡೆಸಿದ ಹಿನ್ನಲೆ ಅವರಿಗೂ ಈ ಪ್ರಕರಣದಲ್ಲಿ ಪಾಲಿರುವ ಸಂದೇಹವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಈ ಬಗ್ಗೆ ವಿಚಾರಣೆಗೆ ಹಾಜರಾಗಲು ಸಮಯ ಬೇಕು ಎಂದ ಸಚಿವರು ಹಿಂಜರಿದಿದ್ದಾರೆಯೇ? ಎನ್ನಲಾಗಿದೆ. It Happens When You Expect It The Least, Romance Novel by Arunima Rathore, Paperback Paperback – Picture Book, 28 February 2025
ಆರೋಗ್ಯ ಇಲಾಖೆ ಸಚಿವರಾಗಿರುವ ದಿನೇಶ್ ಗುಂಡೂರಾವ್ ಅವರಿಗೆ ನೋಟಿಸ್ ನೀಡಿದ ಲೋಕಾಯುಕ್ತ ಡಿವೈಎಸ್ಪಿ ಸತೀಶ್ ಕುಮಾರ್, ದಿನೇಶ್ ಗುಂಡೂರಾವ್ ಅವರು ಜಮೀರ್ ಅವರೊಟ್ಟಿಗೆ ಈ ಹಿಂದೆ ಮೂರು ನಾಲ್ಕು ವರ್ಷಗಳಿಂದ ಆರ್ಥಿಕ ವ್ಯವಹಾರ ಹೊಂದಿದ್ದಾರೆ, ಹೀಗಾಗಿ ದಾಖಲೆ ಸಮೇತ ವಿಚಾರಣೆಗೆ ಹಾಜರಾಗಲು ಲೋಕಾಯುಕ್ತ ನೋಟಿಸ್ ಕೊಟ್ಟಿದೆ. ಈ ಬಳಿಕ ವಿಚಾರಣೆ ಹಾಜರಾಗಲು ಕಾಲಾವಕಾಶ ಕೋರಿದ ದಿನೇಶ್ ಗುಂಡೂರಾವ್ ದಾಖಲೆ ಕ್ರೋಡೀಕರಿಸಲು ಸಮಯಮಿತಿ ಕೋರಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮುಡಾ ಹಗರಣ ಪ್ರಕರಣ: ಮಾಜಿ ಆಯುಕ್ತ ದಿನೇಶ್ ಕುಮಾರ್ ವಿರುದ್ಧ ತನಿಖೆಗೆ ಅನುಮತಿ - ವಿಚಾರಣೆ ಸೆ. 29 ಕ್ಕೆ ಮುಂದೂಡಿಕೆ
ಈ ಹಿಂದೆ ನಟಿ ರಾಧಿಕ ಕುಮಾರ್‌ಸ್ವಾಮಿ, ಕೆಜಿಎಫ್ ಬಾಬು ವಿಚಾರಣೆ ನಡೆದಿತ್ತು. ಈ ಇಬ್ಬರು ಸಚಿವರೊಟ್ಟಿಗೆ ಕೋಟಿ ಲೆಕ್ಕದಲ್ಲಿ ಹಣ ವಿನಿಮಯದ ಆರೋಪದಡಿ ತನಿಖೆಗೆ ಒಳಪಟ್ಟಿದ್ದರು. ಇದೀಗ ಆರೋಗ್ಯ ಸಚಿವರಿಗೆ ಸಂಕಷ್ಟ ಎದುರಾಗಿದ್ದು, ಲೋಕಾಯುಕ್ತ ಪೋಲಿಸರು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ. ಕೋಟಿ ಕೋಟಿ ಹಣದ ವ್ಯವಹಾರದ ಮಾತುಕತೆ ನಡೆಸಿರುವ ಶಂಕೆಯಿಂದ ದಾಕಲೆ ಸಮೇತರಾಗಿ ವಿಚಾರಣೆಗೆ ಹಾಜರಾಗುವಂತೆ ಇಂದು ತಿಳಿಸಲಾಗಿದೆ ಎನ್ನಲಾಗಿದೆ.
ಜಮೀರ್ ಅಹಮದ್ ಅವರು ಈ ಹಿಂದೆ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದು, ಸಮರ್ಥಿಸಿಕೊಂಡಿದ್ದರು ಎನ್ನಲಾಗಿದೆ. ಈ ಮುಖೇನ, ಸಚಿವ ದಿನೇಶ್ ಗುಂಡೂರಾವ್ ಅವರ ಹೇಳಿಕೆ ಹಾಗೂ ಮಾಹಿತಿ ಈ ಪ್ರಕರಣಕ್ಕೆ ಹೊಸ ತಿರುವು ತಂದುಕೊಡಲಿದೆ ಎನ್ನಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮನೆ ಲೀಸ್‌ಗೆ ಪಡೆಯೋ ಮುನ್ನ ಎಚ್ಚರ: ರಾಜನಾಥ್ ಸಿಂಗ್ ಜೊತೆ ಪೋಟೋ: 60 ಕೋಟಿಗೂ ಅಧಿಕ ವಂಚನೆ; ಇಲ್ಲಿದೆ ಮಾಹಿತಿ