ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀವು ಸುಖವಾಗಿದ್ದಾಗ ಕುರುಬ ಸಮುದಾಯವನ್ನು ದೂರ ಇಟ್ಟಿರಿ. ಈಗ ಕಷ್ಟ ಬಂದಾಗ ಅವರನ್ನು ಹತ್ತಿರ ಕರೆಯುತ್ತಿದ್ದೀರಿ ಎಂದು ಅವರು ಸಿದ್ದರಾಮಯ್ಯ ಅವರಿಗೆ ಚುಚ್ಚು ಮಾತು ಹೇಳಿದರು.ರಾಜ್ಯದಲ್ಲಿ ಹೊಸ ಜಾತಿ ಗಣತಿ: 1.75 ಲಕ್ಷ ಶಿಕ್ಷಕರ ನೇಮಕ...ಸೆಪ್ಟೆಂಬರ್ 22 ರಿಂದ ಸಮೀಕ್ಷೆ ಪ್ರಾರಂಭ!
ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಹಿಂದಿನ ನಿಲುವನ್ನು ವಿಶ್ವನಾಥ್ ಪ್ರಶ್ನಿಸಿದರು. ಹಿಂದೆ ಈ ಹೋರಾಟಕ್ಕೆ ಅವರು ವಿರೋಧ ವ್ಯಕ್ತಪಡಿಸಿದ್ದರು. ಕಾಗಿನೆಲೆಯಿಂದ ಬೆಂಗಳೂರಿಗೆ ನಡೆದ 350 ಕಿ.ಮೀ. ಪಾದಯಾತ್ರೆಯ ಅಗತ್ಯವೇನು ಎಂದು ಪ್ರಶ್ನಿಸಿದ್ದರು. ಆದರೆ ಈಗ ಅದೇ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಿದ್ದಾರೆ ಎಂದು ವಿಶ್ಲೇಷಿಸಿದರು.Naixa Women's Red Viscose Silk Embroidered Straight Kurta with Pant and Dupatta Sets (Available in Plus Size) (NX-546)
ವಾಸ್ತವವಾಗಿ, ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ (ಆರ್‌ಜಿಐ) ಗೆ ಶಿಫಾರಸು ಮಾಡುವ ಬದಲು, ನೇರವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ವಿಶ್ವನಾಥ್ ಆರೋಪಿಸಿದರು. ಸಿದ್ದರಾಮಯ್ಯ ಅವರು ಕುರುಬ ಸಮುದಾಯವನ್ನು ತಮ್ಮ ಗುರಾಣಿಯಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು. ಈ ನಡೆ ಕಾಗಿನೆಲೆ ಕನಕ ಗುರುಪೀಠಾಧ್ಯಕ್ಷರನ್ನು ಬೀದಿಗೆ ತಳ್ಳಲಿದೆ ಎಂದು ಎಚ್ಚರಿಸಿದರು.
“ಸ್ವಾಮೀಜಿಯವರೇ, ನೀವು ಸಿದ್ದರಾಮಯ್ಯ ಅವರ ಕಾಲಾಳು ಅಲ್ಲ, ಕಾಂಗ್ರೆಸ್ ಪಕ್ಷದ ಜೀತದಾಳೂ ಅಲ್ಲ. ನೀವು ಹೋರಾಟಕ್ಕೆ ಬೀದಿಗಿಳಿದರೆ ಪರಿಸ್ಥಿತಿ ತಲೆದಂಡ ಆಗಬಹುದು” ಎಂದು ವಿಶ್ವನಾಥ್ ಹೇಳಿದರು. ಮೀಸಲಾತಿ ಕುರಿತು ಮಾತನಾಡಿದ ಅವರು, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಅಧಿಕಾರ ಮಾತ್ರ ರಾಜ್ಯ ಸರ್ಕಾರಕ್ಕಿದೆ ಎಂದರು. ಪ್ರಧಾನಮಂತ್ರಿಗಳ ಬಳಿ ಈ ವಿಷಯ ಪ್ರಸ್ತಾಪಿಸಲು ಯಾಕೆ ಹಿಂಜರಿದರು? ಎಂದು ಪ್ರಶ್ನಿಸಿದರು.ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರ ತನಕ ಜಾತಿಗಣತಿ ಸಮೀಕ್ಷೆ: ಸಿದ್ದರಾಮಯ್ಯ ಅವರಿಂದ x ನಲ್ಲಿ ಮಾಹಿತಿ
ಖರ್ಗೆ ಮತ್ತು ಅವರ ಪುತ್ರರಿಗೂ ಮೀಸಲಾತಿ, ಸಾಮಾನ್ಯ ಜನರಿಗೂ ಮೀಸಲಾತಿ ಎಂಬ ಭೇದವನ್ನು ಅವರು ಖಂಡಿಸಿದರು. ಅಂಬೇಡ್ಕರ್ ಅವರು ಮೀಸಲಾತಿ ಪಡೆದವರು ಅದನ್ನು ಬೇರೆಯವರಿಗೆ ಬಿಟ್ಟುಕೊಡಬೇಕು ಎಂದಿದ್ದರು. ರಾಜಕಾರಣಿಗಳು ಕೇವಲ ಭಾಷಣ ಮಾಡಬಾರದು. ಸೌಲಭ್ಯ ಪಡೆದವರು ಅದನ್ನು ಪಡೆಯದವರಿಗೆ ಬಿಟ್ಟುಕೊಡಬೇಕು. ನಾನು ಮೀಸಲಾತಿಯನ್ನು ಬಿಟ್ಟುಕೊಡಲು ಸಿದ್ಧನಿದ್ದೇನೆ ಎಂದು ವಿಶ್ವನಾಥ್ ಘೋಷಿಸಿದರು.
ಬಾನು ಮುಷ್ತಾಕ್ ದಸರಾ ಮಹೋತ್ಸವ ಉದ್ಘಾಟನೆಗೆ ಹೈಕೋರ್ಟ್ ಹಸಿರು ನಿಶಾನೆ ತೋರಿರುವುದನ್ನು ವಿಶ್ವನಾಥ್ ಸ್ವಾಗತಿಸಿದರು. ಮುನ್ನ ಈ ಆಯ್ಕೆಯನ್ನು ವಿರೋಧಿಸಿ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ನ್ಯಾಯಾಲಯ ಅನುಮತಿ ನೀಡಿದ್ದರಿಂದ ಇದು ಸ್ವಾಗತಾರ್ಹ ಬೆಳವಣಿಗೆ ಎಂದು ಅವರು ಅಭಿಪ್ರಾಯಪಟ್ಟರು.ಹಿಂದೂ ಧರ್ಮದಲ್ಲಿ ಸಮಾನತೆ ಇದ್ದಿದ್ದರೆ ಏಕೆ ಬೇರೆ ಧರ್ಮಕ್ಕೆ ಮತಾಂತರ ಆಗುತ್ತಿದ್ದರು? ಎಂಬ ಮುಖ್ಯಮಂತ್ರಿ ಉತ್ತರಕ್ಕೆ ಬಿ. ವೈ ವಿಜಯೇಂದ್ರ ಆಕ್ರೋಶ