Skip to main content
ವಿಡಿಯೋ
politics

ಬಿಜೆಪಿ ನಾಯಕರಿಂದ ರಾಜ್ಯ ಸರ್ಕಾರದ ಜಾತಿ ಗಣತಿ ವಿರೋಧ – ಖಾಸಗಿ ಹೋಟೆಲ್‌ನಲ್ಲಿ ಮಹತ್ವದ ಸಭೆ

By Shravanthi R
ಬಿಜೆಪಿ ನಾಯಕರಿಂದ ರಾಜ್ಯ ಸರ್ಕಾರದ ಜಾತಿ ಗಣತಿ ವಿರೋಧ – ಖಾಸಗಿ ಹೋಟೆಲ್‌ನಲ್ಲಿ ಮಹತ್ವದ ಸಭೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಜಾತಿ ಸಮೀಕ್ಷೆಯ ಜಾತಿಗಳ ಪ್ರಕಟಣೆಯಲ್ಲಿ ಕ್ರೈಸ್ತ ಸಮುದಾಯಗಳ ಪೈಕಿ ಹಿಂದೂ ಜಾತಿಗಳನ್ನು ಸೇರಿಸಾಗಿದೆ ಎನ್ನುವುದರ ವಿರೋಧವಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಬಿ. ಎಸ್‌ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಲಿಂಗಾಯತರ ಸಭೆ ಹಾಗೂ ವಿ. ಸುನಿಲ್‌ ಕುಮಾರ್‌ ಅವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ನಾಯಕರ ಸಭೆ ಏರ್ಪಾಟಾಗಿದೆ ಎಂದು ತಿಳಿಸಲಾಗಿದೆ.

ಬೆಂಗಳೂರು: ರಾಜ್ಯದಲ್ಲಿ ಜಾತಿ ಗಣತಿ ಆರಂಭಕ್ಕೂ ಮುನ್ನವೇ ಜಾತಿ ವರ್ಗೀಕರಣದ ಬಗೆಗೆ ಆಕ್ಷೇಪಗಳು ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ತೀರ್ಮಾನಿಸಿದ್ದಾರೆ. ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆಯುತ್ತಿರುವ ಸಭೆಯಲ್ಲಿ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ಸಲುವಾಗಿ ಎರಡು ಪ್ರಮುಖ ಸಭೆಗಳನ್ನು ನಡೆಸಲಾಗುತ್ತಿದೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಜಾತಿ ಸಮೀಕ್ಷೆಯ ಜಾತಿಗಳ ಪ್ರಕಟಣೆಯಲ್ಲಿ ಕ್ರೈಸ್ತ ಸಮುದಾಯಗಳ ಪೈಕಿ ಹಿಂದೂ ಜಾತಿಗಳನ್ನು ಸೇರಿಸಾಗಿದೆ ಎನ್ನುವುದರ ವಿರೋಧವಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಬಿ. ಎಸ್‌ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಲಿಂಗಾಯತರ ಸಭೆ ಹಾಗೂ ವಿ. ಸುನಿಲ್‌ ಕುಮಾರ್‌ ಅವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ನಾಯಕರ ಸಭೆ ಏರ್ಪಾಟಾಗಿದೆ ಎಂದು ತಿಳಿಸಲಾಗಿದೆ. 

