Skip to main content
ವಿಡಿಯೋ
1/2
local

ಪಕ್ಕದ ಮನೆಯವರ  ಸಹಾಯ ಪಡೆದು ಮನೆ ದೋಚಿದ ಖತರ್ನಾಕ್‌ ಕಳ್ಳ ಅಂದರ್‌..!!

By Pavitra Ganapathi Baradavalli
ಪಕ್ಕದ ಮನೆಯವರ  ಸಹಾಯ ಪಡೆದು ಮನೆ ದೋಚಿದ ಖತರ್ನಾಕ್‌ ಕಳ್ಳ ಅಂದರ್‌..!!

ದಿನಬೆಳಗಾದರೆ ಸಾಕು ಕಳ್ಳತನ ದರೋಡೆ ಸುಲಿಗೆಯಂತಹ ಪ್ರಕರಣಗಳೇ ಹೆಚ್ಚಾಗಿ ದಾಖಲಾಗುತ್ತಲೇ ಇರುತ್ತವೆ. ಅಂತಹದರಲ್ಲಿ ಬೆಂಗಳೂರಲ್ಲಿ ಖತರ್ನಾಕ್‌ ರೀತಿಯಲ್ಲಿ ಮನೆಯ ಕಳ್ಳತನ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಿನಬೆಳಗಾದರೆ ಸಾಕು ಕಳ್ಳತನ ದರೋಡೆ ಸುಲಿಗೆಯಂತಹ ಪ್ರಕರಣಗಳೇ ಹೆಚ್ಚಾಗಿ ದಾಖಲಾಗುತ್ತಲೇ ಇರುತ್ತವೆ. ಅಂತಹದರಲ್ಲಿ ಬೆಂಗಳೂರಲ್ಲಿ ಖತರ್ನಾಕ್‌ ರೀತಿಯಲ್ಲಿ ಮನೆಯ ಕಳ್ಳತನ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಂದು ಮನೆಯನ್ನು ಕಳ್ಳತನ ಮಾಡಲು ಪಕ್ಕದ ಮನೆಯವರ ನಂಬಿಕೆ ಗಳಿಸಿ ಕಳ್ಳತನ ಮಾಡಿದ ಕಿಲಾಡಿ ಕಳ್ಳ ಈಗ ಪೊಲೀಸರ ಅತಿಥಿಯಾಗಿದ್ದಾನೆ.ಇದನ್ನೂ ಓದಿ: ಬಿಡದಿ ಇಂಟಿಗ್ರೇಟೆಡ್‌ ಟೌನ್‌ಶಿಪ್‌ ಯೋಜನೆ ವಿರೋಧಿಸಿ ರೈತರ ಪ್ರತಿಭಟನೆ ತೀವ್ರ; ವಿಷ ಸೇವನೆಗೆ ಯತ್ನಿಸಿದ ರೈತ ಮಹಿಳೆಯರು.!


ಬೆಂಗಳೂರು ಸಂಜಯ್‌ ನಗರ ಪೊಲೀಸರು ಭರ್ಜರಿ ಕಾರ್ಯಾರಣೆ ನಡೆಸಿ ಯಾಸಿನ್‌ ಎಂಬ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯಿಂದ ಬರೋಬ್ಬರಿ 15 ಲಕ್ಷ ಮೌಲ್ಯದ  150 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದ್ದು, ಮನೆಯನ್ನು ಹೇಗೆಲ್ಲಾ ದೋಚಿದ್ದ ಎನ್ನುವ ಪ್ಲ್ಯಾನ್‌ ಈಗ ಪೊಲೀಸರ ಮುಂದೆ ರಿವೀಲ್‌ ಆಗಿದೆ..ಇದನ್ನೂ ಓದಿ: ಧರ್ಮಸ್ಥಳ ಪ್ರಕರಣದಲ್ಲಿ ಹೊಸ ತಿರುವು...SIT ತನಿಖೆ ಮಧ್ಯೆ ಹೈಕೋರ್ಟ್ ನೋಟಿಸ್!


ಪಕ್ಕದ ಮನೆಯವರಿಗೆ ಸಹಾಯ ಮಾಡುವ ನೆಪ ಮಾಡಿಕೊಂಡು ನಂಬಿಕೆ ಗಳಿಸಿದ್ದ ಈ ಖತರ್ನಾಕ್‌ ಕಳ್ಳ ನಂತರ ಮನೆಯನ್ನೇ ಖಾಲಿ ಮಾಡಿದ್ದಾನೆ. ಮೊದಲು ಮನೆಗೆಲಸದವರ ಮೇಲೆಯೇ ದೂರು ನೀಡಿದ್ದರು ನಂತರ ತನಿಖೆ ವೇಳೆ ಪಕ್ಕದ ಮನೆಯವನಿಂದ ನಡೆದ ಕೈಚಳಕ ಬಯಲಿಗೆ ಬಂದಿದೆ. ಆಗ ಕಳ್ಳ ಪಕ್ಕದ ಮನೆಯವನ ಸಹಾಯ ಪಡೆದು ಮನೆ ದೋಚಿರುವುದು ಬಯಲಾಗಿದೆ. ಸದ್ಯ ಸಂಜಯ್‌ ನಗರ ಪೊಲೀಸರಿಂದ ತನಿಖೆ ಮುಮದುವರೆದಿದೆ.
Yashika Women's Fancy Banarasi Kanjivaram Art Silk Saree with Blouse Pieces|| AZ-YS-OG-ASHOKA-P