ಧರ್ಮಸ್ಥಳ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್ಐಟಿ) ಅಧಿಕಾರಿಗಳು, ನೇತ್ರಾವತಿ ಸ್ನಾನಘಟ್ಟದ ಬಳಿಯ ಬಂಗ್ಲೆಗುಡ್ಡೆ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಇದರ ಜೊತೆಗೆ, ಕಾನೂನು ಅಭಿಪ್ರಾಯ ಪಡೆಯಲು ಸಹ ಚಿಂತನೆ ನಡೆಸಲಾಗುತ್ತಿದೆ.ಇದನ್ನೂ ಓದಿ: ಕಾಂಗ್ರೆಸ್ MLAಗೆ ಬಿಗ್ ಶಾಕ್ ನೀಡಿದ ಹೈಕೋರ್ಟ್: ಶಾಸಕ ನಂಜೇಗೌಡ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್: ಕಾರಣ ಹೀಗಿದೆ
ಈ ಬೆಳವಣಿಗೆಗಳ ನಡುವೆ, ಕೆಲ ಸ್ಥಳೀಯರು ಎಸ್ಐಟಿ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಎಸ್ಐಟಿಗೆ ನೋಟಿಸ್ ಜಾರಿ ಮಾಡಿದೆ. ದೂರುದಾರರು ಸಲ್ಲಿಸಿದ ಅರ್ಜಿಯಲ್ಲಿ, ಈ ಹಿಂದೆ ಎಸ್ಐಟಿ ತಮ್ಮ ದೂರನ್ನು ಸಮರ್ಪಕವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದ್ದರು. ಆದರೆ, ಎಸ್ಐಟಿ ಈ ದೂರನ್ನು ಈಗಾಗಲೇ ವಿಚಾರಣೆ ನಡೆಸಿ ಹಿಂಬರಹ ನೀಡಿರುವುದಾಗಿ ವರದಿಯಾಗಿದೆ.ಇದನ್ನೂ ಓದಿ: ಬಿಜೆಪಿಯವರಿಗೆ ಪಾಕಿಸ್ತಾನ, ಧರ್ಮ ಅನ್ನೋ ವಿಚಾರಗಳ ಬಗ್ಗೆ ಮಾತಾಡದೇ ರಾಜಕೀಯ ಮಾಡೋಕೆ ಗೊತ್ತೇ ಇಲ್ಲ: ಸಂತೋಷ್ ಲಾಡ್ ಕಿಡಿ..!!
ಧರ್ಮಸ್ಥಳದಲ್ಲಿ ಶವ ಹೂತಿರುವ ಜಾಗವನ್ನು ಗುರುತಿಸಿ, ಉತ್ಖನನ ನಡೆಸುವಂತೆ ಕೋರಿ ಇಬ್ಬರು ಸ್ಥಳೀಯರಾದ ಪಾಂಗಾಳದ ಪುರಂದರ ಗೌಡ ಮತ್ತು ತುಕರಾಮ ಗೌಡ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಚಿನ್ನಯ್ಯನ ಶವವನ್ನು ಹೂಳುವುದನ್ನು ತಾವು ನೋಡಿದ್ದೇವೆ ಎಂದು ಅರ್ಜಿದಾರರು ಹೇಳಿಕೊಂಡಿದ್ದರು. ತಾವು ತೋರಿಸುವ ಜಾಗದಲ್ಲಿ ಉತ್ಖನನ ನಡೆಸುವಂತೆ ಸಹ ಅವರು ಮನವಿ ಮಾಡಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಎಸ್ಐಟಿಗೆ ನೋಟಿಸ್ ಜಾರಿ ಮಾಡಿದೆ.ಇದನ್ನೂ ಓದಿ: 46 ಹಿಂದು ಉಪಜಾತಿಗಳನ್ನು ಕ್ರೈಸ್ತರ ಪಟ್ಟಿಯಲ್ಲಿ ತೋರಿಸುವ ಯತ್ನ..!