ಜಾತಿಗಣತಿ ಬಗ್ಗೆ ಆಕ್ಷೇಪ -

ಜಾತಿ ಗಣತಿಯಲ್ಲಿ ಕ್ರಿಶ್ಚಿಯನ್‌ ಧರ್ಮದವರನ್ನು ಮತ್ತು ಹಿಂದೂ ಉಪಜಾತಿಗಳನ್ನು ಸೇರಿಸಿರುವುದನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿದೆ. ರಾಜ್ಯದಲ್ಲಿ ಇದೇ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರವರೆಗೆ ನಡೆಯಲಿರುವ ಜಾತಿ ಗಣತಿಯು ಸರ್ಕಾರದ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆಯ ಭಾಗವಾಗಿದೆ. ಆದರೆ ಈ ಸಮೀಕ್ಷೆಯಲ್ಲಿ ಕ್ರಿಶ್ಚಿಯನ್ ಸಮುದಾಯಗಳೊಟ್ಟಿಗೆ ಹಿಂದೂ ಧರ್ಮ ಸೇರ್ಪಡೆಯಂಥ ಕೆಲವು ಹಿಂದೂ ಉಪಜಾತಿಗಳನ್ನು ಸೇರಿಸಿರುವ ಬಗ್ಗೆ ಬಿಜೆಪಿ ಬೆಂಬಲಿತ ಹಿಂದುಳಿದ ವರ್ಗಗಳ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿಷಯಗಳ ಕುರಿತು ಚರ್ಚಿಸಲು ಬಿಜೆಪಿ ನಾಯಕರು ಸಭೆ ನಡೆಸಿದ್ದು, ಸರ್ಕಾರದ ವಿರುದ್ಧ ಹೋರಾಟಕ್ಕೆ ನಿರ್ಧರಿಸಿದ್ದಾರೆ ಎನ್ನಲಾಗಿದೆ.The Book You Wish Your Parents Had Read (and Your Children Will Be Glad That You Did) : THE #1 SUNDAY TIMES BESTSELLER Paperback – 14 January 2021

ಪ್ರಮುಖ ನಾಯಕರ ಸಭೆಗಳು

ಯಡಿಯೂರಪ್ಪ ನೇತೃತ್ವದಲ್ಲಿ ಲಿಂಗಾಯತ ಸಭೆ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ವಿ. ಸೋಮಣ್ಣ ಸೇರಿದಂತೆ ಹಲವು ಪ್ರಮುಖ ಲಿಂಗಾಯತ ನಾಯಕರು ಭಾಗವಹಿಸಿ ಈ ಕುರಿತು ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಪ್ರಮುಖವಾಗಿ ಸಾಮಾಜಿಕ ಸಂದೇಶ ನೀಡುವ ಪ್ರಭಾವ ಬೀರುವ ವರದಿಗಳ ಬಗ್ಗೆ ಬಿಜೆಪಿಯ ನಿಲುವುಗಳು ಇರಲಿದೆ ಎನ್ನಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮನೆ ಲೀಸ್‌ಗೆ ಪಡೆಯುವವರು ಎಚ್ಚರಿಕೆಯಿಂದಿರಿ: ಕೋಟಿಗಟ್ಟಲೆ ವಂಚನೆ!

ಸುನೀಲ್ ಕುಮಾರ್ ನೇತೃತ್ವದಲ್ಲಿ ಒಬಿಸಿ ನಾಯಕರ ಸಭೆ: ವಿ. ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ (ಒಬಿಸಿ) ನಾಯಕರ ಸಭೆಯೂ ನಡೆಯಲಿದ್ದು, ಸಂಸದ ಯದುವೀರ್, ರವಿಕುಮಾರ್ ಮುಂತಾದ ನಾಯಕರು ಇದರಲ್ಲಿ ಭಾಗಿಯಾಗಿರುವುದಾಗಿ ತಿಳಿದು ಬಂದಿದೆ. ಬಿಜೆಪಿ ನಾಯಕರ ಪ್ರಕಾರ, ಮುಖ್ಯಮಂತ್ರಿಗಳು ಜಾತಿ ಲೆಕ್ಕಾಚಾರದ ಮೂಲಕ "ಧರ್ಮ ಒಡೆಯುವ ಕೆಲಸ" ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಎಚ್.ವಿಶ್ವನಾಥ್ ಅಸಮಾಧಾನ... ಕುರುಬ ಮೀಸಲಾತಿ ವಿಚಾರಕ್ಕೆ ಗುಡುಗು..!

ಈ ಕುರಿತು ಸಭೆಯ ನಂತರ ಬಿಜೆಪಿ ನಾಯಕರು ಪತ್ರಿಕಾಗೋಷ್ಠಿ ನಡೆಸಿ, ಸರ್ಕಾರದ ಜಾತಿಗಣತಿ ನಿರ್ಧಾರವನ್ನು ಖಂಡಿಸಲಾಗಿದೆ. ಈ ರೀತಿಯಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ಕಾಂಗ್ರೆಸ್‌ ಸರ್ಕಾರವು  ಹಿಂದೂ ವಿರೋಧಿ ಎನ್ನುವ ಆರೋಪವನ್ನು ಮತ್ತೊಮ್ಮೆ ಕೇಳಿಬರುತ್ತಲಿದೆ ಎನ್ನಲಾಗಿದೆ.