ಆದರೆ, ದೂರುದಾರರ ಆರೋಪಕ್ಕೆ ಸಂಬಂಧಿಸಿದಂತೆ ಒಂದು ಹೊಸ ತಿರುವು ಸಿಕ್ಕಿದೆ. ಎಸ್ಐಟಿ ಈಗಾಗಲೇ ಈ ದೂರಿನ ಕುರಿತು ತನಿಖೆ ನಡೆಸಿ ಮುಕ್ತಾಯಗೊಳಿಸಿದ್ದು, ದೂರುದಾರರಿಗೆ ಹಿಂಬರಹದ ಮೂಲಕ ಸಂಪೂರ್ಣ ವಿವರಣೆ ನೀಡಿದೆ ಎನ್ನಲಾಗುತ್ತಿದೆ. ಎಸ್ಐಟಿ ನೀಡಿರುವ ಹಿಂಬರಹದಲ್ಲಿ, ದೂರುದಾರರು ನೀಡಿದ ಮುಂದುವರಿದ ಹೇಳಿಕೆಯಲ್ಲಿ ಪಾಂಗಳ ಕ್ರಾಸ್‌ನಲ್ಲಿ ಪಂಚಾಯಿತಿ ಅಧಿಕಾರಿಗಳು ರಸ್ತೆಯ ಬದಿಯಲ್ಲಿ ಶವ ಹೂಳುತ್ತಿದ್ದಾರೆ ಎಂದು ಆರೋಪಿಸಿರುವುದು ದಾಖಲಾಗಿದೆ.ಇದನ್ನೂ ಓದಿ: ಶಿವಾಜಿನಗರದ ಮೆಟ್ರೋ ಸ್ಟೇಷನ್‌ಗೆ ಶಿವಾಜಿ ಮಹಾರಾಜರ ಹೆಸರಿಡಿ- ಬಿಜೆಪಿ ಎಂಎಲ್‌ಸಿ ಡಾ. ಎಂ.ಜಿ ಮುಳೆ ಒತ್ತಾಯ!
ಆದರೆ, ದಾಖಲೆಗಳ ಪರಿಶೀಲನೆ ಹಾಗೂ ಅಧಿಕಾರಿಗಳ ವಿಚಾರಣೆಯಿಂದ ಈ ಸ್ಥಳವು ಸರ್ಕಾರದಿಂದ ಮಂಜೂರಾದ ಸ್ಮಶಾನದ ಜಾಗವಾಗಿರುವುದು ಕಂಡುಬಂದಿದೆ ಎಂದು ಎಸ್ಐಟಿ ಸ್ಪಷ್ಟಪಡಿಸಿದೆ. ಅಲ್ಲದೆ, ದೂರುದಾರರು ಶವವನ್ನು ಹೂತಿರುವ ಜಾಗ ಈಗ ಎಸ್ಐಟಿ ತನಿಖೆಯಾಗುತ್ತಿರುವ ಪಾಯಿಂಟ್ ನಂಬರ್ 13 ಸ್ಥಳವಾಗಿದ್ದು, ಅಲ್ಲಿ ಈಗಾಗಲೇ ಪರಿಶೀಲನೆ ನಡೆಯುತ್ತಿದೆ. ಆದ್ದರಿಂದ ನಾವು ಪುನಃ ಜಾಗವನ್ನು ತೋರಿಸುವ ಅವಶ್ಯಕತೆ ಇರುವುದಿಲ್ಲ ಎಂದು ದೂರುದಾರರು ತಮ್ಮ ಮುಂದುವರಿದ ಹೇಳಿಕೆಯಲ್ಲಿ ನುಡಿದಿದ್ದೀರಿ ಎಂದು ಹಿಂಬರಹದಲ್ಲಿ ಉಲ್ಲೇಖಿಸಲಾಗಿದೆ.Yashika Women's Fancy Banarasi Kanjivaram Art Silk Saree with Blouse Pieces||Yellow Coloured Kanjivaram Saree|| AZ-YS-OG-YUKTI YELLOW